ಕಥೆ ಮತ್ತು ವಿಶೇಷ ಲೇಖನಗಳು

ಮನಸ್ಸು ಮತ್ತು ನಾವು

ಮನಸ್ಸು ಮತ್ತು ನಾವು

-ಸಚೇತಾ ಜಿ. ಎಮ್

ಮನಸ್ಸು  ಬಹು ಚಂಚಲ ಅದನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಬಹು ಮುಖ್ಯ. ಮನುಷ್ಯನಿಗೆ ಮನಸ್ಸು ಮತ್ತು ದೇಹಗಳೆರಡು ಒಂದೇ ನಾಣ್ಯದ ಎರಡು ಮುಖಗಳಂತೆ. ಮನುಷ್ಯನಿಗೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಅಷ್ಟೇ ಅವಶ್ಯಕವಾದದ್ದು. ಆದರೆ ಇಂದು ಜನರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮತ್ತು ಕಾಳಜಿ ಕೊರತೆಯು ಕಂಡುಬರುತ್ತಿದೆ. ಸಮಾಜದಲ್ಲಿ ಮಾನಸಿಕ ಅಸ್ವಸ್ಥತೆಯ ಬಗ್ಗೆ ಕಳಂಕ ಭಾವನೆ ಪ್ರತಿಯೊಬ್ಬರಿಗೂ ಇದೆ. ಆದರೆ ಸಾಮಾನ್ಯ ಕಾಯಿಲೆಗಳಂತೆಯೇ ಮಾನಸಿಕ ಅಸ್ವಸ್ಥತೆಯನ್ನು ಕೂಡಾ ಗುಣಪಡಿಸಬಹುದಾಗಿದೆ.

ಮನುಷ್ಯನ ವಿಭಿನ್ನ ಸ್ವಭಾವ, ವಿಭಿನ್ನ ವ್ಯಕ್ತಿತ್ವಗಳು, ಭಿನ್ನವಾಗಿ ಯೋಚಿಸುವ ರೀತಿ, ಕಾಣುವ ಕನಸುಗಳು ಒಬ್ಬರಿಗಿಂತ ಇನ್ನೋಬ್ಬರಿಗೆ ಭಿನ್ನ. ಇಂದು ಮನುಷ್ಯ ಆಧುನಿಕತೆಗೆ ತನ್ನನ್ನು ತಾನು ಜೋಡಿಸಿಕೊಳ್ಳುವ ಆತುರದಲ್ಲಿ ಸಂಬಂಧಗಳ ಕೊಂಡಿಯನ್ನು ಕಳಚಿಕೊಳ್ಳುತ್ತಿದ್ದಾನೆ.ಇದು ಅವನಿಗೆ ಅರ್ಥವಾಗುವ ಮೊದಲೇ ಕಾಲ ಮೀರಿ ಸಮಸ್ಯೆಗೆ ಗುರಿಯಾಗುತ್ತಾನೆ. ಅದರಲು  ಇಂದಿನ ಯುವಜನತೆ ಮಾನಸಿಕ ಸಮಸ್ಯೆಗೆ ಬಹು ಬೇಗ ಗುರಿಯಾಗುತ್ತಿರುವುದು ವಿಷಾದನೀಯ ಸಂಗತಿ. ಇಂದು ಸಮೀಕ್ಷೆಯ ಪ್ರಕಾರ ಶೇಕಡಾ 75% ಭಾಗ ಮಾನಸಿಕ ಸಮಸ್ಯೆಗಳು ಯುವಜನತೆಯಲ್ಲಿ ಕಂಡು ಬರುತ್ತವೆ.ಯುವಜನತೆಯಲ್ಲಿ ಮಾನಸಿಕ ಸಮಸ್ಯೆಗೆ ಕಾರಣ ಹತ್ತು-ಹಲವು  ಮುಖ್ಯವಾಗಿ ಸಂವಹನದ ಕೊರತ,ೆ ಇಂದಿನ ಜೀವನ ಶೈಲಿ, ಒತ್ತಡ, ಹೊಂದಾಣಿಕೆಯ ಕೊರತೆ ಪ್ರಮುಖವಾದವು.

ಹೌದು ಇಂದು ಯುವಜನತೆಯಲ್ಲಿ ಎಲ್ಲ ಕ್ಷೇತ್ರದಲ್ಲು ಮತ್ತು ಸಂಬಂಧಗಳಲ್ಲೂ ಸಂವಹನದ ಕೊರತೆಯನ್ನು ಕಾಣಬಹುದಾಗಿದೆ. ಉದಾಹರಣೆ: ಪೋಷಕರು ಮತ್ತುಮಕ್ಕಳ ನಡುವೆ, ಗಂಡ-ಹೆಂಡತಿಯರ ನಡುವೆ, ಸಹೋದರರ ನಡುವೆ & ಸ್ನೇಹಿತರ ನಡುವೆ ಸಂಬಂಧಗಳ ನಿರ್ವಹಣೆ ಕಷ್ಟಕರವಾಗುತ್ತಿದೆ. ಆದ್ದರಿಂದ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವದು ಬಹು ಮುಖ್ಯ ಇಂತಹ ಮಾನಸಿಕ ಸಮಸ್ಯಗಳನ್ನು ಬಗೆಹರಿಸಲು ನಿಮಗೊಂದು ಅವಕಾಶವನ್ನು ಎಪಿಡಿ ಸಂಸ್ಥೆಯು ನಿಮಗೆ ನೀಡುತ್ತಿದೆ.

ಈ ನಿಟ್ಟಿನಲ್ಲಿ, ದಿ ಅಸೋಸಿಯೆಷನ್ ಅಪ್ ಪೀಪಲ್ ವಿತ್ ಡಿಸೆಬಿಲಿಟಿ(ಎಪಿಡಿ) ಸಂಸ್ಥೆಯು ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು 1959ರಲ್ಲಿ ಪ್ರಾರಂಭವಾಯಿತು. ಶಿಕ್ಷಣ, ವೃತ್ತಿ ತರಬೇತಿ, ಉದ್ಯೋಗ, ಅಂಗವಿಕಲರ ಸಂಘಟನೆ ಮತ್ತು ವಕಾಲತಿ, ಸಂಪನ್ಮೂಲ ಕ್ರೂಢಿಕರಣ ಮತ್ತು ಸಾಂಸ್ಥಿಕ ಅಭಿವೃದ್ಧಿ ಈ ಎಲ್ಲಾ ಕಾರ್ಯಕ್ರಮಗಳ ಮೂಲಕ ಸಂಸ್ಥೆಯು ಪ್ರಸ್ತುತ ವಾಷರ್ಿಕ-30000  ಅಂಗವಿಕಲರೊಡನೆ ನೇರವಾಗಿ ಬೆಂಗಳೂರು ನಗರ, ದಾವಣಗೆರೆ, ಬಿಜಾಪುರ, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳು ಸೇರಿ 15 ಬಿಲ್ಲೆಗಳಲ್ಲಿ   ಕಾರ್ಯ ನಿರ್ವಹಿಸುವುದರ ಜೊತೆಗೆ ರಾಜ್ಯದ ಇನ್ನಿತರೆ ಸಂಘ ಸಂಸ್ಥೆಗಳೊಡನೆ ಕೈ ಜೋಡಿಸಿ  ಕಾರ್ಯ ನಿರ್ವಹಿಸುತ್ತಿದೆ.

ಪ್ರಸುತ್ತ ಬೆಳಗಾವಿ ಜಿಲ್ಲೆಯಲ್ಲಿ 'ಸಮುದಾಯ ಮಾನಸಿಕ ಆರೋಗ್ಯ ಕಾರ್ಯಕ್ರಮ' ಸಂಸ್ಥೆಯ ಒಂದು ಪ್ರಮುಖ ಕಾರ್ಯವಾಗಿದ್ದು ಸಂಸ್ಥೆಯು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಂಯೋಜನೆಯೊಂದಿಗೆ ಸಮುದಾಯದಲ್ಲಿ ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಚಿಕಿತ್ಸೆ ನೀಡಿ, ಸಮಾಜದ ಮುಖ್ಯವಾಹಿನಿಗೆ ತರುವುದು ಮತ್ತು ಕಳಂಕವನ್ನು ತೊಡೆದುಹಾಕುವುದು ಸಮುದಾಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ಉದ್ದೇಶವಾಗಿದ್ದು, ಮಾನಸಿಕ ಅಸ್ವಸ್ಥರನ್ನು ಪ್ರಾರಂಭದ ಹಂತದಲ್ಲಿ ಗುರುತಿಸಿ, ಚಿಕಿತ್ಸೆಯ ಜೊತೆಗೆ ಆಪ್ತಸಮಾಲೋಚನೆ ನೀಡಿ ಗುಣಮುಖರಾಗಿ ಉದ್ಯೋಗದಲ್ಲಿ ತೊಡಗಲು ಪ್ರೆರೇಪಿಸುತ್ತಿದೆ.

ಅದ್ದರಿಂದ ನಿಮ್ಮ ಸುತ್ತಮುತ್ತ ಮಾನಸಿಕ ತೊಂದರೆಗೆ ಒಳಗಾದವರು ಕಂಡು ಬಂದಲ್ಲಿ ನಮಗೆ ತಿಳಿಸಿ.

ಸುದ್ದಿ ಓದಿ