ಯುವಕನ ಕೊಲೆ: 24 ಗಂಟೆಯಲ್ಲಿ ಆರೋಪಿಗಳ ಬಂಧನ
ಯರಗಟ್ಟಿ 06: ಸಮೀಪದ ನುಗ್ಗಾನಟ್ಟಿ ಗ್ರಾಮದಲ್ಲಿ ಮಂಗಳವಾರ ತಡ ರಾತ್ರಿ ಬಸವರಾಜ ಗುರುಲಿಂಗಪ್ಪ ಮುದ್ದಣ್ಣವರ (23) ಎಂಬ ಯುವಕನ ಕೊಲೆಯಾದ ಘಟನೆ ನಡೆದಿದೆ.
ಜನ್ಮ ದಿನಕ್ಕೆ ಎಂದು ಕರೆದು ಸ್ನೇಹಿತನನ್ನೆ ಭೀಕರವಾಗಿ ಕೊಲೆ ಮಾಡಿದ ಘಟನೆ ವಯಕ್ತಿಕ ಜಗಳಕ್ಕೆ ತಿರುಗಿ ನಾಲ್ಕೈದು ಜನ ಸೇರಿಕೊಂಡು ಬಸವರಾಜನನ್ನು ಕೊಲೆ ಮಾಡಿ ಪರಾರಿ ಯಾಗಿದ್ದರು. ಈ ಕುರಿತು ಮುರಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಮುರಗೋಡ ಪೊಲೀಸರು 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಕ್ಕೆ ಬೆಳಗಾವಿ ಎಸ್.ಪಿ ಡಾ. ಭೀಮಾಶಂಕರ ಗುಳೇದ, ರಾಮದುರ್ಗ ಡಿಎಸ್ಪಿ ಪಾಂಡುರಂಗಯ್ಯ ಮುರಗೋಡ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ.