ಕಾರವಾರ

60 ಕ್ಕೂ ಅಧಿಕ ಅಂಗಡಿಗಳ ಮೇಲೆ ದಾಳಿ: ಪ್ಲಾಸ್ಟಿಕ್ ಬ್ಯಾಗ್‌ಗಳು ವಶಕ್ಕೆ

60 ಕ್ಕೂ ಅಧಿಕ ಅಂಗಡಿಗಳ ಮೇಲೆ ದಾಳಿ: ಪ್ಲಾಸ್ಟಿಕ್ ಬ್ಯಾಗ್‌ಗಳು ವಶಕ್ಕೆ

ಲೋಕದರ್ಶನ ವರದಿ

ದಾಂಡೇಲಿ  20: ನಗರದ ಅಂದಾಜು 60 ಕ್ಕೂ ಅಧಿಕ ಅಂಗಡಿಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟೀಕ್ ಚೀಲಗಳನ್ನು ವಶಪಡಿಸಿಕೊಂಡು ದಂಡ ಆಕರಣೆ ಮಾಡಲಾಗಿದೆ.  ನಗರಸಭೆಯ ಪೌರಾಯುಕ್ತ ವಿವೇಕ್ ಬನ್ನೆಯವರ ಮಾರ್ಗದರ್ಶನದಲ್ಲಿ ಆರೋಗ್ಯ ನೀರೀಕ್ಷಕ ವಿಲಾಸ್ ನಾಯ್ಕ, ಹಾಗೂ ಶುಭಂ ರಾಯ್ಕರ್ ನೇತ್ರತ್ವದಲ್ಲಿ ದಾಳಿ ನಡೆಸಿ ಒಟ್ಟು 75 ಕಿಲೋ ಪ್ಲಾಸ್ಟೀಕ್ ವಶಪಡಿಸಿಕೊಂಡು ರೂಪಾಯಿ 3 ಸಾವಿರ ದಂಡ ವಸೂಲು ಮಾಡಲಾಗಿದೆ. ಕಳೆದ ತಿಂಗಳಿನಿಂದ ಒಟ್ಟು 195 ಕೆ.ಜಿ ಪ್ಲಾಸ್ಟೀಕ್ ವಶ ಪಡಿಸಿಕೊಳ್ಳಲಾಗಿದ್ದು ರೂಪಾಯಿ 9100 ದಂಡ ವಸೂಲು ಮಾಡಲಾಗಿದೆ ಎನ್ನಲಾಗಿದ್ದು ಈ ಕುರಿತಂತೆ ಇನ್ನೂ ಕೆಲ ದಿನಗಳ ವರೆಗೆ ದಾಳಿ ನಡೆಯಲಿದೆ. ಎಂದು ತಿಳಿದು ಬಂದಿದೆ.  ಈ ಕುರಿತಂತೆ ವ್ಯಾಪಾರಸ್ಥರು, ಉದ್ದಿಮೆದಾರರು ಮತ್ತು ಪ್ಲಾಸ್ಟೀಕ್ ಬಳಕೆದಾರರು ನಗರಸಭೆ ಜೊತೆ ಕೈ ಜೋಡಿಸಬೇಕೆಂದು ಪೌರಾಯುಕ್ತರು ಕರೆ ನೀಡಿರುತ್ತಾರೆ. 


ಸುದ್ದಿ ಓದಿ