ಶಿಗ್ಗಾವ್

ವನಮಹೋತ್ಸವಕ್ಕೆ ಸಚಿವ ಬೊಮ್ಮಾಯಿ ಚಾಲನೆ

ವನಮಹೋತ್ಸವಕ್ಕೆ ಸಚಿವ ಬೊಮ್ಮಾಯಿ ಚಾಲನೆ

ಶಿಗ್ಗಾವಿ 11: ಪಟ್ಟಣದ ತಾಲೂಕ ಪಂಚಾಯತ ಆವರಣದ ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಹಾಗು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆಯ ನಿಮಿತ್ಯ ಸಸಿ ನೆಟ್ಟು, ನೀರುಣಿಸಿ ವನಮಹೋತ್ಸವ ಕಾರ್ಯಕ್ರಮಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಕರ್ನಾಟಕ ಪತ್ರಕರ್ತ ಸಂಘದ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಪುರಸಭೆ ಸದಸ್ಯ ಸಿದ್ದಾರ್ಥಗೌಡ ಪಾಟೀಲ, ಕಾರ್ಯನಿರತ ಪರ್ತಕರ್ತ ಸಂಘದ ಬಿ.ಎಸ್‌.ಹಿರೇಮಠ, ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ,  ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ, ಇಓ ಪ್ರಶಾಂತ ತುರಕಾಣಿ,  ಅರ್ಜುನ ಹಂಚಿನಮನಿ, ಆನಂದ ಸುಭೇದಾರ, ರಮೇಶ ವನಹಳ್ಳಿ, ಸೇರಿದಂತೆ ಎಲ್ಲ ತಾಲೂಕಾ ವರದಿಗಾರರು, ವಿತರಕರು ಉಪಸ್ಥಿತರಿದ್ದರು. 


ಸುದ್ದಿ ಓದಿ