ಶಿಗ್ಗಾವ್

ಮಕರ ಸಂಕ್ರಾತಿ ಪ್ರಯುಕ್ತ ಸಂಗೀತ ಕಾರ್ಯಕ್ರಮ

ಮಕರ ಸಂಕ್ರಾತಿ ಪ್ರಯುಕ್ತ ಸಂಗೀತ ಕಾರ್ಯಕ್ರಮ

ಶಿಗ್ಗಾವಿ 13 : ಮೃತ್ಯುಂಜಯ ಗ್ರಾಮೀಣಾಭಿವೃದ್ದಿ ಸಂಸ್ಥೆ ಶಿಗ್ಗಾವಿ, ಕನಸ್ಸು ಸಂಸ್ಥೆ ಶಿಗ್ಗಾವಿ, ಬೆಳಕು ಸಂಸ್ಥೆ ಶಿಗ್ಗಾವಿ, ಕರ್ನಾಟಕ ಪತ್ರಕರ್ತರ ಸಂಘ ಶಿಗ್ಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ಪಟ್ಟಣದ ಫೀನಿಕ್ಸ ಶಾಲೆಯಲ್ಲಿ ಖ್ಯಾತ ರಂಗಕರ್ಮಿ, ಗಾಯಕ ಹಾಗೂ ಅರಿವು ಮನೆಯ ನಾದ ಮಣಿನಾಲ್ಕುರ ಅವರ ತಂಡದ ವತಿಯಿಂದ ಕತ್ತಲ ಹಾಡು ವಿಶೇಷ ಸಂಗೀತ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಹಾಡಿನ ಜೊತೆಗೆ ಪರಿಸರ ಜಾಗೃತಿ, ಮಾನವೀಯ ಮೌಲ್ಯಗಳು, ಸಮಾನತೆ, ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಮಕ್ಕಳ, ತಂದೆ ತಾಯಿಯ, ಸಮಾಜದ ಹೊಣೆಗಾರಿಕೆ ಬಗ್ಗೆ ಅರಿವು ಮೂಡಿಸಲಾಯಿತು ಜೊತೆಗೆ ಸಂವಾದ ನಡೆಯಿತು.

ಮೃತ್ಯುಂಜಯ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಡಾ.ಎಮ್.ಎಮ್. ತಿರ್ಲಾಪೂರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಡಾ.ರಾಣಿ.ಎಂ. ತಿರ್ಲಾಪೂರ, ಶಿಗ್ಗಾವಿ ಐಟಿಐ ಕಾಲೇಜಿನ ಪ್ರೋ ಶಶಿಕಾಂತ ರಾಠೋಡ, ಕವಿತಾ ರಾಠೋಡ, ಅಂದಲಗಿ ಗ್ರಾಪಂ ಸದಸ್ಯ ವೀರಭದ್ರಗೌಡ ಪಾಟೀಲ್, ಗೀರಿಜಾ ಡವಗಿ ಸೇರಿದಂತೆ ಕಲಾ ತಂಡದ ಸದಸ್ಯರು ಸಂಘಟನೆಗಳ ಪದಾಧಿಕಾರಿಗಳು, ವೃದ್ಧಾಶ್ರಮದ ವೃದ್ದರು ಇದ್ದರು.

ಸುದ್ದಿ ಓದಿ