ಬ್ಯಾಡ್ಗಿ

ಸೆಲಬ್ರೆಟಿ ರನ್ನರ್ ಆಗಿ ಮಹ್ಮದ್ ಜೈದ್

ಸೆಲಬ್ರೆಟಿ ರನ್ನರ್ ಆಗಿ ಮಹ್ಮದ್ ಜೈದ್

ಬ್ಯಾಡಗಿ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಾ ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಆರ್ಮಿ ರನ್ನಿಂಗ್ ರೇಸ್’ನಲ್ಲಿ ಸೆಲಬ್ರೆಟಿ ರನ್ನರ್ ಆಗಿ ಭಾಗವಹಿಸಿದ್ದ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದ ನಾಲ್ಕೂವರೆ ವರ್ಷದ ಬಾಲಕ 1.5 ಕಿಮೀ ದೂರ ಓಡುವ ಮೂಲಕ ಬಹುಮಾನ ಗೆದ್ದುಕೊಂಡಿದ್ದಾನೆ. ಬನಹಟ್ಟಿಯ ಎಸ್’ಆರ್’ಎ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ತಾಲೂಕಿನ ಕಾಗಿನೆಲೆ ಗ್ರಾಮದ ಮಾಜಿ ಸೈನಿಕ ಆಶೀಫ್’ಅಲಿ ಮತ್ತಿಹಳ್ಳಿ ಅವರ ನಾಲ್ಕೂವರೆ ವರ್ಷದ ಪುತ್ರ ಮಹ್ಮದ್ ಜೈದ್ ಈ ಸಾಧನೆ ಮಾಡಿದ್ದು, ಸದರಿ ಬಾಲಕನಿಗೆ ಪ್ರೋತ್ಸಾಹಕರ ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಪದ್ಮಜಿತ ನಾಡಗೌಡ ಪಾಟೀಲ, ಡಾ. ಎ. ಆರ್. ಬೆಳಗಲಿ, ಬಸವರಾಜ ಕೊಕಟನೂರ, ಡಾ.ರಾಜವೇಲು ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ