ಮಾಡಮಗೇರಿ ಗ್ರಾ ಪಂ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ
ಲೋಕದರ್ಶನ ವರದಿ
ಯರಗಟ್ಟಿ 03: ಸಮೀಪದ ಮಾಡಮಗೇರಿ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಸರಸ್ವತಿ ಗಿಡ್ಡಪ್ಪ ಖಂಡ್ರಿ ಹಾಗೂ ಉಪಾಧ್ಯಕ್ಷರಾಗಿ ಮಹಾದೇವಿ ಶಿವಾನಂದ ಘಟನಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಕೃಷಿ ಇಲಾಖೆಯ ನಿದೇರ್ಶಕ ಶಿವಪ್ರಕಾಶ ಪಾಟೀಲ ಕಾರ್ಯನಿರ್ವಹಿಸಿದರು.
ಪಂಚಾಯತ ಅಭಿವೃದ್ದಿ ಅಧಿಕಾರಿ ವಾಯ್. ಎಚ್. ಶೇರಿ ಮಾತನಾಡಿ, ಸಮಗ್ರ ಗ್ರಾಮದ ಅಭಿವೃದ್ಧಿ ಕೈಗೊಳ್ಳಲು ಎಲ್ಲ ಸದಸ್ಯರು ಒಂದಾಗಿ ಪ್ರಯತ್ನಿಸಿರಿ. ಎಲ್ಲ ರೀತಿಯ ಸಹಕಾರ ನೀಡುವದಾಗಿ ನೂತನ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಭರವಸೆ ನಿಡಿದರು. ವಿಜೇತರ ಬೆಂಬಲಿಗರು ಗುಲಾಲ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸದಸ್ಯರಾದ ಮಂಜುಳಾ ಬಂಡಿವಡ್ಡರ, ಪಾರವ್ವ ಬಾಗಿಲದ, ರೇಣುಕಾ ಯರಝರ್ವೆ , ಶಿವಾನಂದ ಬಗನಾಳ, ಮಹೇಶ ಖಂಡ್ರಿ, ಕಲ್ಲೋಳ್ಳೆಪ್ಪ ಶಿದ್ದನ್ನವರ, ಮಲ್ಲವ್ವ ನಾಯ್ಕರ, ಲಕ್ಕಪ್ಪ ಸನ್ನಿಂಗನವರ, ರೇಣುಕಾ ಕಾರಬಾರಿ, ಮಂಜುಳಾ ಗಸ್ತಿ, ಲಕ್ಷ್ಮಣ ಬುರ್ಲಿ , ತಂಗೆವ್ವ ತಳನಟ್ಟಿ, ಗೀತಾ ಕುರಿ, ಗೌಡಪ್ಪ ತಳನಟ್ಟಿ, ಪಾರ್ವತಿ ಗುನ್ನಿ, ಅಶೋಕ ತಳನಟ್ಟಿ, ಲಕ್ಷ್ಮಣ ಪೂಜೇರ ಸ್ಥಳಯ ಹಿರಿಯರಾದ ಮಹಾದೇವ ಬಾಗಿಲದ, ಲಕ್ಷಮ್ಣ ಸಿದ್ದನ್ನವರ, ಕಷ್ಣಪ್ಪ ಬಡಿಗೇರ, ರಾಮಣ್ಣಾ ನಾಯ್ಕರ, ಸಿದ್ದಪ್ಪ ಬಾಗಿಲದ, ಪುಡಲಿಂಗ ಪೂಜೇರ, ಈರಣ್ಣಾ ಕಾರಬಾರಿ, ವೀರಭದ್ರಪ್ಪ ಕರುಬಗಟ್ಟಿ ಮತ್ತಿತರರು ಇದ್ದರು