ಯರಗಟ್ಟಿ

ಸಂಗೀತ ಸಂಜೆ ಕಾರ್ಯಕ್ರಮ

ಸಂಗೀತ ಸಂಜೆ ಕಾರ್ಯಕ್ರಮ

ಯರಗಟ್ಟಿ,10 : ಪಟ್ಟಣದ ಮಹಾಂತ ನಗರದ ಗಜಾನನ ಯುವಕ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. 

ಮಾಜಿ ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಗೀತ ಕಲಾವಿದ ಸರಿಗಮಪ ವಿಜೇತೆ ಓಂಕಾರ ಪತ್ತಾರ, ಗಾಯಕಿ ಸುಧಾ ಮಧುಶ್ರೀ ಗದಗ, ಡ್ರೈವಿಂಗ್ ಲವರ್ ಪ್ರವಿಣ, ಸಂತೋಷ, ಉದಯಕುಮಾರ ಹಣಬರ, ಮಂಜು, ವಿವಿಧ ಚನಚಿತ್ರಿ ಗೀತೆಗಳನ್ನು ಹಾಗೂ ಜಾನಪದ ಹಾಡುಗಳನ್ನು ಹಾಡಿ ಪ್ರೇಕ್ಷಕರ ಮನರಂಜಿಸಿದರು. 

ಈ ವೇಳೆ ಮಹಾಂತೇಶ ಜಕಾತಿ, ವಿಶಾಲಗೌಡ ಪಾಟೀಲ, ಕುಮಾರ ಜಕಾತಿ, ಪಿ. ಎಚ್‌. ಪಾಟೀಲ, ಚಂದ್ರಕಾಂತ ಅನಂತಪೂರ ಈರಣ್ಣಾ ಮಠಪತಿ, ಚಂದ್ರಶೇಖರ ಹಾದಿಮನಿ, ಶಿವಾನಂದ ಯರಗಣವಿ, ಡಾ. ಎಂ. ವಿ. ಪಟ್ಟಣ, ಶ್ರೀಕಾಂತ ಇಟ್ನಾಳ, ಟಿ. ಎಂ. ಕಾಮಣ್ಣವರ, ಮೋಹನ ಹಾದಿಮನಿ, ಚೇತನ ಜಕಾತಿ, ಕೃಷ್ಣಮೂರ್ತಿ ತೋರಗಲ್, ಶಿವಾನಂದ ಪಟ್ಟಣಶೆಟ್ಟಿ ಸೇರಿದಂತೆ ಗಜಾನನ ಮಂಡಳಿಯ ಸರ್ವಸದಸ್ಯರು ಇದ್ದರು. 


ಸುದ್ದಿ ಓದಿ