ಧರ್ಮ ಮೈಗೂಡಿಸಿಕೊಂಡು ಬದುಕುವಾತ ಮಾನವನಾಗಬಲ್ಲ: ಸಚಿವ ಬೊಮ್ಮಾಯಿ
ಶಿಗ್ಗಾವಿ 8: ಧರ್ಮ ಮೈಗೂಡಿಸಿಕೊಂಡು ಬದುಕುವಾತ ಮಾನವನಾಗಬಲ್ಲ, ಹೀಗಾಗಿಯೇ ಲಿಂ.ಜಗದ್ಗುರು ವೀರಗಂಗಾಧರ ಮಹಾಸ್ವಾಮಿಗಳು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರಿ ಕಾಮ, ಕ್ರೋಧ, ಮೋಹ, ಲೋಹ, ಮದ, ಮತ್ಸರಗಳ ಸಂಕೋಲೆಯಲ್ಲಿ ಸಿಲುಕಿ ನರಳುವಾತ ಮನುಷ್ಯನಾದರೆ, ಪ್ರೀತಿ, ಕರುಣೆ, ಮಮತೆ, ವಿಶ್ವಾಸ, ನ್ಯಾಯ, ನೀತಿಯನ್ನು ಸಾರುತ್ತದೆ ಎಂದು ಗೃಹ, ಕಾನೂನು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಅರಳೆಲೆಮಠದ ಆವರಣದಲ್ಲಿ ಲಿಂ. ರುದ್ರಮಿನಿ ಶಿವಾಚಾರ್ಯ ಮಹಾಸವಾಮಿಗಳವರ 47 ನೇ ಪುಣ್ಯಾರಾಧನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಪೀಠವೇ ಭಕ್ತರ ಬಳಿಗೆ ಬಂದು ಭಕ್ತಿಯ, ಅಧ್ಯಾತ್ಮದ ಬೀಜವನ್ನು ಬೀತ್ತಿ ಭಕ್ತರು ರಂಬಾಪುರಿ ಪೀಠಕ್ಕೆ ತೆರಳಿ ಜ್ಞಾನಮೃತ ಪಡೆಯಬೇಕಾಗಿತ್ತು. ಆದರೆ ಈಗ ಧರ್ಮದ ಫಸಲನ್ನು ತೆಗೆಯುವ ಕ್ರಾಂತಿಕಾರಕ ಕಾರ್ಯವನ್ನು ಪ್ರಸ್ತುತ ರಂಬಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಮಹಾಸ್ವಾಮಿಗಳು ಮಾಡುತ್ತಾ ಬರುತ್ತಿದ್ದಾರೆ. ಅರಳೆಲೆಮಠದಲ್ಲಿ ಯಾವುದೇ ಧರ್ಮದ ಕಾರ್ಯನಡೆದರೂ ನಾನು ಶ್ರೀಮಠದ ಸೇವಾರ್ಥಿಯಾಗಿ ಮುಂಚಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
ಬಾಳೆಹೊನ್ನೂರಿನ ರಂಬಾಪುರಿ ಪೀಠದ ಜ. ಡಾ. ವೀರಸೋಮೇಶ್ವರ ಸ್ವಾಮಿಜಿ ಆರ್ಶೀವಚನ ನೀಡಿದರು.
ಲೋಕಸಬಾ ಮಾಜಿ ಸದಸ್ಯ ಮಂಜುನಾಥ ಕುನ್ನೂರ ಮಾತನಾಡಿ ತಾಲೂಕಿನಲ್ಲಿ ಧರ್ಮದ ಬೋದನೆ ಹಾಗೂiÁಚಾರ ವಿಚಾರ ಆದ್ಯಾತ್ಮಿಕ ಸ್ಥಳಕ್ಕೆ ಹೆಸರು ಪಡೆದ ಏಕೈಕ ಸ್ಥಳವೆಂದರೆ ಅದೇ ಅರಳೇಲೆಮಠದ ಪ್ರದೇಶದಲ್ಲಿದೆ ಎಂದರು.
ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಮಾತನಾಡಿ ಎಲ್ಲಿ ಧರ್ಮ ಇರುತ್ತದೆ ಅಲ್ಲಿ ನೆಮ್ಮದಿ ಇರುತ್ತದೆ ಧರ್ಮದ ಮೇಲೆ ವಿಶ್ವಾಸ ನಂಬಿಕೆ ಇಲ್ಲದೇ ಇರುವುದರಿಂದ ಕೊರೋನಾದಂತಹ ಮಾಹಾಮರಿ ಮುಖಾಂತರ ದೇವರ ಮೊರೆ ಹೋಗುವ ಪ್ರಸಂಗ ಬರುತ್ತದೆ ಎಂದರು.
ಸಮಾಜ ಸೇವಕ ಶಶೀಧರ ಯಲಿಗಾರ ಶ್ರೀಮಠದಿಂದ ರುದ್ರಮುನಿಶ್ವರ, ಡಾ. ಎಮ್.ಎಮ್.ತಿರ್ಲಾಪುರ ಹಾಗು ಡಾ.ರಾಣಿ ತಿರ್ಲಾಪುರ ಮಾತನಾಡಿದರು.
ಶಿಗ್ಗಾವಿ ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ ಎ.ಸಿ.ಅನ್ನಪೂರ್ಣ ಮುದುಕಮ್ಮನವರ, ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಭಾ.ಜ.ಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ರಾಜು ಕುನ್ನೂರ, ಬಸವರಾಜ ನಾರಾಯಣಪೂರ, ಬಸವರಾಜ ಕುರಗೋಡಿ, ಸೇರಿದಂತೆ ಇತರರು ಇದ್ದರು. ಡಾ. ಆರ್.ಎಸ್.ಅರಳೆಲೆಮಠ ಸ್ವಾಗತಿಸಿದರು