ಯರಗಟ್ಟಿ

ಮಿಷನ್ ಇಂಧ್ರಧನುಷ್ಯ -2ನೇ ಸುತ್ತು ಲಸಿಕಾ ಕಾರ್ಯಕ್ರಮ ಸಭೆ

ಮಿಷನ್ ಇಂಧ್ರಧನುಷ್ಯ -2ನೇ ಸುತ್ತು ಲಸಿಕಾ ಕಾರ್ಯಕ್ರಮ ಸಭೆ

ಯರಗಟ್ಟಿ 10: ಪಟ್ಟಣ ತಹಶೀಲದಾರ ಸಭಾಂಗಣಪರಿಣಾಮಕಾರಿ ಮೀಶನ್ ಇಂದ್ರಧನುಷ್ಯ 5.0 ಲಸಿಕಾ ಕಾರ್ಯಕ್ರಮ ಸಭೆಯನ್ನು ಏರಿ​‍್ಡಸಲಾಗಿತು. 

ಸಭೆಯ ಅಧ್ಯಕ್ಷತೆಯನ್ನು ತಹಶೀಲ್ದಾರ ಎಂ ಎನ್‌. ಮಠದ ಇವರು ವಹಿಸಿಕೊಂಡಿದ್ದರು.ಮುಖ್ಯ ವೈಧ್ಯಾಧಿಕಾರಿಗಳಾದ ಡಾ ಬಿ ಎಸ್ ಬಳ್ಳೂರ ಇವರು ಮಾತನಾಡಿ ಪರಿಣಾಮಕಾರಿ ಮೀಶನ್ ಇಂದ್ರಧನುಷ್ಯ 5.0- ಅಭಿಯಾನದಲಿ ಎರಡನೇ ಸುತ್ತು ಸೆಪ್ಟಂಬರ್ 11 ರಿಂದ 16 ಜರುಗಲಿದೆ.ಇದರ ಫಲಾನುಭವಿಗಳು ಗರ್ಭಿಣಿಯರು , 5 ವರ್ಷದೊಳಗಿನ ಮಕ್ಕಳಾಗಿದ್ದಾರೆ. ಸೆಪ್ಟೆಂಬರ್ 12 ಮತ್ತು 13 ರಂದು 70 ಮಕ್ಕಳಿಗೆ,19 ಗರ್ಭಿಣಿಯರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಹೇಳಿದರು. 

ನಂತರ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ಆಯ್ ಆರ್ ಗಂಜಿ ಸದರಿ ಅಭಿಯಾನದಲ್ಲಿ ಯರಗಟ್ಟಿ ಪಟ್ಟಣದ ಎಲ್ಲ ಇಲಾಖೆಗಳ ಸಹಕಾರ ಅವಶ್ಯವಾಗಿದೆ. ಧಡಾರ ರೂಬೆಲ್ಲಾ ರೋಗಗಳ ನಿರ್ಮುಲನೆ ಹಾಗೂ 5 ವರ್ಷದೊಳಗಿನ ಮಕ್ಕಳಿಗೆ ಸಂಪೂರ್ಣ ಲಸಿಕೆ ಹಾಕುವದು ಈ ಅಭಿಯಾನದ ಉದ್ದೇಶವಾಗಿದೆ. 

ನಂತರ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಮದಡಿಯಲ್ಲಿ ತಂಬಾಕು ಸೇವನೆಯಿಂದ ಸಾರ್ವಜನಿಕರಿಗೆ ಆಗುವ ದುಷ್ಪರಿಣಾಮಗಳು ಇದರ ನಿಯಂತ್ರಣಕ್ಕಾಗಿ ಇರುವ ಕೊಟ್ಪಾ 2003 ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು. 

ಯರಗಟ್ಟಿ ತಾಲೂಕಾಮಟ್ಟದ ವಿವಿಧ ಇಲಾಖೆಯ ಬಿ. ಎಸ್‌. ಆಲದಕಟ್ಟಿ, ಎಸ್‌. ಬಿ. ಮಿಕಲಿ ಎಂ. ಎಸ್‌. ಮುಗಳಿಹಾಳ ಬಿ ಆರ್ ಕುಮರೇಶ, ಎಸ್‌. ಬಿ. ದೊಡ್ಡವಾಡ, ಬಿ. ಎಸ್‌. ಗುಗ್ಗರನಟ್ಟಿ, ಎಂ. ಬಿ. ಸುತಗಟ್ಟಿ ಎಸ್‌. ಬಿ. ಬೆಂಡಿಗೇರಿ ಹಾಗೂ ಇತರರು ಹಾಜರಿದ್ದರು.ರೇಖಾ ಗಿರಿಯವ್ವಗೋಳ ಇವರು ಸ್ವಾಗತಿಸಿ ಮಾಂತೇಶ ಕತ್ತಿ ವಂದಿಸಿದರು. 


ಸುದ್ದಿ ಓದಿ