ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಬೆಳಗಾವಿ : ಬಹುಕೋಟಿ ವಂಚನೆ ಆರೋಪ ಪ್ರಕರಣ. ಆರೋಪಿ ಶಿವಾನಂದ ನೀಲಣ್ಣವರ್ ಗೆ ಅವರಿಗೆ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಬೆಂಗಳೂರು 93ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ. 3 ಲಕ್ಷ ವೈಯಕ್ತಿಕ ಬಾಂಡ್, ಭಾರತ ಬಿಟ್ಟು ಹೋಗದಂತೆ, ತನಿಖೆಗೆ ಸಹಕಾರ ನೀಡುವಂತೆ ನಿಲಣ್ಣವರ ಅವರಿಗೆ ನ್ಯಾಯಾಲಯವು ಸೂಚನೆ ನೀಡಿದೆ.
ಸೋಮವಾರ ಅಥವಾ ಮಂಗಳವಾರ ಶಿವಾನಂದ ನೀಲಣ್ಣವರ ಬಿಡುಗಡೆ ಸಾಧ್ಯತೆ ಇದೆ.
ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ನೀಲಣ್ಣವರ್ ಅವರು ಸಾರ್ವಜನಿಕರು, ಮಾಜಿ ಸೈನಿಕರಿಂದ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಸಾವಿರಾರು ಕೋಟಿ ಹೂಡಿಕೆ ಮಾಡಿಕೊಂಡಿದ್ದರು.
ಶಿವಾನಂದ ನೀಲಣ್ಣವರ್ ಪರ ವಕೀಲ ಆರ್.ಜಿ ಪಾಟೀಲ್, ಸುಧೀರ್ ನಿರ್ವಾಣಿ ವಕಾಲತ್ತು ವಹಿಸಿದ್ದರು.