ಇಂಡಿ

ಮೋದಿಯವರು ದೇಶವನ್ನು ಸುಭದ್ರ ರಾಷ್ಟ್ರವನ್ನಾಗಿಸಿದ್ದಾರೆ: ಜಿಗಜಿಣಗಿ

ಮೋದಿಯವರು ದೇಶವನ್ನು ಸುಭದ್ರ ರಾಷ್ಟ್ರವನ್ನಾಗಿಸಿದ್ದಾರೆ: ಜಿಗಜಿಣಗಿ

ಇಂಡಿ 25: ನರೇಂದ್ರ ಮೋದಿಯವರು ದೇಶವನ್ನು ಸುಭದ್ರ ರಾಷ್ಟ್ರವನ್ನಾಗಿಸಿದ್ದಾರೆ. ಅವರ ಆಡಳಿತಾವಧಿಯಲ್ಲಿ ಭಾರತ ದೇಶ ವಿಶ್ವದಲ್ಲಿಯೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. 

ಅವರು ಮಂಗಳವಾರ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.  

ರಾಷ್ಟ್ರೀಯತೆ ಮತ್ತು ಅಭಿವೃದ್ಧಿ ವಿಚಾರವನ್ನು ಆದ್ಯತೆಯಾಗಿಸಿಕೊಂಡು ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು. 

ದೇಶದ ಅಭಿವೃದ್ಧಿ ದೃಷ್ಠಿಯಿಂದ ಪಕ್ಷವನ್ನು ಮತ್ತಷ್ಠು ಬಲಿಷ್ಠಗೊಳಿಸಬೇಕಿದೆ. ಕೆೆಳಹಂತದ ಜೀವಾಳ-ಪಕ್ಷಕ್ಕಾಗಿ ದುಡಿಯುವ ಸಾಮಾನ್ಯ ಕಾರ್ಯಕರ್ತನನ್ನು ಗೌರವಿಸುವ ಕೆಲಸ ಮಾಡುತ್ತದೆ. ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಕಟ್ಟಕಡೆಯ ಮುಂಖಡನೇ ಪಕ್ಷಕ್ಕೆ ಜೀವಾಳ ಎಂದು ತಿಳಿಸಿದ ಅವರು, ದುಡಿದವರಿಗೆ ಮಾತ್ರ ಅವಕಾಶ ಎಂಬ ಸಿದ್ದಾಂತವನ್ನು ಕರಾರುಕ್ಕಾಗಿ ಪಾಲಿಸುತ್ತಿರುವ ಏಕೈಕ ಪಕ್ಷ ಬಿಜೆಪಿ ಸಂಘಟನೆಯ ಬಗ್ಗೆ ಚರ್ಚಿಸುವ ಉದ್ದೇಶದಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಯಕಾರಿಣಿ ಸಭೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. 

ಬೆಳಗಾವಿ ವಿಭಾಗ ಸಂಘಟನಾತ್ಮಕ ಪ್ರಭಾರಿ ಚಂದ್ರಶೇಖರ ಕವಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ ಮಾತನಾಡಿದರು. 

ಬಿಜೆಪಿ ಜಿಲ್ಲಾ ರೈತ ಮೋರ್ಚಾಅಧ್ಯಕ್ಷ ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಸಿದ್ದಲಿಂಗ ಹಂಜಗಿ, ರಾಜಕುಮಾರ ಸಗಾಯಿ, ವಿಜಯಲಕ್ಷ್ಮೀ ರೂಗಿಮಠ, ಬಾಪುರಾಯಗೌಡ ಪಾಟೀಲ, ಅನೀಲಕುಮಾರ ಜಮಾದಾರ,  ಶ್ರೀಶೈಲಗೌಡ ಬಿರಾದಾರ, ಶೀಲವಂತ ಉಮರಾಣಿ, ರಾಜಶೇಖರ ಯರಗಲ್ಲ ಮತ್ತಿತರಿದ್ದರು. 


ಸುದ್ದಿ ಓದಿ