ಬಿಪಿಎಲ್ ಸಂಬಂಧ ಸಚಿವ ಕತ್ತಿ ಹೇಳಿಕೆ ಖಂಡನೆ
ಶಿಗ್ಗಾವಿ 15: ಮನೆಯಲ್ಲಿ ಟಿ.ವ್ಹಿ, ಬೈಕ್, ಪ್ರೀಡ್ಜ್ ಇದ್ದರೆ ಬಿಪಿಎಲ್ ಪಡಿತರ ಚೀಟಿ ರದ್ದು ಪಡಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ ಕತ್ತಿ ಹೇಳಿಕೆಯನ್ನು ಹಾವೇರಿ ಜಿಲ್ಲಾ ರೈತ ಸೇನಾ ಕರ್ನಾಟಕ ಜಿಲ್ಲಾ ಅಧ್ಯಕ್ಷ ಸಿದ್ಧಲಿಂಗೇಶ ಪಾಟೀಲ ಖಂಡಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 1 ಲಕ್ಷ 20 ಸಾವಿರಕ್ಕಿಂತ ಹೆಚ್ಚಿಗೆ ಆದಾಯ ಹೊಂದಿದ ಸರಕಾರಿ, ಅರೇ ಸರಕಾರಿ ಅಧಿಕಾರಿಗಳ ಆಕ್ರಮ ಬಿಪಿಎಲ್ ಕಾಡ್ರ್ಗಳನ್ನು ರದ್ದುಪಡಿಸುವುದು ಸ್ವಾಗತಾರ್ಹ. ಅದರೆ ಮನೆಯಲ್ಲಿ ಟಿವಿ, ಬೈಕ್, ಪ್ರೀಡ್ಜ್ ಇರಬಾರದು ಎಂಬುದು ಮೂರ್ಖತನದ ಹೇಳಿಕೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಟಿ.ವ್ಹಿ, ಬೈಕ್, ಪ್ರೀಡ್ಜ್ ಇವೆ. ಸಾಲಸೋಲ ಮಾಡಿ ಅಥವಾ ಅಡಮಾನ ಹಣ ಪಡೆದು ಕೆಲವರು ಇವುಗಳನ್ನು ಪಡೆದಿರುತ್ತಾರೆ. ಹೀಗೆ ಮಾಡಲು ಹೋದರೆ ಶೇ.99ರಷ್ಟು ಬಿಪಿಎಲï ಕಾರ್ಡ್ಗಳನ್ನು ರದ್ದುಪಡಿಸಬೇಕಾಗುತ್ತದೆ ಎಂದರು.
ಸಚಿವರು ತವರು ಜಿಲ್ಲೆಯಲ್ಲಿ ಮೊದಲಿಗೆ ಈ ಪ್ರಯೋಗ ಮಾಡಲಿ. ಯಶಸ್ವಿ ನಂತರ ಉಳಿದ ಜಿಲ್ಲೆಗಳಿಗೆ ಕಾರ್ಯರೂಪಕ್ಕೆ ತರಲಿ ಹಾಗೂ ಶೀಘ್ರ ನಿಮ್ಮ ನಿಲುವನ್ನು ವಾಪಸ್ಸು ಪಡೆಯಿರಿ. ಇಲ್ಲದಿದ್ದರೆ ನಿಮ್ಮ ಹಾಗೂ ಸರಕಾರದ ವಿರುದ್ಧ ರಾಜ್ಯದ ಬಡವರು ಮತ್ತು ಕೂಲಿ ಕಾರ್ಮಿಕರು, ರೈತರು ಹೋರಾಟ ಮಾಡಬೇಕಾಗುತ್ತದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.