ತಾಳಿಕೋಟಿ

ರಜಪೂತ ಸಮಾಜದಿಂದ ಮುಕ್ತಿಧಾಮ ಸ್ವಚ್ಛತಾ ಕಾರ್ಯ

ರಜಪೂತ ಸಮಾಜದಿಂದ ಮುಕ್ತಿಧಾಮ ಸ್ವಚ್ಛತಾ ಕಾರ್ಯ


ತಾಳಿಕೋಟಿ19:  ಪಟ್ಟಣದ ರಜಪೂತ ಸಮಾಜದ ಬಾಂಧವರು ಮುಕ್ತಿಧಾಮ ಸಮಿತಿಯ ಸಹಕಾರದೊಂದಿಗೆ ಇಲ್ಲಿಯ ಡೋಣಿ ನದಿ ಹತ್ತಿರಇರುವ ಮುಕ್ತಿಧಾಮದ ಸ್ವಚ್ಛತಾ ಕಾರ್ಯವನ್ನು ನಡೆಸಿದರು. 

ಈ ಸಂದರ್ಭದಲ್ಲಿ ರಜಪೂತ ಸಮಾಜದಅಧ್ಯಕ್ಷ ಹರಿಸಿಂಗ್ ಮೂಲಿಮನಿ ಮಾತನಾಡಿ ಪ್ರತಿಯೊಬ್ಬ ಮುನುಷ್ಯನಿಗೆ ಸಾವು ನಿಶ್ಚಿತವಾಗಿದೆ. ಮುಕ್ತಿಧಾಮ ನಮ್ಮೆಲ್ಲರ ಅಂತಿಮ ನೆಲೆಯಾಗಿದೆ ನಾವು ಹೇಗೆ ನಮ್ಮ ಜೀವನದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳತ್ತೇವೆ ಅದೇರೀತಿ ನಮ್ಮಅಂತಿಮ ನೆಲೆಯಾದ ಮುಕ್ತಿಧಾಮದ ಸ್ವಚ್ಛ ಹಾಗೂ ಅದರ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳಬೇಕಾಗಿದೆ. 

ಸದರಿ ಮುಕ್ತಿಧಾಮವು ಈ ಪೂರ್ವ ಮಲೀನತೆ ಹಾಗೂ ಮುಳ್ಳುಗಿಡಗಂಟೆಗಳಿಂದ ಕೂಡಿತ್ತು ಇದನ್ನು  ಒಂದು ಸುಂದರ ಶಾಂತಿಯಧಾಮವನ್ನಾಗಿಸಲು ಮುಕ್ತಿಧಾಮ ಸಮತಿಯು ಎಲ್ಲ ಸಮಾಜ ಬಾಂಧವರ ಸಹಾಯ-ಸಹಕಾರ ಪಡೆದುಕೊಂಡು ನಿರಂತರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ, ರಜಪೂತ ಸಮಾಜದ ಬಾಂಧವರು ಸದಾ ಈ ಸಮಿತಿಗೆ ಬೆನ್ನಲುಬಾಗಿ ನಿಲ್ಲುತ್ತದೆ ಎಂದು ಈ ಸಮಯದಲ್ಲಿ ನಾವು ತಿಳಿಸಲು ಬಯಸುತ್ತೇವೆಎಂದರು. 

ಈ ಶ್ರಮದಾನ ಕಾಯದಲ್ಲಿ ಸಮಾಜದ ಸದಸ್ಯ ಗೋವಿಂದ್‌ಸಿಂಗ್ ಮೂಲಿಮನಿ, ವಿಜಯಸಿಂಗ್ ಹಜೇರಿ, ಜೈಸಿಂಗ್ ಮೂಲಿಮನಿ, ರತನ್ ಕೊಕಟನೂರ, ಬಾಬು ಹಜೇರಿ, ಭರತ ಹಜೇರಿ, ಅಮಿತ್ ಮನಗೂಳಿ, ಭರತ್ ಹಜೇರಿ, ವಿಠಲ ಹಜೇರಿ, ದೀಲೀಪ ಹಜೇರಿ, ರಮೇಶ ಗೌಡಗೇರಿ, ಮಾನಸಿಂಗ್ ಕೊಕಟನೂರ, ಕೆಸರಸಿಂಗ್ ಹಜೇರಿ, ಬಾಲಾಜಿ ವಿಜಾಪೂರ, ಅರುಣದಡೇದ, ಗಂಗು ಕೊಕಟನೂರ, ಸೂರಜ, ರಾಜು, ನವೀನ, ನಿಖಿಲ, ಆಕಾಶ, ಸುನೀಲ, ಅನೀಲ, ರಾಘವೇಂದ್ರ ವಿಜಾಪೂರ ಮುಕ್ತಿಧಾಮ ಸಮಿತಿಯ ವಾಸುದೇವ ಹೆಬಸೂರರಾಜು ಹಂಚಾಟೆ ಉಪಸ್ಥಿತರಿದ್ದರು. 


ಸುದ್ದಿ ಓದಿ