ಸಿಂಧಗಿ

ದೇಶದ ಹೆಚ್ಚಿನ ಜನ ಸಂಖ್ಯೆಯಲ್ಲಿ ಕೃಷಿಯನ್ನೇ ಅಲಂಬಿಸಿದೆ: ಬಸವರಾಜ

ದೇಶದ ಹೆಚ್ಚಿನ ಜನ ಸಂಖ್ಯೆಯಲ್ಲಿ ಕೃಷಿಯನ್ನೇ ಅಲಂಬಿಸಿದೆ:  ಬಸವರಾಜ


ಸಿಂದಗಿ 23: ದೇಶದ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕೃಷಿ ಕಾರ್ಮಿಕರು, ಕಾರ್ಮಿಕರು ಕೃಷಿಯನ್ನೇ ಅಲಂಬಿಸಿ ಬದುಕುತ್ತಾರೆ. ಆದ್ದರಿಂದ ಅವರ ಹಿತ ಕಾಪಾಡುವುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಹತ್ತರ ಜವಾಬ್ದಾರಿ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಹೇಳಿದರು. 

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾರತ ಕಮ್ಯುನಿಷ್ಠ ಪಕ್ಷ (ಮಾರ್ಕ್ಸವಾದಿ) ಹಮ್ಮಿಕೊಂಡ 20ನೇ ವಿಜಯಪುರ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. 

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹತ್ತು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರ, ಕೃಷಿ ಕಾರ್ಮಿಕರ, ಕಾರ್ಮಿಕರ ಹಿತ ಕಾಪಾಡಲು ಮುಂದಾಗಬೇಕು ಎಂದು ಹೇಳಿದರು. 

ಸಿಪಿಐ.(ಎಂ) ರಾಜ್ಯ ಸಮಿತಿ ಸದಸ್ಯೆ, ಅಂಗವಾಡಿ ನೌಕರರ  ಸಂಘದ ರಾಜ್ಯ ಕಾರ್ಯದರ್ಶಿ ಎಷ್‌.ಎಸ್‌. ಸುನಂಧಾ ಮಾತನಾಡಿ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಹಿಳೆರು, ಮಕ್ಕಳಿಗೆ ಐಸಿಡಿಎಸ್ ಯೋಜನೆಯ ಮೂಲಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಆದರೆ ಕೇಂದ್ರ ಸರರ್ಕಾವು ಐಸಿಡಿಎಸ್ ಯೋಜನೆಯ  ಅನುಧಾನ ಕಡಿತಗೋಳಿಸಿದೆ. ರಾಜ್ಯ ಸರರ್ಕಾವು ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಅಂಗವಾಡಿ ಕೇಂದ್ರಗಳನ್ನು ಬಂದು ಮಾಡಲು ಹೋರಟಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. 

ಪಕ್ಷದ ಹಿರಿಯ ದುರಿಣ ಭೀಮಸಿ ಕಲಾದಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಈಳಗೇರ, ಜನವಾದಿ ಮಹಿಳಾ ಸಂಘದ ಮುಖಂಡೆ ಸುರೇಖಾ ರಜಪುತ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಲಕ್ಷಣ ಹಂದ್ರಾಳ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಅಂಗನವಾಡಿ ನೌಕರರ ಸಂಘ ಜಿಲ್ಲಾ ಗೌರವ ಅಧ್ಯಕ್ಷೆ ಸರಸ್ವತಿ ಮಠ, ಜಿಲ್ಲಾ ಅಧ್ಯಕ್ಷೆ ಸುನಂದಾ ನಾಯ್ಕ, ಕಾರ್ಯದರ್ಶಿ ಭಾರತಿ ವಾಲಿ, ತಾಲೂಕಾ ಕಾರ್ಯದರ್ಶಿ ಎಸ್‌.ಜಿ. ಬೋರಗಿ, ಚಡಚಣ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಶ್ವಿನಿ ತಳವಾರ ಮುಂತಾದವರು ವೇದಿಕೆ ಮೇಲೆ ಇದ್ದರು. 

ಕೈಕೊಂಡ ನಿರ್ಣಯಗಳು: ಗ್ರಾಪಂ ನೌಕರರಿಗೆ ಕನಿಷ್ಠ ವೇತನ 21ಸಾವಿರ ರೂ.ಗೆ ಹೆಚ್ಚಿಸಬೇಕು.  ಬಿಸಿ ಊಟದ ಕೆಲಸಗಾರರನ್ನು 12 ತಿಂಗಳು ಕೆಲಸಗಾರರು ಎಂದು ಪರಿಗಣಿಸಬೇಕು. ಅವರ ವೇತನ ಕನಿಷ್ಠ 21 ಸಾವಿರ ರೂ. ನೀಡಬೇಕು. ಗ್ರಾಮೀಣ ಪ್ರದೇಶಗಳಿಗೆ ಬ್ಯಾಂಕ್ ಸೌಲಭ್ಯಗಳನ್ನು ಹೆಚ್ಚಿಸಬೇಕು. ಬೆಳಗಾವಿ ಜಿಲ್ಲೆಯ ಶೇಡಬಾಳದಿಂದ ಕಲಬುರಗಿ ಜಿಲ್ಲೆಯ ಶಹಪೂರ ವರೆಗೆ ಹೊಸ ರೈಲ್ವೆ  ಹಳಿಗಳನ್ನು ಹಾಕಿ ರೈಲ್ವೆ ಸಾರಿಗೆ ಸೌಲಭ್ಯ ಹೆಚ್ಚಿಸಬೇಕು. ಎನ್‌ಆರ್‌ಜಿಯ ಕೆಲಸ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಬೇಕು. ದಿನಗೂಲಿ 600 ರೂ.ಗೆ ಹೆಚ್ಚಿಸಬೇಕು ಎಂಬ ವಿಷಯಗಳುಳ್ಳ ಒಟ್ಟು 17 ನಿರ್ಣಯಗಳನ್ನು ಕೈಕೊಳ್ಳಲಾಯಿತು.  


ಸುದ್ದಿ ಓದಿ