ಕಾಶ್ಮೀರದಲ್ಲಿ ಗಣೇಶನ ಮೂರ್ತಿ, ಶಂಕರಾಚಾರ್ಯರ ಮೂರ್ತಿ ಪ್ರತಿಷ್ಠಾಪಿಸಿದ ಕೀರ್ತಿ ಮೋದಿಜಿಯವರಿಗೆ ಸಲ್ಲುತ್ತದೆ : ಶಾಸಕ ಯತ್ನಾಳ
ಲೋಕದರ್ಶನ ವರದಿ
ಶಿಗ್ಗಾವಿ 09: ಪ್ರಧಾನಿ ನರೇಂದ್ರ ಮೋದಿಜಿಯವರ ದಿಟ್ಟನಡೆ ಕಾಶ್ಮೀರವನ್ನು ವಶಪಡೆಸಿಕೊಳ್ಳಲು ಸಾಧ್ಯವಾಗಿದೆ. ಕಾಶ್ಮೀರದಲ್ಲಿ ಶ್ರೀ ಗಣೇಶನ ಮೂರ್ತಿ ಹಾಗೂ ಶ್ರೀ ಶಂಕರಾಚಾರ್ಯರ ಮೂರ್ತಿ ಗಳನ್ನು ಪ್ರತಿಷ್ಠಾಪಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಸಲ್ಲುತ್ತದೆ ಎಂದು ವಿಜಯಪುರದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದ ನೆಹರು ಗಾರ್ಡನಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾ ಗಣೇಶಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಹಿಂದು ಜನ ಜಾಗೃತಿ ಬಹಿರಂಗ ಸಭೆಯನ್ನುದ್ದೇಸಿಸಿ ಮಾತನಾಡಿದ ಅವರು, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಈ ಬಾರಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಕೀತರ್ಿ ಪ್ರಲ್ಹಾದ ಜೋಶಿಯವರಿಗೆ ಸಲ್ಲುತ್ತದೆ. ಈ ಹಿಂದೆ ಕಾಶ್ಮೀರದಲ್ಲಿ ಹಿಂದುಗಳಿಗೆ ಕಲ್ಲು ಒಗೆಯುತ್ತಿದ್ದ ಜನ ಇಗ ಹೂವನ್ನು ಎಸೆಯುವಂತಾಗಿದೆ. ಇದಕ್ಕೆ ವಿಶ್ವ ಮನ್ನಣೆಯನ್ನು ಪಡೆದ ನಮ್ಮ ಪ್ರಧಾನಿ ಮೋದಿಜಿಯವರೇ ಕಾರಣರಾಗಿದ್ದಾರೆ. ಕಾಂಗ್ರೇಸ ಸರಕಾರ ಬಂದಮೇಲೆ ದೇಶ ದ್ರೋಹಿಗಳನ್ನು ಹಿರೋಗಳೆಂದು ಬಿಂಬಿಸುವ ಕಾರ್ಯ ನಡೆಯುತ್ತಿದೆ. ಇದನ್ನು ಹಿಂದುಗಳು ಎಂದೂ ಸಹಿಸುವುದಿಲ್ಲ. ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ದೇಶಕ್ಕಾಗಿಯೇ ತಮ್ಮ ಪ್ರಾಣವನ್ನು ಮಿಸಲಿರಿಸದ ಮೋದಿಜಿಯವರನ್ನು ಪುನ: ಪ್ರಧಾನಿಯನ್ನಾಗಿ ಮಾಡಲು ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಈ ದೇಶದಲ್ಲಿ ಗಣೆಶನ ಆಚರಣೆ ತಡೆಯುವಂತ ಶಕ್ತಿ ಯಾರಿಗೂ ಇಲ್ಲ. ಇದು ಬರಿ ಭಕ್ತರ ಶಕ್ತಿಯಾಗಿದ್ದು, ಶ್ರೀ ಗಣೇಶ ಶಕ್ತಿತೋರಿದರೆ ಪಟ್ಟ ಭದ್ರ ಶಕ್ತಿಗಳು ಈ ದೇಶವನ್ನು ತೋರೆಯಲಿವೆ. ವಿಶ್ವ ಮಾನವರ ಕಲ್ಯಾಣ ಧರ್ಮ ಯಾವುದಾದರೂ ಇದ್ದರೆ ಅದು ಹಿಂದು ಧರ್ಮವಾಗಿದೆ. ಕೇಲವರು ಸನಾತನ ಧರ್ಮವನ್ನು ಕೆಣುಕುತ್ತಿದ್ದಾರೆ. ಹಿಂದುಗಳು ಇದನ್ನು ಸಹಿಸಲಾರರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಸತತ ಹೋರಾಟದ ಪ್ರತಿಫಲವಾಗಿ ಈದ್ಗಾ ಮೈದಾನದಲ್ಲಿ ಈ ಬಾರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅನುಮತಿ ನೀಡಿದರೂ ಅದನ್ನು ವಿರೋದಿಸಿದ ಜನ ಕಾಂಗ್ರೇಸ್ ಸರ್ಕಾರದ ಕುಮ್ಮಕ್ಕಿನಿಂದ ಎಂಬುದನ್ನು ಹಿಂದುಗಳು ಮರೆತಿಲ್ಲ. ಬರುವ ಲೋಕಸಬಾ ಚುನಾವಣೆಗೆ ಹಿಂದುಗಳು ಒಗ್ಗಟ್ಟಾಗಿ ಬಿಜೆಪಿ ಸರ್ಕಾರವನ್ನು ಬೆಂಬಲಿಸುವ ಮೂಲಕ ದೂರಾಡಳಿತ ದೇಶ ದ್ರೋಹಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೇಸೇಯಲಿದ್ದಾರೆ ಎಂದು ಹೇಳಿದರು.
ಹಿಂದು ಮಹಾಗಣೇಶ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಬಳಿಗಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗಂಗಾಧರ ಮಾ.ಪ.ಶೆಟ್ಟರ, ಸೋಮಶೇಖರ ಗೌರಿಮಠ, ಹೊನ್ನಪ್ಪ ಹೂಗಾರ, ಗುಡ್ಡಪ್ಪ ಮತ್ತೂರ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.