ಮೋಟಾರ ಸೈಕಲ್ ಕಳ್ಳನ ಬಂಧನ: 8ಬೈಕ್ಗಳು ವಶಕ್ಕೆ
ಘಟಪ್ರಭಾ 26: ದಂಡಾಪೂರ ಕ್ರಾಸದಲ್ಲಿ ದಿ.26ರಂದು ಸಂಶಾಸ್ಪದ ನಂಬರ ಪ್ಲೇಟ ಇಲ್ಲದ ಮೋಟಾರ ಸೈಕಲ್ದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬಂಧಿತನು ಮೋಟಾರ ಸೈಕಲ್ ಕಳ್ಳತನ ಮಾಡುತ್ತಿದ್ದುದಾಗಿ ಒಪ್ಪಿಕೊಂಡ ಘಟನೆ ಶನಿವಾರದಂದು ಜರುಗಿದೆ.
ಘಟಪ್ರಭಾ ಪೊಲೀಸ ಠಾಣೆಯ ಪಿ.ಎಸ್.ಐ ಎಮ್. ಬಿ. ಬಿರಾದಾರ ಅಪರಾಧ ವಿಭಾಗ ಘಟಪ್ರಭಾ ಪೊಲೀಸ ಠಾಣೆ ಅಪರಾಧ ಸಂಖ್ಯೆ 185/2023 ನೇದ್ದರಲ್ಲಿ ತನಿಖೆ ಕೈಗೊಂಡಿದ್ದಾಗ ದಂಡಾಪೂರ ಕ್ರಾಸದಲ್ಲಿ ನಂಬರ ಪ್ಲೇಟ ಇಲ್ಲದ ಮೋಟಾರ ಸೈಕಲ್ ಮೇಲೆ ಹೋಗುವ ಒಬ್ಬ ಸಂಶಯಾಶ್ಪದ ಆರೋಪಿತನನ್ನು ಹಿಡಿದುಕೊಂಡು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದಾಗ ಸದರಿ ಆರೋಪಿತನು ಮೇಲಿನ ಪ್ರಕರಣದಲ್ಲಿ ಮೋಟಾರ ಸೈಕಲ್ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಅಲ್ಲದೆ ಇನ್ನೂ ಹಲವಾರ ಸ್ಥಳಗಳಿಂದ ಒಟ್ಟು ಸುಮಾರು 08 ಮೋಟಾರ ಸೈಕಲ್ಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದರಿಂದ ಅವನ ಸಂಗಡ ಹೋಗಿ ಅವನ ಕಬ್ಜಾದಲ್ಲಿದ್ದ 8 ಮೋಟಾರ ಸೈಕಲ್ ಅವುಗಳ ಒಟ್ಟು ಅಂದಾಜು ಕಿಮ್ಮತ್ತು. 2,95,000/- ಗಳನ್ನು ಜಪ್ತ ಮಾಡಿ ತಾಬಾಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸದರಿ ಪ್ರಕರಣದಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಗೋಕಾಕ ಡಿ.ಎಸ್.ಪಿ. ಎಚ್.ಡಿ ಮುಲ್ಲಾ, ಘಟಪ್ರಭಾ ಪಿ.ಐ ಬಸವರಾಜ ಕಾಮನಬೈಲ ಹಾಗೂ ಅಪರಾಧ ವಿಭಾಗ ಪಿ.ಎಸ್.ಐ ಎಮ್.ಬಿ.ಬಿರಾದಾರ, ಪಿ.ಎಸ್.ಐ ಎಸ್.ಆರ.ಕಣವಿ ಮತ್ತು ಸಿಬ್ಬಂದಿ ಜನರು ತನಿಖೆಯಲ್ಲಿ ಪಾಲ್ಗೊಂಡಿದ್ದು ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು ಬೆಳಗಾವಿ ಮಾನ್ಯ ಪೊಲೀಸ ಅಧೀಕ್ಷಕರು ಬೆಳಗಾವಿ ಜಿಲ್ಲೆಯವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.