ಯರಗಟ್ಟಿ

ಅಭಿವೃದ್ಧಿ ಕಾಮಗಾರಿಗಳಿಗೆ ಮುರುಘೇಂದ್ರಶ್ರೀ ಭೂಮಿ ಪೂಜೆ

ಅಭಿವೃದ್ಧಿ ಕಾಮಗಾರಿಗಳಿಗೆ ಮುರುಘೇಂದ್ರಶ್ರೀ ಭೂಮಿ ಪೂಜೆ

ಲೋಕದರ್ಶನ ವರದಿ 

ಯರಗಟ್ಟಿ  08: ಮುನವಳ್ಳಿ ಪಟ್ಟಣದಲ್ಲಿ ಮುಖ್ಯ ಮಂತ್ರಿಗಳ ಅಮೃತ ನಗರೋತ್ಥಾನ (ಮುನ್ಸಿಪಾಲಟಿ) ಯೋಜನೆ ಹಂತ 4ರ ಅಡಿಯಲ್ಲಿ ಪುರಸಭೆಗೆ ಮಂಜೂರಾದ ಕ್ರಿಯಾಯೋಜನೆ ಪ್ರಕಾರ ಕಾಮಗಾರಿಗಳ ಭೂಮಿಪೂಜಾ ಕಾರ್ಯಕ್ರಮ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಜರುಗಿತು.  


ಪುರಸಭೆ ಮುಖ್ಯಾಧಿಕಾರಿ ರಮೇಶ ಹಿಟ್ಟಣಗಿ ಮಾತನಾಡುತ್ತ ರಸ್ತೆ ಅಭಿವೃದ್ಧಿ ಕಾಮಗಾರಿಗೆ 378.70 ಲಕ್ಷ ರೂ.ಗಳು, ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿಗೆ 67.31 ಲಕ್ಷ ರೂ.ಗಳು, ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ 95 ಲಕ್ಷ ರೂ.ಗಳು, ಪರಿಶಿಷ್ಟ ಜಾತಿ, ಪಂಗಡ ಇತರ ಬಡಜನರ ಕಲ್ಯಾಣ ಹಾಗೂ ವಿಕಲಚೇತನರ ಕಲ್ಯಾಣ ಕಾರ್ಯಕ್ರಮ 308 ಲಕ್ಷ ರೂ.ಗಳು, 900 ಲಕ್ಷ ರೂ. ಗಳಲ್ಲಿ ಮಲೀನ ನೀರು ಶುದ್ಧಿಕರಣ ಘಟಕ ಮತ್ತು ತತ್ಸಂಬಂದಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಪುರಸಭೆ ಕಂದಾಯ ಅಧಿಕಾರಿ ಅನಿಲ ಗಿಡ್ನಂದಿ, ಮನೋಹರ ಅಜಮನಿ, ಯಲ್ಲಪ್ಪ ಭಜಂತ್ರಿ, ವೀರೂ ಹೂಲಿ, ಬಸವರಾಜ ಹಲಗಿ, ಅಡಿವೆಪ್ಪ ಬಿರಸಿದ್ದಿ, ಗಣಪತಿ ಪೋಳ, ಪ್ರಶಾಂತ ಕಾಗಲ, ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರವೀಣ ವಾಯ್‌. ಸಾಯನೇಕರ, ಬಸವರಾಜ ಹಿರೇಮಠ, ಸೇರಿದಂತೆ ಪುರಸಭೆಯವರು ಇದ್ದರು. 


ಸುದ್ದಿ ಓದಿ