ತಾಳಿಕೋಟಿ

ಡೋಣಿ ನದಿ ಸೇತುವೆಗೆ ಭೇಟಿ ನೀಡಿದ ಸಚಿವ ಕತ್ತಿ

ಡೋಣಿ ನದಿ ಸೇತುವೆಗೆ ಭೇಟಿ ನೀಡಿದ ಸಚಿವ ಕತ್ತಿ

ತಾಳಿಕೋಟೆ: ಪಟ್ಟಣದಿಂದ ವಿಜಯಪುರ ರಸ್ತೆಯಲ್ಲಿರುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಶಿಥಿಲವಾಗಿರುವದಕ್ಕೆ ಕಳಪೆ ಕಾಮಗಾರಿ ಕಾರಣವಾಗಿದ್ದು, ಸಮಗ್ರ ತನಿಖೆಯನ್ನು ನಡೆಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಅರಣ್ಯ, ಆಹಾರ ಮತ್ತು ನಾಗರೀಕ ಸರಬರಾಜು ಇಲಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಸೂಚನೆ ನೀಡಿದರು. 

ಪಟ್ಟಣದಿಂದ ವಿಜಯಪುರ ರಸ್ತೆಯಲ್ಲಿರುವ ಡೋಣಿ ನದಿ ಶಿಥಿಲವಾದ ಸೇತುವೆಗೆ ಬೇಟಿ ನೀಡಿ ಪರೀಶೀಲಿಸಿದ ಸಚಿವರು ಸೇತುವೆ ನಿರ್ಮಾಣದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಸೇತುವೆ ನಿರ್ಮಾಣವಾಗಿ 25 ವರ್ಷಗಳಲ್ಲಿಯೇ ಸೇತುವೆ ಕುಸಿತ ಕಂಡಿದೆ. ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಕೂಡಲೇ ಸೇತುವೆ ನಿರ್ಮಾಣದ ಬಗ್ಗೆ ಸಮಗ್ರ ತನಿಖೆಯನ್ನು ನಡೆಸಿ ವರದಿಯನ್ನು ಸಲ್ಲಿಸಬೇಕು. ನೂತನ ಸೇತುವೆ ನಿರ್ಮಾಣ ಕುರಿತು ಕೈಕೊಂಡ ಕ್ರಮದ ಕುರಿತು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಸಿ.ಬಿ.ಚಿಕ್ಕಲಗಿ ಅವರಿಂದ ಮಾಹಿತಿಯನ್ನು ಪಡೆದುಕೊಂಡರು. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೆ ನೂತನ ಸೇತುವೆ ನಿರ್ಮಾಣದ ಕುರಿತು ಉಸ್ತುವಾರಿ ವಹಿಸಿಕೊಳ್ಳುವಂತೆ ಸೂಚನೆ ನೀಡಿದರು. ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಿಡಿಲಿನಿಂದ ಮೃತಪಟ್ಟ ದೇವರ ಹಿಪ್ಪರಗಿ ತಾಲೂಕಿನ ಜೈನಾಬಿ ನಜೀರ್‌ಅಹ್ಮದ್ ಸಿಪಾಯಿ ಅವರ ಕುಟುಂಬದವರಿಗೆ 5 ಲಕ್ಷ ಮತ್ತು ಎಮ್ಮೆಗೆ 30 ಸಾವಿರ ಪರಿಹಾರದ ಮಂಜೂರಾತಿ ಆದೇಶದ ಪ್ರತಿಯನ್ನು ಹಸ್ತಾಂತರಿಸಿದರು. 

ನಂತರ ಬೋಳವಾಡ ಗ್ರಾಮಕ್ಕೆ ಬೇಟಿ ನೀಡಿ ಪರೀಶೀಲನೆ ನಡೆಸಿದರು. ಸರಕಾರಿ ಶಾಲೆಗೆ ಬೇಟಿ ನೀಡಿ ಸರ್ಕಾರಿ ಶಾಲೆಯ ದುಸ್ಥಿತಿಯ ಬಗ್ಗೆ ಮುಖ್ಯಾಧ್ಯಾಪಕರಾದ ಎಸ್‌.ಎಂ.ಕುಪ್ಪಸ್ತ, ಶಿಕ್ಷಕಿ ಎಸ್‌.ಬಿ.ಪಾಟೀಲ ಅವರಿಂದ ಮಾಹಿತಿ ಪಡೆಡುಕೊಂಡರು. 

ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಹೆಚ್‌.ಡಿ.ಆನಂದಕುಮಾರ, ಎಸಿ ಮಹೇಶಕುಮಾರ ಮಾಲಗತ್ತಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಸಿ.ಬಿ.ಚಿಕ್ಕಲಗಿ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಬರಗಿಮಠ, ತಹಶೀಲ್ದಾರ ಶ್ರೀಧರ ಗೋಟೋರ, ತಾಪಂ ಎಡಿ ಎಸ್‌.ಎಸ್‌.ಬಿರಾದಾರ, ಡಿವಾಯ್‌ಎಸ್‌ಪಿ ಅರುಣಕುಮಾರ ಕೋಳೂರ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ