ಶಂಕರ ಪಾಟೀಲ ಮುನೇನಕೊಪ್ಪಗೆ ಮಂತ್ರಿಸ್ಥಾನ :ರಾಜುಕುನ್ನೂರ ಹರ್ಷ
ಶಿಗ್ಗಾವಿ 06: ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪಗೆ ಮಂತ್ರಿಸ್ಥಾನ ಸಚಿವ ಸ್ಥಾನ ದೊರೆತಿರುವುದು ಹರ್ಷದಾಯಕ ಸಂಗತಿ ಉತ್ಸಾಹಿಗಳಾದ ಅವರಿಂದ ಅಭಿವೃದ್ಧಿ ಪರವಾದ ಕೆಲಸಗಳಾಗಲಿ ಎಂದು ಹಾವೇರಿ ಜಿಲ್ಲಾ ಪಂಚಾಯತರಾಜ ನಗರಘಟಕ ಸಂಚಾಲಕ ರಾಜುಕುನ್ನೂರ ಹೇಳಿದರಲ್ಲದೇ ಮಂತ್ರಿಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಶಂಕರ ಪಾಟೀಲ ಮುನೇನಕೊಪ್ಪಗೆ ಇದೆ ಎಂದರು.
ಬಿಜೆಪಿ ಹೈಕಮಾಂಡ ಅವರ ಸಾಮರ್ಥ್ಯವನ್ನು ಗುರುತಿಸಿ ಮಂತ್ರಿಸ್ಥಾನ ನೀಡಿದೆ ಎಂದು ಹೇಳಿದ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷಜೆ.ಪಿ ನಡ್ಡಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಚಂದನ ಮಂಜುನಾಥ ಕುನ್ನೂರ ಇದ್ದರು.