ತಾಳಿಕೋಟಿ

ರಾಜ್ಯದಲ್ಲಿ ಮಾದರಿ ಮತಕ್ಷೇತ್ರವನ್ನಾಗಿ ನಿರ್ಮಾಣ

ರಾಜ್ಯದಲ್ಲಿ ಮಾದರಿ ಮತಕ್ಷೇತ್ರವನ್ನಾಗಿ ನಿರ್ಮಾಣ
ತಾಳಿಕೋಟೆ ಲೋಕೋಪಯೋಗಿ ಇಲಾಖೆ, ಪೌರಾಡಳಿತ ಇಲಾಖೆ ಸಹಯೋಗದಲ್ಲಿ 8 ಕೋಟಿ ರೂ ವೆಚ್ಚದಲ್ಲಿ ಶಿವಾಜಿ ವೃತ್ತದಿಂದ ವಿದ್ಯಾಾರತಿ

ತಾಳಿಕೋಟೆ 23: ರಾಜ್ಯದಲ್ಲಿ ಅತಿ ಹಿಂದುಳಿದ ಮತಕ್ಷೇತ್ರವಾಗಿದ್ದ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಂದ ಭರದಿಂದ ನಡೆಯುತ್ತಿವೆ. ಮೂರು ವರ್ಷದಲ್ಲಿ ಅತಿ ಹೆಚ್ಚು ಅನುದಾನ ಮಂಜೂರಾಗಿದೆ. ಮುಂದಿನ 2 ವರ್ಷದಲ್ಲಿ ಅವಧಿಯಲ್ಲಿ ಹೆಚ್ಚುವರಿ ಅನುದಾನ ತಂದು ರಾಜ್ಯದಲ್ಲಿಯೇ ಮಾದರಿ ಮತಕ್ಷೇತ್ರವನ್ನಾಗಿ ಮಾಡಲಾಗುವದು ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ, ಕರ್ನಾಟರ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು.  

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆ, ಪೌರಾಡಳಿತ ಇಲಾಖೆ ಸಹಯೋಗದಲ್ಲಿ 8 ಕೋಟಿ ರೂ ವೆಚ್ಚದಲ್ಲಿ ಶಿವಾಜಿ ವೃತ್ತದಿಂದ ವಿದ್ಯಾಭಾರತಿ ಶಾಲೆಯವರೆಗಿನ ಸಿಸಿ ರಸ್ತೆ, ಚರಂಡಿ ಮತ್ತು ಅಲಂಕಾರಿಕ ವಿದ್ಯುತ್ ಬೀದೀದೀಪಗಳಿಗೆ ಚಾಲನೆ ನೀಡಿ ಮಾತನಾಡಿದರು.  

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ನಾನು ಈಗ ಮಾಡಿದ್ದು ಸ್ವಲ್ಪವೇ ಕೆಲಸವಾಗಿದೆ. ನನ್ನ ಮೇಲೆ ‘ಭರವಸೆ ಇಟ್ಟು ಆಯ್ಕೆ ಮಾಡಿದ್ದಿರಿ. ಆ ‘ಭರವಸೆಯನ್ನು ನಾನು ಎಂದಿಗೂ ಸುಳ್ಳು ಮಾಡಲಾರೆ. ಅದಕ್ಕೆ ಇಂಬು ನೀಡುವಂತೆ ಮೂರು ವರ್ಷದ ಅವಧಿಯಲ್ಲಿ ಕೆಲಸಗಳು. ಇನ್ನು ಸಾಕಷ್ಟು ಕಾಮಗಾರಿಗಳು ಬಾಕಿ ಇವೆ. ತಾಲೂಕಿನ 10 ಸಾವಿರ ಯುವಕರಿಗೆ ಉದ್ಯೋಗ ಸೃಷ್ಠಿಯಾಗುವಂತ ಕಾರ್ಖಾನೆಗಳ ಸ್ಥಾಪನೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ 280 ಕೋಟಿ ವೆಚ್ಚದಲ್ಲಿ ವಿದ್ಯುತ್ ಸ್ಟೇಷನ್ ನಿರ್ಮಾಣ ನಡೆಯುತ್ತಿದೆ. ಪ್ರತಿ ಗ್ರಾಮದಲ್ಲಿಯೂ ಸಹ ಮನೆ ಮನೆ ಶುದ್ದ ಕುಡಿಯುವ ನೀರು ಒದಗಿಸುವ ಕಾಮಗಾರಿ ನಡೆಯುತ್ತಿದೆ. ರಾಜ್ಯದಲ್ಲಿಯೇ ರಸ್ತೆಗಳ ಸುಧಾರಣೆ ಕಾಮಗಾರಿಗಳಿಗೆ ಅತಿ ಹೆಚ್ಚು ಅನುದಾನ ಮುದ್ದೇಬಿಹಾಳ ಕ್ಷೇತ್ರಕ್ಕೆ ಮಂಜೂರಾಗಿದೆ. ಹೀಗಾಗಿ ಮತಕ್ಷೇತ್ರದಲ್ಲಿ ಬಹುತೇಕ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. 58 ಹಳ್ಳಿಗಳಿಗೆ 88 ಕೋಟಿ ಅನುದಾನದಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿ ಆರಂಭವಾಗಿದೆ.  ತಾಳಿಕೋಟೆ ಪಟ್ಟಣ ಅಬಿವೃದ್ಧಿಯ ವೇಗ ಹೆಚ್ಚಿಸಲು 10 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಿ ಹಂತದಲ್ಲಿದೆ ಇದರಿಂದ ಮಾದರಿ ನವ ಪಟ್ಟಣ ನಿರ್ಮಾಣವಾಗುತ್ತದೆ. ಕೃಷಿ ಆಧಾರಿತ ಕಾರ್ಖಾನೆಗಳು ಆರಂಭಕ್ಕೆ ಮುಂದಾಗಿದ್ದು, 350 ಕೋಟಿ ವೆಚ್ಚದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಅನುಮೋದನೆಯಾಗಿದೆ. ಮೋದಿ ಅವರ ಕನಸಿನಂತೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸಲು ಪ್ರಯತ್ನ ನಡೆಯುತ್ತಿದೆ. ಕರೊನಾ ಸಂಕಷ್ಠದಲ್ಲಿ ಜನ ಇರುವದರಿಂದ ವಿದ್ಯಾರ್ಥಿಗಳಿಗೆ ಅನಾಕೂಲ ಕಲ್ಪಿಸುವ ಉದ್ದೇಶದಿಂದ 70 ಸಾವಿರ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಗುವದು. ಶಾಸಕ ಸ್ಥಾನ ನೀವು ಅಧಿಕಾರ ಅಲ್ಲ. ಆವಾಬ್ದಾರಿಯಾಗಿದೆ. ನಿಮ್ಮ ಆಸೆಯಂತೆ ಕರ್ತವ್ಯ ನಿರ್ವಹಿಸುತ್ತೆನೆ. ಪಟ್ಟಣದಲ್ಲಿ ಸರಕಾರಿ ಪದವಿ ಕಾಲೇಜು ಮಂಜೂರಿ ಮಾಡಿಸಲಾಗುವದು.  

ಇನ್ನು 10 ವರ್ಷ ಮಾತ್ರ ರಾಜಕಾರಣದಲ್ಲಿ ಇರುತ್ತೇನೆ ಎಂದರು.  

ಖಾಸ್ಗತೇಶ್ವರ ಮಠದ ಪಿಠಾಧಿಪತಿ ಸಿದ್ದಲಿಂಗ ದೇವರು, ಗುಂಡಕನಾಳದ ಗುರಲಿಂಗ ಶಿವಾಚಾರ್ಯರು ಮಾತನಾಡಿ, ಪಟ್ಟಣದಲ್ಲಿ ಅಭಿವೃದ್ಧಿ ಸೆಕೆ ಆರಂಭವಾಗಿದೆ. ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರ ದೂರದೃಷ್ಠಿತನದಿಂದಾಗಿ ಮತಕ್ಷೇತ್ರ ಅಭಿವೃದ್ಧಿ ಹೊಂದುತ್ತಿರುವದನ್ನು ಕಾಣುತ್ತಿದ್ದೇವೆ. ದೇವರು ಅವರಿಗೆ ಆಯುಷ ಕೊಟ್ಟು ಮಾದರಿ ಮತಕ್ಷೇತ್ರವನ್ನಾಗಿಸುವ ಶಕ್ತಿ ನೀಡಲಿ ಎಂದರು.  

ಪುರಸೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ, ಮುಖಂಡರಿಂದ ಶಾಸಕರಿಗೆ ಸನ್ಮಾನಿಸಲಾಯಿತು.  

ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಅರ್ಬನ್ ಬ್ಯಾಂಕ ಅಧ್ಯಕ್ಷ ವಿಠ್ಟಲಸಿಂಗ ಹಜೇರಿ, ಪುರಸೆ ಸದಸ್ಯರಾದ ವಾಸುದೇವ ಹೆಬಸೂರ, ನಿಂಗು ಕುಂಟೋಜಿ, ಮುತ್ತಪ್ಪ ಚಮಲಾಪೂರ, ಮಾನಸಿಂಗ ಕೊಕಟನೂರ, ಸಂಗಯ್ಯ ಹಿರೇಮಠ, ಗುತ್ತಿಗೆದಾರರಾದ ಸಿದ್ದನಗೌಡ ಪಾಟೀಲ, ಲೊಕೋಪಯೋಗಿ ಇಲಾಖೆಯ ಅಧಿಕಾರಿ ಡಿ.ಬಿ.ಕಲಬುರ್ಗಿ, ಸೋಮನಾಥ ಕುಳಗೇರಿ, ಪುರಸೆ ಮುಖ್ಯಾಧಿಕಾರಿ ಬಿ.ಟಿ.ಬಂಡಿವಡ್ಡರ ಸೇರಿದಂತೆ ಅ-ಕಾರಿಗಳು, ಪುರಸೆ ಸದಸ್ಯರು, ಬಿಜೆಪಿ ಕಾರ್ಯಕರ್ತರು, ಮುಖಂಡರು ಇದ್ದರು.  


ಸುದ್ದಿ ಓದಿ