ವಕೀಲರು ಸಾರ್ವಜನಿಕರ ನ್ಯಾಯಪರ ರೂವಾರಿಗಳು: ಕಲ್ಯಾಣದ ನಿದಿಗೆ 5 ಲಕ್ಷ ರೂ.ಗಳ ಭರವಸೆ-ಆರ್.ಶಂಕರ್
ರಾಣಿಬೆನ್ನೂರ.ಮಾ.22 ಸಾರ್ವಜನಿಕರ ಸೇವೆಯಲ್ಲಿರುವ ಮತ್ತು ಸಮಾಜದ ಎಲ್ಲ ಹಂತದ ನಾಗರೀಕರಿಗೆ ಬೇಕಾಗಿರುವ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಅವಶ್ಯವಿರುವ ವಕೀಲರ ಸೇವಾ ಕಾರ್ಯವು ಅತ್ಯಂತ ಸಹಕಾರಿಯಾಗಿದೆ ಅಂತಹ ಸೇವೆಯನ್ನು ನೀಡುವ ವಕೀಲರ ಸಂಘಕ್ಕೆ ತಾವು ತಡವಾಗಿ ಭೇಟಿ ನೀಡುವುದಕ್ಕೆ ಅನೇಕ ಕಾರಣಗಳಿವೆ. ಅವೆಲ್ಲವೂ ತಮಗೆಲ್ಲರಿಗೂ ತಿಳಿದ ವಿಚಾರವೇ ಆಗಿದೆ. ವಿಶೇಷವಾಗಿ ತಾವು ಶಾಸಕರಾಗಿ ಸಚಿವರಾಗಿದ್ದರೂ ರಾಜಕೀಯ ಅನೇಕ ರೀತಿಯ ಸ್ಥಿತ್ಯಂರಗಳ ಮಧ್ಯೆ ಸರ್ಕಾರದ ಬದಲಾವಣೆಗಾಗಿ ಮುಂದಾಗಿರುವ ಕಾರಣದಿಂದಾಗಿ ಸಂಘಕ್ಕೆ ಭೇಟಿನೀಡಲು ಸಾಧ್ಯವಾಗಲಿಲ್ಲ. ಭೇಟಿನೀಡುವ ಅದೃಷ್ಠ ಇಂದು ಕೂಡಿ ಬಂದಿದೆ ಎಂದು ತೋಟಗಾರಿಕೆ ರೇಷ್ಮೆ ಕೃಷಿ ಸಚಿವ ಆರ್.ಶಂಕರ್ ಹೇಳಿದರು.
ಅವರು ಶನಿವಾರ ಇಲ್ಲಿನ ವಕೀಲರ ಸಂಘದ ಭವನದಲ್ಲಿ ಸಂಘವು ಆಯೋಜಿಸಿದ್ದ ಸಚಿವರ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಸಂಘವು ನೀಡಿದ ಮನವಿ ಸ್ವೀಕರಿಸಿ ಮಾತನಾಡಿದರು. ಸಂಘಟನೆಗಳು ಪ್ರಬಲವಾಗಿ ಬೆಳೆಯಬೇಕು. ಅದರಿಂದ ಸಮಾಜದಲ್ಲಿ ಮತ್ತು ಸಂಘ ಅವಲಂಭಿತರಿಗೆ ಹಾಗೂ ಸಮಸ್ಯೆಗಳು ಬಂದಾಗ ಸೂಕ್ಷ್ಮವಾಗಿ ಪರಿಹರಿಸಿಕೊಳ್ಳಲು ಸಹಕಾರಿಯಾಗುತ್ತದೆ. ತಾವು ತಿಳಿದಂತೆ ರಾಣೀಬೆನ್ನೂರಿನ ವಕೀಲರ ಸಂಘಕ್ಕೆ ಬಹುದೊಡ್ಡ ಇತಿಹಾಸವಿದೆ. ಇಂತಹ ಸಂಘದ ಬೆಳವಣಿಗೆಗೆ ಮತ್ತು ಸಂಘವು ಇಡುವ ಯಾವುದೇ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂಧಿಸುವ ಮತ್ತು ಸಹಾಯ ಸಹಕಾರ ನೀಡುವ ಉದ್ದೇಶ ತಮ್ಮದಾಗಿದೆ ಎಂದರು.
ಹಿರಿಯ ನ್ಯಾಯವಾದಿ ಎಸ್.ಎಸ್.ಶಿರಗಂಬಿ ಹಾಗೂ ಅಧ್ಯಕ್ಷ ಬಿ.ಹೆಚ್.ಬುರಡಿಕಟ್ಟಿ ಅವರು ಗೌರವಪೂರ್ವಕವಾಗಿ ವಿವಿಧ ಬೇಡಿಕೆಗಳನ್ನು ಹೊತ್ತ ಮನವಿಯನ್ನು ನೀಡಿದರು. ಸ್ಪಂಧಿಸಿದ ಸಚಿವರು ಸಂಘದಲ್ಲಿರುವ ಸದಸ್ಯರಿಗೆ ಆಪತ್ಕಾಲದಲ್ಲಿ ವಿತರಿಸಲು ರೂಪಿಸಿರುವ ಕಲ್ಯಾಣನಿಧಿ ಯೋಜನೆ ಸೂಕ್ತವಾಗಿದ್ದು ಅದಕ್ಕೆ ತಾವು 5 ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳೀದರು. ಅಲ್ಲದೇ ಆವರಣದಲ್ಲಿ ಹೊಸದಾಗಿ ನಿರ್ಮಾಣಕ್ಕೆ ಕೈಗೊಳ್ಳುವ ಬೃಹತ್ ಕಟ್ಟಡಕ್ಕೆ ಸಂಬಂಧಿಸಿದಂತೆ ತಾವು ಸಹ ಕೈಜೋಡಿಸಿ ಇಲಾಖೆಯ ಸಚಿವರೊಂದಿಗೆ ಸಮಾಲೋಚಿಸಿ ಹೆಚ್ಚಿನ ಅನುದಾನವನ್ನು ದೊರಕಿಸುವದಾಗಿ ಹೃದಯಸ್ಪರ್ಶಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಕೆ.ಶಿವಲಿಂಗಪ್ಪ, ಆರ್.ಬಿ.ಸೊರಟೂರ, ವಿ.ಎಂ.ಜೋಗಾರ, ಜಿ.ಎಂ.ಕಾಗದಗಾರ, ವಿ.ಆರ್.ಕುಪ್ಪೇಲೂರು, ಎಚ್.ಡಿ.ಹೊನ್ನಕ್ಕಳವರ, ಜಿ.ಕೆ.ಮುಂಡಾಸದ, ಕುಮಾರ ಮಡಿವಾಳರ, ಎನ್.ಐ.ಹಲಗೇರಿ, ಕೋಟೇಗೌಡ್ರ ಸೇರಿದಂತೆ ಮತ್ತಿತರ ಗಣ್ಯರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.