ತಾಳಿಕೋಟಿ

ಮೊಹರಂ ಹಿಂದೂ-ಮುಸ್ಲೀಂ ಭಾವೈಕ್ಯತೆಯ ಪ್ರತೀಕ: ರಾಮಲಿಂಗಯ್ಯ ಶ್ರೀ

ಮೊಹರಂ ಹಿಂದೂ-ಮುಸ್ಲೀಂ ಭಾವೈಕ್ಯತೆಯ  ಪ್ರತೀಕ: ರಾಮಲಿಂಗಯ್ಯ ಶ್ರೀ

ತಾಳಿಕೋಟಿ 08: ಶತಶತಮಾನಗಳಿಂದ ಆಚರಿಸುತ್ತಾ ಬಂದಿರುವ ಮೊಹರಂ ಹಬ್ಬವು ಕೇವಲ ಒಂದು ಜಾತಿ-ಧರ್ಮದವರಿಗೆ ಸೀಮಿತವಾಗಿರದೆ ಎಲ್ಲ ಧರ್ಮೀಯರು ಒಂದಾಗಿ ಆಚರಿಸುವ ಹಬ್ಬವಾಗಿದೆ ಎಂದು ಚಬನೂರಿನ ಜ್ಯೋತಿಷ್ಯರತ್ನ ಪ.ಪೂ.ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ತಿಳಿಸಿದರು.

ಮೊಹರಂ ಹಬ್ಬದ ನಿಮಿತ್ಯ ಚಬನೂರು ಗ್ರಾಮದಲ್ಲಿ ಆಯೋಜಿಸಿದ ಭಾವೈಕ್ಯತಾ ಸಭೆಯಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಚಬನೂರು ಗ್ರಾಮ ಭಾವೈಕ್ಯತೆಗೆ ಹೆಸರುವಾಸಿ ಗ್ರಾಮ ಇಲ್ಲಿ ಹಿಂದೂ-ಮುಸ್ಲೀಂ ಎಂಬ ಭೇದ ಭಾವ ಇಲ್ಲದೆ ಎಲ್ಲರೂ ಒಂದಾಗಿ ಬಾಳುತ್ತೀದ್ದೆವೆ. ಈ ಗ್ರಾಮದಲ್ಲಿ ಹಿಂದೆ ಟಿಪ್ಪು ಸುಲ್ತಾನ ಸರ್ಕಲ್ ನಿರ್ಮಿಸುವ ಕುರಿತು ವಿವಾದ ಎದ್ದಾಗ ನಾನೂ ಸ್ವತಃ ಮುಂದೆ ನಿಂತು ವೃತ್ತವನ್ನು ನಿರ್ಮಿಸಲು ಸಹಕರಿಸಿದ್ದೆನೆ. ಇದೇ ರೀತಿಯಾಗಿ ಗ್ರಾಮದ ಎಲ್ಲ ಧರ್ಮದವರನ್ನೂ ತೆಗೆದುಕೊಂಡು ದೇಶದ ಮಾಹಾ ಪುರುಷರ ಸರ್ಕಲ್ಗಳನ್ನು ನಿರ್ಮಿಸಿದ್ದೆನೆ. ಯಾವ ರೀತಿಯಾಗಿ ಬಸವಣ್ಣ ಕಲ್ಯಾಣದಲ್ಲಿ ಸತ್ಕಾರ್ಯಗಳ ಮೂಲಕ ಬಸವಕಲ್ಯಾಣವನ್ನಾಗಿ ಮಾಡಿದನೊ ಅದೆ ರೀತಿಯಾಗಿ ಈ ಗ್ರಾಮವನ್ನು ಕಲ್ಯಾಣ ಗ್ರಾಮವನ್ನಾಗಿ ಮಾಡುವುದು ನನ್ನ ಆಶೆಯಾಗಿದೆ ಎಂದರು. 

ನಾಡಿನ ಖ್ಯಾತ ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ ಅವರು ಮಾತನಾಡಿ ಹಿಂದೂ-ಮುಸ್ಲೀಂರು ಈ ದೇಶದ ಎರಡು ಕಣ್ಣುಗಳಿದ್ದಂತೆ ಒಂದು ಕಣ್ಣಿಗೆ ನೊವಾದರೆ ಇನ್ನೊಂದು ಕಣ್ಣು ಆ ನೋವನ್ನು ಅನುಭವಿಸುತ್ತದೆ. ಹೀಗೆ ನಾವೇಲ್ಲರೂ ಕೂಡಿ ಬಾಳಿದಾಗ ಮಾತ್ರ ಈ ಮಹಾನ್ ದೇಶ ಪ್ರಗತಿ ಕಾಣಲು ಸಾಧ್ಯ ವಿದೆ ಎಂದರು. 

ಈ ಸೌಹಾರ್ಧ ಸಮಾರಂಭದಲ್ಲಿ ಚಬನೂರು ಗ್ರಾಮದ ಸರ್ವ ಧರ್ಮದ ಗಣ್ಯರು, ಗುರು ಹಿರಿಯರು, ಹಾಗೂ ಅಪಾರ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರು 

ಸುದ್ದಿ ಓದಿ