ನೂರಕ್ಕೂ ಹೆಚ್ಚು ಜೋಡಿ ಉಚಿತ ಸಾಮೂಹಿಕ ವಿವಾಹ
ಶಿಗ್ಗಾವಿ 14: ಕಳೆದಬಾರಿ ಕೊರೊನಾ ಸಂದರ್ಭದಲ್ಲಿಯೂ ಕೂಡಾ ಸರಕಾರದ ನಿಯಮವನ್ನು ಪಾಲಿಸುವ ಮೂಲಕ ನೂರು ಜೋಡಿ ಉಚಿತ ಸಾಮೂಹಿಕ ವಿವಾಹವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದೇವೆ. ಈ ಬಾರಿ ಆ ತಾಯಿ ದುರ್ಗಾಮಾತೆ ಕೊರೊನಾ ಮಹಾಮಾರಿ ತೊಲಗಿಸಿದ್ದಕ್ಕಾಗಿ ಏಪ್ರಿಲ್ನಲ್ಲಿ ನಡೆಯಲಿರುವ 150 ಜೋಡಿ ಉಚಿತ ಸಾಮೂಹಿಕ ವಿವಾಹ ಮಾಡುವುದಾಗಿ ಕೆಪಿಸಿಸಿ ಸದಸ್ಯ ಶಣ್ಮುಖಪ್ಪ ಶಿವಳ್ಳಿ ಹೇಳಿದರು.
ಬಂಕಾಪೂರ ಪಟ್ಟಣದ ಹೊರವಲಯದಲ್ಲಿರುವ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಉಚಿತ ಸಾಮೂಹಿಕ ವಿವಾಹದ ಪೂರ್ವಬಾವಿ ಸಭೆಯನ್ನುದ್ದೇಸಿಸಿ ಮಾತನಾಡಿ, ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಐವತ್ತು ಸಾವಿರಕ್ಕೀಂತಲೂ ಅಧಿಕ ಜನಸಂಖ್ಯೆ ಸೇರುವ ಸಾಧÀ್ಯತೆಯಿದ್ದು, ಕಾರ್ಯಕರ್ತರು ಬರುವ ಜನರಿಗೆ ಯಾವುದೇ ತೋಂದರೆ ಯಾಗದಂತೆ ಊಟ, ಉಪಹಾರ, ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರೇ ಕಾರ್ಯಗಳನ್ನು ಕೈಗೋಳ್ಳಲು ಇಗಿನಿಂದಲೇ ಸನ್ನದ್ದರಾಗುವಂತೆ ಕಾರ್ಯಕರ್ತರಿಗೆ ಸೂಚಿಸಿದರು.
ಕಳೆದಬಾರಿ ಈ ದುರ್ಗಾದೇವಿ ದೇವಸ್ಥಾನದ ಫವಿತ್ರ ಪ್ರಾಂಗಣದಲ್ಲಿ ನಾವು ಮಾಡಿರುವ ಉಚಿತ ಸಾಮೂಹಿಕ ವಿವಾಹವನ್ನು ಯಾವುದೇ ಅಡೆ, ತಡೆಯಿಲ್ಲದೆ ಏಶಸ್ವಿಯಾಗಿ ಪೂರೈಸಿಕೋಡುವಂತೆ ಶ್ರೀ ದುರ್ಗಾದೇವಿಯಲ್ಲಿ ಹರಕೆ ಕಟ್ಟಿಕೋಂಡಿದ್ದೆ, ಆ ತಾಯಿ ನನ್ನ ಇಚ್ಛೆಯಂತೆ ಆ ಕಾರ್ಯಕ್ರಮವನ್ನು ಏಶಸ್ವಿಗೋಳಿಸಿದ್ದಕ್ಕಾಗಿ, ಕೊವಿಡ್ ಹಿಮ್ಮೆಟ್ಟಿಸಿದ ಹಿನ್ನಲೆಯಲ್ಲಿ ಆ ತಾಯಿಗೆ ಇಂದು ವಿಷೇಶ ಪೂಜೆಸಲ್ಲಿಸಿ ಅನ್ನಪ್ರಸಾದ ಸೇವೆ ಗೈಯುವಮೂಲಕ ಹರಕೆ ತಿರಿಸುವುದರ ಜೊತೆಗೆ ಕಳೆದ ಬಾರಿಗಿಂತ ಈ ಬಾರಿ 50 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಾಡುವುದರ ಮೂಲಕ ಸಮಾಜ ಸೇವೆಯನ್ನು ಆ ತಾಯಿ ಪಾದಕ್ಕೆ ಸಮರ್ಪಿಸುವುದಾಗಿ ಹೇಳಿದರು.
ಈ ಬಾರಿ ಉಚಿತ ಸಾಮೂಹಿಕ ವಿವಾಹಕ್ಕೆ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ ಬರುವ ಸಾದ್ಯತೆಯಿದ್ದು, ಉಚಿತ ಸಾಮೂಹಿಕ ವಿವಾಹದಲ್ಲಿ ಯಾವುದೇ ಲೋಪ, ದೋಸವಾಗದಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರ್ವಹಣೆಗೆ ಕಾರ್ಯಕರ್ತರು ಈಗಿನಿಂದಲೇ ಸನ್ನದ್ದರಾಗಿ.
ಷಣ್ಮುಖಪ್ಪ ಶಿವಳ್ಳಿ ಕೆ.ಪಿ.ಸಿ.ಸಿ.ಸದಸ್ಯ
ಕಾಂಗ್ರೇಸ್ ಮುಖಂಡರಾದ ಮಲ್ಲೇಶಪ್ಪ ಬಡ್ಡಿ, ಮಹೇಶ ಪುಕಾಳೆ, ಬಸವರಾಜ ಕಟ್ಟಿಮನಿ, ಎನ್.ಬಿ.ಕಟಗಿ, ಬಿ.ಸಿ.ಪಾಟೀಲ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.