ಯರಗಟ್ಟಿ

ಯುವಕನ ಕೊಲೆ

ಯುವಕನ ಕೊಲೆ

ಯರಗಟ್ಟಿ 11 ಅನೈತಿಕ ಸಂಬಂಧ ಶಂಕೆಯ ಹಿನ್ನೆಲೆಯಲ್ಲಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಶನಿವಾರ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.ಬಸವರಾಜ ಯಲ್ಲಪ್ಪ ಕಾಳಿ (21) ಕೊಲೆಯಾದ ಯುವಕ. ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದ ಪರಶುರಾಮ ನಾಗಪ್ಪ ಕಾಳಿ (23) ಆರೋಪಿ. ಈ ಇಬ್ಬರೂ ಸಹೋದರ ಸಂಬಂಧಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬಸವರಾಜನು ಆರೋಪಿಯ ಚಿಕ್ಕಮ್ಮನ ಮಗಳ ಜತೆಗೆ ಅನೈತಿಕ ಸಂಬಂಧ ಹೊಂದಿ, ಯುವತಿಯನ್ನು ಗರ್ಭಿಣಿ ಮಾಡಿದ್ದ. ಈ ಸಿಟ್ಟಿನಿಂದ ಆರೋಪಿಯು ಗ್ರಾಮದ ಹೊರವಲಯದ ಗುಡ್ಡಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಮುರಗೋಡ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ. 


ಸುದ್ದಿ ಓದಿ