ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿಸುವ ಸಂಕಲ್ಪ : ಯಲಿಗಾರ
ಶಿಗ್ಗಾವಿ 24: ನಾನು ದುಡಿದ ಹಣದ ಶೇ 25 ರಷ್ಟು ಹಣವನ್ನು ಶಿಗ್ಗಾವಿ ಮತ್ತು ಸವಣೂರ ತಾಲೂಕಿನ ಮಕ್ಕಳಿಗೆ ಹಾಗೂ ರೈತರ ಅಭಿವೃದ್ಧಿಗೋಸ್ಕರ ವ್ಯಯ ಮಾಡುತ್ತೇನೆ ಎಂದು ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶೀಧರ ಯಲಿಗಾರ ಹೇಳಿದರು.
ಪಟ್ಟಣದ ಸಾಯಿನಗರದಲ್ಲಿರುವ ಸಾಯಿ ಮಂದಿರದಲ್ಲಿ ಸಿ.ಬಿ.ಯಲಿಗಾರ ಅವರ 2 ನೇ ಪುಣ್ಯ ಸ್ಮರಣಾರ್ಥ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಾಯಿ ಬಾಬಾರವರ ಜೀವನ ಚರಿತ್ರೆವುಳ್ಳ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಎಲ್ಲರೂ ವಿದ್ಯಾವಂತರನ್ನು ವಿದ್ಯಾವಂತರನ್ನಾಗಿ ಮಾಡಿದರೇ ನಾನು ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದು ಆ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮಕ್ಕೂ ಬೇರೆ ಸ್ಥಳಗಳಿಗೆ ಹೋದಾಗ ಅವಿಧ್ಯಾವಂತರನ್ನು ಹುಡುಕುತ್ತಿದ್ದೇನೆ ಏಕೆಂದರೆ ಅವರಲ್ಲಿ ಧೃಡವಾದ ಮಸಸ್ಸು ಇರುತ್ತದೆ ಏನೇ ಕೆಲಸ ಹೇಳಿದರು ಅದನ್ನು ಅಚ್ಚುಕಟ್ಟಾಗಿ ಮಾಡುವ ಮನೋಭಾವನೆ ಹೊಂದಿರುತ್ತಾರೆ ಎಂದರು.
ನಮ್ಮ ತಂದೆ ಧಾರವಾಡದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಸೈಟನ್ನು ಕೊಟ್ಟು ಬಡವರ ಪಾಲಿಗೆ ದೇವರಾದವರು ಇಂದಿಗೂ ಯಲಿಗಾರ ಸೈಟ ಅಂದರೆ ಮೊದಲಿಗೇ ತೆಗೆದುಕೊಳ್ಳಿ ಎಂದು ಹೇಳುತ್ತಾರೆ ಆದರೆ ನಾನು ಹುರುಳಿಕೊಪ್ಪಿಯಿಂದ ಶಿಗ್ಗಾವಿಗೆ ಒಂದು 1999 ರಲ್ಲಿ ಸಾಯಿ ನಗರದ ಸೈಟನ್ನು ಕಡಿಮೆ ಬೆಲೆಗೆ 40 ಸಾವಿರ ಗುಂಟೆಗೆ ತೆಗೆದುಕೊಳ್ಳಲು ವಿನಂತಿಸಿದರೇ ಎಲ್ಲರೂ ಅನುಮಾನಸ್ಪದದಿಂದ ನಮ್ಮನ್ನು ನೋಡಿದರು ಯಾರು ಹಣವನ್ನು ತುಂಬಿ ತೆಗೆದುಕೊಂಡಿದ್ದಾರೆ ಅವರು ಇಂದು ಭವ್ಯವಾದ ಸೂರ ಮಾಡಿಕೊಂಡಿದ್ದಾರೆ ಎಂದರು.
ನಾನು ಇಷ್ಟೆಲ್ಲಾ ಮಾಡಲು ಶಿರಡಿ ಸಾಯಿ ಬಾಬಾರವರ ಪ್ರೇರಣೆ ಏಕೆಂದರೆ 1999 ರಲ್ಲಿ ಬಹಳ ಕಷ್ಟದ ದಿನಗಳನ್ನು ಅನುಭವಿಸಿದ್ದೇನೆ ಯಾವಾಗ ಶಿರಡಿ ಬಾಬಾರ ದರ್ಶನ ಪಡೆದು ಬಂದ ನಂತರ ನನ್ನ ಕೆಲವೊಂದು ಕಾರ್ಯಗಳು ಯಶಸ್ವಿಯಾಗುತ್ತಾ ಸಾಗಿ ಇಂದಿಗೆ 25 ರಿಂದ 30 ನಗರಗಳಲ್ಲಿ ಸೈಟು ಖರೀದಿಸಿದ್ದು ಎಲ್ಲರೂ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಗಂಗೀಭಾವಿಯ ರೆಸಾರ್ಟನ್ನು ಭಾರತ ದೇಶದಲ್ಲಿ ಮಾದರಿ ರೆಸಾರ್ಟಾಗಿ ಮಾಡಲು ಕಂಕಣ ಬದ್ದನಾಗಿದ್ದೇನೆ ಅದಕ್ಕೆ ತಾಲೂಕಿನ ಜನತೆಯ ಸಹಾಯ ಸಹಕಾರ ಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪುಸ್ತಕ ಲೇಖಕ ಎಫ್.ಎಸ್.ಹಿರೇಮಠ, ಸಾಯಿ ಬಾಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಶಶೀಧರ ಸುರಗೀಮಠ, ಸದಸ್ಯ ವಿಶ್ವನಾಥ ವಾಲಿಶೆಟ್ಟರ, ಆರ.ಎಸ್.ಪಾಟೀಲ, ನ್ಯಾಯವಾದಿ ಹನುಮಂತ ಬಂಡಿವಡ್ಡರ, ಅಶೋಕ ಕಾಳೆ, ಸುರೇಶ ಹರಿಜನ, ನಾಗಣ್ಣಾ ಹಾವೇರಿ, ಶಿವಾನಂದ ಕುನ್ನೂರ ಸೇರಿದಂತೆ ಸಾಯಿ ನಗರದ ಸದ್ಭಕ್ತರು ಹಾಗೂ ಅರ್ಚಕರು ಉಪಸ್ಥಿತರಿದ್ದರು. ರೈತಧ್ವನಿ ಸಂಪಾದಕ ಬಸವರಾಜ ಕುರಗೋಡಿ ಕಾರ್ಯಕ್ರಮ ನಿರ್ವಹಿಸಿದರು.