ನೂತನ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸಚಿವ ಸತೀಶ್ ಜಾರಕಿಹೋಳಿ ಭೂಮಿಪೂಜೆ
ಯರಗಟ್ಟಿ, 19 : ಪಟ್ಟಣದ ಕೋರ್ಟ್ ಆವರಣದಲ್ಲಿ ಈಚೆಗೆ ನೂತನ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೋಳಿ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಬಡವರಿಗೆ ಹಸಿವು ನೀಗಿಸಲು ಉಪಕ್ತವಾಗಿದೆ ಮತ್ತು ತಾಲ್ಲೂಕು ಆಸ್ಪತ್ರೆ, ರೈತ ಸಂಪರ್ಕ ಕೇಂದ್ರ, ವಾರದಲ್ಲಿ ಎರಡು ಸಂತೆ, ಜಾನುವಾರು ಸಂತೆ, ಕೋರ್ಟ್ ಇರುವುದರಿಂದ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ಇರುವುದರಿಂದ ಇಂದಿರಾ ಕ್ಯಾಂಟೀನಗೆ ಜನರು ಬರುತ್ತಾರೆ ಎಂದು ತಿಳಿಸಿದರು.
ಈ ವೇಳೆ ಗಣಪತಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು, ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ತಹಸೀಲ್ದಾರ್ ಎಂ.ಎನ್. ಮಠದ, ಪ. ಪಂ. ಮುಖ್ಯಾಧಿಕಾರಿ ಡಿ. ಎನ್. ತಹಶೀಲ್ದಾರ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದ್ದಬಸನ್ನವರ, ಪ. ಪಂ. ನಾಮನಿರ್ದೇಶಿತ ಸದಸ್ಯರಾದ ನಿಖಿಲ ಪಾಟೀಲ, ಹನುಮಂತ ಹಾರುಗೋಪ್ಪ, ಸಲೀಂಬೇಗ ಜಮಾದಾರ, ಮಂಜು ತಡಸಲೂರ, ಶಿವಾನಂದ ಕರಿಗೋಣ್ಣವರ, ಡಿ.ಕೆ. ರಪೀಕ್, ಭೀಮಪ್ಪ ದಳಾಯಿ, ಬಸವರಾಜ ಸತ್ತೂರಿ, ಭಾಸ್ಕರ ಹಿರೇಮೆತ್ರಿ, ಸುರೇಶ ಭಜಂತ್ರಿ, ಉಮೇಶ ಬಾಳಿ, ರವೀಂದ್ರ ಯಲಿಗಾರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ವಿಠ್ಠಲಗೌಡ ದೇವರಡ್ಡಿ, ಚಾಯಪ್ಪ ಹುಂಡೆಕಾರ, ಮಲಿಕಸಾಬ ಬಾಗವಾನ, ಪ್ರಕಾಶ ವಾಲಿ, ಬಂಗಾರೆಪ್ಪ ಹರಳಿ, ಉಮೇಶ ಮಾಗುಂಡನವರ ಸೇರಿದಂತೆ ಇತರರು ಇದ್ದರು.
ಹೇಳಿಕೆ : ಸಂಕೇಶ್ವರ-ನರಗುಂದ ರಾಜ್ಯ ಹೆದ್ದಾರಿಯನ್ನು ಅಗಲೀಕರಣ ಮಾಡುವ ಜತೆಗೆ ಸಮರ್ಕವಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಹಾಗೂ ಸತ್ತಿಗೇರಿ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಹಾಗೂ ಸಚಿವರನ್ನು ಆಹ್ವಾನಿಸಿ ಚಾಲನೆ ನೀಡಲಾಗುವುದು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ.