ಶಿಗ್ಗಾವ್

ವಿಧಾನ ಪರಿಷತ್ ಚುನಾವಣೆಯ ಪ್ರಯುಕ್ತ ಮತಯಾಚನೆಯ ಪ್ರಚಾರ ಸಭೆ

ವಿಧಾನ ಪರಿಷತ್ ಚುನಾವಣೆಯ ಪ್ರಯುಕ್ತ ಮತಯಾಚನೆಯ ಪ್ರಚಾರ ಸಭೆ


ಲೋಕದರ್ಶನ ವರದಿ 

ಶಿಗ್ಗಾವಿ 02: ಗ್ರಾಮ ಸ್ವರಾಜ್ ಪರಿಕಲ್ಪನೆ, ಗಾಂಧೀಜಿಯವರ ಚಿಂತನೆಗಳನ್ನು ಇಟ್ಟುಕೊಂಡು ಗ್ರಾಮಗಳ ಅಭಿವೃದ್ದಿಗೆ ಸ್ಪಂದಿಸುವ ಮೂಲಕ ಜನರಿಗೆ ಸ್ಪಂದಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಿದರೆ, ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ತರಾತುರಿಯಲ್ಲಿ ದರ​‍್ ಮತ್ತು ಅಹಂಕಾರದ ರಾಜಕಾರಣ ಮಾಡುವುದು ಬಿಜೆಪಿ ಸರಕಾರದ ಸಾಧನೆಯೆಂದು ಕಾಂಗ್ರೆಸ್ ವಿಧಾನ ಪರಿಷತ್ ಅಭ್ಯರ್ಥಿ ಸಲೀಂ ಅಹ್ಮದ್ ಹೇಳಿದರು. 

ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ವಿಧಾನ ಪರಿಷತ್ ಚುನಾವಣೆಯ ಪ್ರಯುಕ್ತ ಮತಯಾಚನೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಹಿರಿಯ ರಾಜಕಾರಣಿಗಳಾದ ಎಸ್‌ಎಂ ಕೃಷ್ಣ ಮತ್ತು ಧರ್ಮಸಿಂಗ್ ಅವರ ಸರಕಾರದಲ್ಲಿ ದುಡಿದ ಅನುಭವವಿದೆ ಎಂದರು. 

ನಮ್ಮ ಕಾಂಗ್ರೇಸ್ ಪಕ್ಷ ನೀಡಿದ 177 ಬರವಸೆಗಳನ್ನ ಈಡೇರಿಸಿದ ತೃಪ್ತಿ ನಮಗಿದೆ, ಬೆಲೆ ಏರಿಕೆಯಲ್ಲಿ ಬಿಜೆಪಿ ಏನು ಮಾಡಿದೆ ಎಂಬುದು ಜನರಿಗೆ ಗೊತ್ತಿದೆ ಪೆಟ್ರೋಲ್ ಬೆಲೆ, ಗ್ಯಾಸ್ ಬೆಲೆ, ರೈತ ವಿರೋಧಿ ಕಾಯ್ದೆಗಳ ಮೂಲಕ ಜನರನ್ನು ಹೈರಾಣು ಮಾಡಿದೆ ಮತ್ತು ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿಯೂ ವಿಫಲವಾಗಿ 700 ರೈತರ ಸಾವಿಗೆ ಬಿಜೆಪಿ ಕಾರಣವಾಗಿದೆ ಮೊದಲೇ ಆ ರೈತ ವಿರೋಧಿ ಕಾಯ್ದೆಗಳನ್ನು ಬಿಟ್ಟಿದ್ದರೆ 700 ರೈತರ ಸಾವನ್ನು ಬಿಜೆಪಿ ತಪ್ಪಿಸಬಹುದಿತ್ತು ಎಂದರು. 

ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ, ಪಕ್ಷದ ಮುಖಂಡರಾದ ಎಂ ಎಂ ಹಿರೇಮಠ, ಎಂ ಎನ್ ವೆಂಕೋಜಿ ಸಂಜೀವಕುಮಾರ ನೀರಲಗಿ, ಸೋಮಣ್ಣ ಬೇವಿನಮದರ, ಷಣ್ಮೂಕಪ್ಪ ಶಿವಳ್ಳಿ, ಶ್ರೀಕಾಂತ ದುಂಡಿಗೌಡ್ರ, ಅಲ್ತಾಫ ಕಿತ್ತೂರ, ಗುರುನಗೌಡ ಪಾಟೀಲ್, ಎಂ ಎನ್ ವೆಂಕೋಜಿ ಮಾತನಾಡಿದರು.  

ಈ ಸಂದರ್ಭದಲ್ಲಿ ರಾಜೇಶ್ವರಿ ಪಾಟೀಲ್, ಪ್ರೇಮಾ ಪಾಟೀಲ್, ನಾಗಪ್ಪ ತಿಪ್ಪಕ್ಕನವರ, ಪ್ರಕಾಶ್ ಹಾದಿಮನಿ, ಶ್ರೀಕಾಂತ ಪೂಜಾರ, ಸುಧೀರ ಲಮಾಣಿ, ಬಿ ಸಿ ಪಾಟೀಲ್, ಹನುಮಂತ ಬಂಡಿವಡ್ಡರ, ಮಂಜುನಾಥ ಮಣ್ಣಣ್ಣವರ, ಶಿವಾನಂದ ಬಾಗೂರ, ಮಜೀದ ಮಾಳಗಿಮನಿ, ಯುಸಫಸಾಬ್ ಬಾವಿಕಟ್ಟಿ, ಬಾಬರ ಬಾವೋಜಿ, ಸೇರಿಂದತೆ ತಾಲೂಕಿನ ಕಾರ್ಯಕರ್ತರು ಚುನಾಯಿತ ಗ್ರಾ ಪಂ ಸದಸ್ಯರು ಇದ್ದರು.  


ಬಾಕ್ಸ್‌ ಸುದ್ದಿ : ಗ್ರಾಪಂ ಸದಸ್ಯರ ದ್ವನಿಯಾಗಿ ವಿಧಾನ ಪರಿಷತ್‌ನಲ್ಲಿ ಹೋರಾಟ ಮಾಡುವೆ, ಬಿಜೆಪಿ ಸರಕಾರ ಕಿವಿ, ಕಣ್ಣು ಇಲ್ಲದ ಸರಕಾರವಾಗಿದೆ, ಗೌರವಧನವಿಲ್ಲ, ನೌಕರರಿಗೆ ಸಂಭಳವಿಲ್ಲ, ಸರಕಾರ ಫಲಾಯಾನವಾದ ಮಾಡುತ್ತಿದೆ, ಎಲ್ಲ ವರ್ಗಗಳ ಜನರಿಗೆ ಸ್ಪಂದಿಸುವ ಕಾರ್ಯವಾಗಬೇಕಿದೆ, ಸದಸ್ಯರ ದ್ವನಿಯಾಗಿ ಫ್ರೀ ಬಸ್‌ಪಾಸ್, ವೈದ್ಯಕೀಯ ಸೌಲಭ್ಯ, ಸದಸ್ಯರ ಗೌರವ ಧನ ಹೆಚ್ಚಳ ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ತರಲು ಹೋರಾಟ ಮಾಡುತ್ತೇನೆ, ಹೋರಾಟ ನಿರಂತರವಾಗಿರುತ್ತದೆ. 

ಸಲೀಂ ಅಹ್ಮದ್ 

ವಿ.ಪ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ 


ಸುದ್ದಿ ಓದಿ