ಕಾಗವಾಡ

ತಾಯಿ ಮೊಸಳೆ ಸೇರಿ 50ಕ್ಕೂ ಅಧಿಕ ಮರಿ ಪ್ರತ್ಯಕ್ಷ; ಗ್ರಾಮಸ್ಥರಿಂದ ಸುರಕ್ಷಿತ ಸೆರೆ

ತಾಯಿ ಮೊಸಳೆ ಸೇರಿ 50ಕ್ಕೂ ಅಧಿಕ ಮರಿ ಪ್ರತ್ಯಕ್ಷ; ಗ್ರಾಮಸ್ಥರಿಂದ ಸುರಕ್ಷಿತ ಸೆರೆ

ಕಾಗವಾಡ 10: ತಾಯಿ ಮೊಸಳೆ ಸೇರಿ ಸುಮಾರು 50 ಕ್ಕೂ ಹೆಚ್ಚು ಮೊಸಳೆ ಮರಿಗಳು ಪ್ರತ್ಯಕ್ಷವಾದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದೇವರಡ್ಡೆರಟ್ಟಿ ಗ್ರಾಮದಲ್ಲಿ ನಡೆದಿದೆ.  

ಹಲವು ದಿನಗಳಿಂದ ಗ್ರಾಮದ ಸಮೀಪದ ಅಪ್ಪಾಸಾಬ ಸತ್ಯಪ್ಪ ನಾಯಕ ಅವರ ತೋಟದ  ಕೃಷಿ ಹೊಂಡದಲ್ಲಿ ಠಿಕಾನಿ ಹೂಡಿದ್ದ ಮೊಸಳೆ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿತು. ಕೃಷಿಹೊಂಡದ ಸಮೀಪದ ಗದ್ದೆಯ ಬದುವಿನಲ್ಲಿ ಸುಮಾರು 50 ಕ್ಕೂ ಅಧಿಕ ಮೊಸಳೆ ಮರಿಗಳು ಪ್ರತ್ಯಕ್ಷವಾಗಿದ್ದು  ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.  

ಗ್ರಾಮಸ್ಥರು ಸುರಕ್ಷಿತವಾಗಿ ರಕ್ಷಣೆ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದು, ತಾಯಿ ಮೊಸಳೆಯನ್ನ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. 


ಸುದ್ದಿ ಓದಿ