ಕಾರವಾರ

ಮುಂಡಗೋಡಿನಲ್ಲಿ ಮಿಡ್ನೈಟ್ ಮರ್ಡರ್! ಹೋಟೆಲ್ ಒಳಗೇ ನುಗ್ಗಿ ಜಮೀರ್ ಹತ್ಯೆಗೈದ ಕಿರಾತಕರು!

ಮುಂಡಗೋಡಿನಲ್ಲಿ ಮಿಡ್ನೈಟ್ ಮರ್ಡರ್! ಹೋಟೆಲ್ ಒಳಗೇ ನುಗ್ಗಿ ಜಮೀರ್ ಹತ್ಯೆಗೈದ ಕಿರಾತಕರು!

ಲೋಕದರ್ಶನ ವರದಿ  

ಮುಂಡಗೋಡ 25: ಪಟ್ಟಣದ ಬಸ್ ನಿಲ್ದಾಣದ ಎದುರಿನ ಹೋಟೆಲ್ನಲ್ಲಿ ಶುಕ್ರವಾರ ತಡರಾತ್ರಿ ನಡೆದ ಕ್ರೂರ ಹತ್ಯೆ ಪ್ರಕರಣವು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ನೂರಾನಿಗಲ್ಲಿ ನಿವಾಸಿ ಜಮೀರ್ ಅಹ್ಮದ್ ದರ್ಗಾವಾಲೆ (38) ಅವರನ್ನು ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದೆ. ಘಟನೆಯ ಸಂಕ್ಷಿಪ್ತ ವಿವರ: ಜಮೀರ್ ಅಹ್ಮದ್ ದರ್ಗಾವಾಲೆ ಅವರು ಬಸ್ ನಿಲ್ದಾಣದ ಎದುರಿನ ಅಂಬಿಕಾ ಹೋಟೆಲ್ನಲ್ಲಿ ಇದ್ದಾಗ ನಾಲ್ವರು ಆರೋಪಿಗಳ ತಂಡ ಏಕಾಏಕಿ ಹೋಟೆಲ್ ಒಳಗೆ ನುಗ್ಗಿ ದಾಳಿ ನಡೆಸಿದರೆಂದು ತಿಳಿದುಬಂದಿದೆ. ಪೂರ್ವಯೋಜಿತ ಸಂಚಿನಂತೆ ಬಂದ ದುಷ್ಕರ್ಮಿಗಳು ಮರಣಾಂತಿಕ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದು, ಈ ಘಟನೆಯಿಂದ ಸ್ಥಳದಲ್ಲಿದ್ದ ಸಾರ್ವಜನಿಕರು ಭಯಭೀತರಾಗಿ ಚದರಿಕೊಂಡಿದ್ದಾರೆ. ಪೊಲೀಸರ ಪರೀಶೀಲನೆ: ಸುದ್ದಿ ತಿಳಿದ ಕೂಡಲೇ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಹಳೆಯ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ತನಿಖೆ ತೀವ್ರ: ಆರೋಪಿಗಳ ಬಂಧನಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರೀಶೀಲನೆ ನಡೆಯುತ್ತಿದೆ. “ಘಟನೆಯಲ್ಲಿ ಭಾಗಿಯಾದವರನ್ನು ಶೀಘ್ರವೇ ಬಂಧಿಸಲಾಗುವುದು,” ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕಾರವಾರ ಕ್ರಿಮ್ಸ್‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹಿನ್ನೆಲೆ ಮಾಹಿತಿ: ಮೃತ ಜಮೀರ್ ಅಹ್ಮದ್ ದರ್ಗಾವಾಲೆ ವಿರುದ್ಧ ಬೆಟ್ಟಿಂಗ್ ಸೇರಿದಂತೆ ಐದು ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆಯ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. 


ಸುದ್ದಿ ಓದಿ