ಯರಗಟ್ಟಿ

ಮೊಹರಂ ಹಬ್ಬ ಶಾಂತಿ ಸಭೆ: ಡಿಜೆ, ಸೌಂಡ್ ಸಿಸ್ಟಮ್ ಬ್ಯಾನ್‌: ಸಿಪಿಐ ಮಠಪತಿ

ಮೊಹರಂ ಹಬ್ಬ ಶಾಂತಿ ಸಭೆ: ಡಿಜೆ, ಸೌಂಡ್ ಸಿಸ್ಟಮ್ ಬ್ಯಾನ್‌: ಸಿಪಿಐ ಮಠಪತಿ

ಯರಗಟ್ಟಿ 09: ಸಮೀಪದ ಆಲದಕಟ್ಟಿ ಕೆ. ಎಂ ಗ್ರಾಮದಲ್ಲಿ ಆಚರಿಸಲಾಗುವ ಮೋಹರಂ ಹಬ್ಬದ ಪ್ರಯುಕ್ತ ಫಕ್ಕೀರೆಶ್ವರ ದೇವಸ್ಥಾನದ ಆವರಣದಲ್ಲಿ ಶಾಂತಿ ಸಭೆ ಕರೆಯಲಾಗಿತ್ತು.

ಸಭೆಯ ಅಧ್ಯಕ್ಷತೆಯನ್ನು ಪಿಎಸ್‌ಐ ಆಯ್‌. ಎಂ. ಹಿರೇಗೌಡರ ಅವರು ವಹಿಸಿ ಮಾತನಾಡುತ್ತಾ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಹಿಂದೂ-ಮುಸ್ಲಿಂ ಬಾಂಧವರಿಗೆ ತಿಳಿಸಿ ಹೇಳಿದರು. ಯಾವುದೇ ತರಹದ ಗಲಾಟೆ ವಗೈರೆ ಅಲ್ಲದೆ ಸಾರ್ವಜನಿಕರಿಗೆ ತೊಂದರೆ ಮಾಡುವಂತಿಲ್ಲ ಎಂದು ಹೇಳಿದರು.ಸಭೆಯಲ್ಲಿ ಸ್ಥಳೀಯ ಮುಖಂಡರಾದ ಸಿ. ಎಸ್‌. ಮುಗಳಿ, ಪಿಡಿಓ ಎಚ್‌. ಕೆ. ಚೌವರೆಡ್ಡಿ, ಬಸವಂತಪ್ಪ ನಂಜನ್ನವರ, ಗೌಡಪ್ಪ ಕಡಕೋಳ, ರಾಯಪ್ಪ ರಾಯಣ್ಣನವರ, ಅಜೀಜ್ ನದಾಫ, ಫಕ್ಕೀರ​‍್ಪ ಸವದತ್ತಿ, ಅಶೋಕ ಚಿಕ್ಕೋಪ್ಪ, ಫಕ್ಕೀರ​‍್ಪ ಸಣ್ಣಗೌಡರ ಮುಂತಾದವರು ಉಪಸ್ಥಿತರಿದ್ದರು.ಯಾವುದೇ ಕಾರ್ಯಕ್ರಮದಲ್ಲಿ ಡಿಜೆ, ಸೌಂಡ್ ಸಿಸ್ಟಮ್, ಕರ್ಕಶವಾದಶಬ್ಧವನ್ನು ಹೊರ ಹಾಕುವಂತ ಧ್ವನಿವರ್ಧಕಗಳನ್ನು ಉಪಯೋಗಿಸುವಂತಿಲ್ಲ ಮಾನ್ಯ ಭಾರತ ಸರ್ವೋಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ:72/1998 ದಿನಾಂಕ:18-07-2005 ರಲ್ಲಿ ನೀಡಿರುವ ನಿರ್ದೇಶನಗಳನ್ನು ಪಾಲಿಸತಕ್ಕದ್ದು.ಈ ಕೆಳಗೆ ಸೂಚಿಸಿದಂತೆ ಸ್ಥಳ/ವಲಯದಲ್ಲಿ ಶಬ್ದದ ಅಳತೆ ಕಾಪಾಡಿಕೊಂಡು ಧ್ವನಿವರ್ಧಕಉಪಯೋಗಿಸಬೇಕು ಪೊಲೀಸ್ ಅನುಮತಿಯನ್ನು ಪಡೆಯದೇ ಧ್ವನಿವರ್ಧಕ ಉಪಯೋಗಿಸಿದ್ದಲ್ಲಿ ಸದರಿ ಚಡಿಜೆ ತರಿಸಿದವರ ಮೇಲೆ ಮತ್ತು ಅದರ ಮಾಲೀಕರು ಹಾಗೂ ಅಪರೇಟರ್‌ಗಳ ಮೇಲೆ ಕಾನೂನಿನ ಪ್ರಕಾರಕ್ರಮ ಕೈಕೊಳ್ಳಲಾಗುವುದು. ಪೊಲೀಸ್ ಅನುಮತಿಯನ್ನು ಪಡೆಯದೇ ಧ್ವನಿವರ್ಧಕ ಉಪಯೋಗಿಸಿದ್ದಲ್ಲಿ ಸೌಂಡ್‌ಬಳಿಸಿದಂತಹ ಎಲ್ಲ ವಸ್ತುಗಳನ್ನು ಮತ್ತು ವಾಹನಗಳನ್ನು ಕಾನೂನಿನ ಪ್ರಕಾರ ಜಪ್ತ ಮಾಡಿಕೊಳ್ಳಲಾಗುವುದು.  

ಸಿಪಿಐ ಆಯ್ ಎಂ ಮಠಪತಿ ಮುರಗೋಡ ಪೊಲೀಸ್ ಠಾಣೆ 


ಸುದ್ದಿ ಓದಿ