ಜಮಖಂಡಿ

ಮೊಹರಂ ಹಬ್ಬ: ಹಿಂದು- ಮುಸ್ಲಿಂ ಭಾಂದವರು ಆಚರಣೆ

ಮೊಹರಂ ಹಬ್ಬ: ಹಿಂದು- ಮುಸ್ಲಿಂ ಭಾಂದವರು ಆಚರಣೆ

ಜಮಖಂಡಿ 17:  ನಗರದಲ್ಲಿ ಮೊಹರಂ ಹಬ್ಬವನ್ನು ಹಿಂದು,ಮುಸ್ಲಿಂ ಭಾಂದವರು ಸೇರಿಕೊಂಡು ಆಚರಣೆ ಮಾಡುವ ಮೂಲಕ ಭಾವೈಕತೆಯನ್ನು ಮೆರೆದರು. 

ಮೊಹರಂ ಆಚರಣೆಯ ದಿನದಂದು ಮುಸ್ಲಿಮ ಭಾಂದವರು ಹಾಗೂ ಹಿಂದುಗಳು ಚಿಕ್ಕಮಕ್ಕಳಿಗೆ ಲಾಡಿಯನ್ನು ಧರಿಸಿ ಫಕೀರರಾಗುವ ಪದ್ದತಿಯೂ ಇದ್ದು. ಮುಸ್ಲಿಂ ಕುಟುಂಬದ ಐವರು ಫಕೀರರಿಗೆ ಕರೆದು ಮಾದಲಿ,ಚೊಂಗೆ ಹೀಗೆ ಸಿಹಿ ಅಡುಗೆಯನ್ನು ಮಾಡಿ ಊಟ ಬಡಿಸುವರು.ಭಕ್ತರು ಶ್ರದ್ಧಾಭಕ್ತಿಯಿಂದ ಲೋಬಾನ್ ಹಾಕಿ ದೀನ್ ಹಾಕುವರು. ಸಿಹಿಯಾದ ಸಕ್ಕರೆಯ ಪ್ರಸಾದವನ್ನು ಬಂದ ಭಕ್ತರಿಗೆ ಹಂಚುವ ಮೂಲಕ ಮೊಹರಂ ಹಬ್ಬವನ್ನು ಆಚರಿಸುವರು. 


ಸುದ್ದಿ ಓದಿ