ದೇಶದ ಏಳಿಗೆಗಾಗಿ ಶ್ರಮಿಸುತ್ತಿರುವ ಮೋದಿ ಕಾರ್ಯ ಎಲ್ಲರಿಗೂ ಸ್ಪೂರ್ತಿ: ಸಂಸದ ಜೊಲ್ಲೆ
ಚಿಕ್ಕೋಡಿ 09: ದೇಶದ ಜನರಿಗೆ ಇದ್ದ ಅಡೆತಡೆಗಳನ್ನು ಕೇಂದ್ರ ಸರ್ಕಾರ ತೆಗೆದು ಹಾಕಿ ಸರಳಿಕರಣಗೊಳಿಸುವ ಮೂಲಕ ಪ್ರತಿಯೊಬ್ಬ ನಾಗರಿಕನಿಗೆ ಸಿಗಬೇಕಾದ ಸೌಲಭ್ಯವನ್ನು ಪ್ರಧಾನಿ ನರೇಂದ್ರ ಮೋದಿ ಜನರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಕೋವಿಡ್ ಸವಾಲಾಗಿ ಸ್ವೀಕರಿಸಿ ದೇಶದ ಜನರ ರಕ್ಷಣೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವದಲ್ಲಿ ಮಾದರಿಯಾಗಿದ್ದಾರೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಚಿಕ್ಕೋಡಿ-ಸದಲಗಾ ಕ್ಷೇತ್ರ ವ್ಯಾಪ್ತಿಯ ಖಡಕಲಾಟ ಮತ್ತು ಪಟ್ಟಣಕುಡಿ ಜಿಲ್ಲಾ ಪಂಚಾಯತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 9 ವರ್ಷ ಯಶಸ್ವಿ ಆಡಳಿತ ಪೂರೈಕೆ ಹಿನ್ನಲ್ಲೆಯಲ್ಲಿ ಮಹಾ ಜನಸಂಪರ್ಕ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಡೀ ದೇಶದಲ್ಲಿ ಮೋದಿಅ9 ಕಾರ್ಯಕ್ರಮ ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಒಂಭತ್ತು ವರ್ಷ ಯಶಸ್ವಿಯಾಗಿ ಆಡಳಿತ ನಡೆಸಿದೆ. ಅಭಿವೃದ್ಧಿ ಕೆಲಸ ಈ ಹಿಂದೆಯು ಆಗಿಲ್ಲ ಮುಂದೆಯೂ ಆಗುದಿಲ್ಲ ಎನ್ನುವ ನಂಬಿಕೆ ನನ್ನಲಿದೆ. ಈ ಒಂಭತ್ತು ವರ್ಷದಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಅನೇಕ ಕಾಯ್ದೆ, ಕಾನೂನು ಜನರಿಗೆ ತಿಳಿಸಬೇಕಾಗಿದೆ. ಅಭಿವೃದ್ಧಿ ಕೆಲಸಗಳಂತೂ ಜನ ನೆನಪಿಡುವಂತಾಗಿದೆ. ಈ ಎಲ್ಲ ಯೋಜನೆಗಳ ಮಾಹಿತಿ ಜನರಿಗೆ ಮುಟ್ಟಿಸುವ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡಬೇಕಾಗಿದೆ ಎಂದರು.
ವಿಶ್ವಕಂಡ ನಾಯಕರ ಪಟ್ಟಿಯಲ್ಲಿ ಗುರ್ತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಚಿಕ್ಕೋಡಿ ಲೋಕಸಭೆ ಜನತೆ ನನಗೂ ಆಯ್ಕೆ ಮಾಡಿ ಮೋದಿಯವರ ಜೊತೆ ಕೆಲಸ ಮಾಡಲು ಅನುಕೂಲ ಕಲ್ಪಿಸಿರುವುದು ಎಷ್ಟು ಕೃತಜ್ಞೆತೆ ಸಲ್ಲಿಸಿದರೂ ಕಡಿಮೆಯಾಗುತ್ತದೆ. ಕ್ಷೇತ್ರದ ಜನರ ಆಶೀರ್ವಾದದಿಂದ ಆಯ್ಕೆಯಾದ ನಾನು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷದ ಆಡಳಿತ ಅವಧಿಯಲ್ಲಿ 8325 ಕೋಟಿ ರೂ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.
ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಹೆದ್ದಾರಿ ನಿರ್ಮಾಣಕ್ಕೆ 3837 ಕೋಟಿ ರೂ, ಪಿಎಂ ಕಿಸಾನ ನಿಧಿ 559 ಕೋಟಿ ರೂ, ಮುಜರಾಯಿ ಮತ್ತು ವಕ್ಪ ಇಲಾಖೆಯಿಂದ 74 ಕೋಟಿ ರೂ, ಪಿಎಂ ಮತ್ತು ಸಿಎಂ ನಿಧಿಯಿಲ್ಲಿ 1.52 ಕೋಟಿ ರೂ, ಹೀಗೆ ಸುಮಾರು 8325 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಸಾಧನೆಯ ಬಗ್ಗೆ ಹಾಗೂ ಜನಸಂಪರ್ಕ ಅಭಿಯಾನದಲ್ಲಿ ಪಾಲ್ಗೊಳ್ಳಲು 9090902024 ನಂಬರಿಗೆ ಮಿಸ್ ಕಾಲ ನೀಡಿ ಅವರ ಸಾಧನೆ ಬಗ್ಗೆ ತಿಳಿದುಕೊಳ್ಳಬಹುದು. ದೇಶದ ಏಳಿಗೆಗಾಗಿ ಶ್ರಮಿಸುತ್ತಿರುವ ಮೋದಿ ಅವರ ಕಾರ್ಯ ಎಲ್ಲರಿಗೂ ಸ್ಪೂರ್ತಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ, ರಾಜೇಶ ನೇರ್ಲಿ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಮಂಡಲ ಅಧ್ಯಕ್ಷ ಸಂಜಯ ಪಾಟೀಲ, ಸಕ್ಕರೆ ಮಹಾಮಂಡಳದ ನಿರ್ದೇಶಕ ವಿಶ್ವನಾಥ ಕಮತೆ, ಪ್ರಲ್ಹಾದ ಪಾಟೀಲ ಮುಂತಾದವರು ಇದ್ದರು.