ಜನಮನ ಸೆಳೆದ ಸಂಸ್ಕೃತ ಭಕ್ತಾಮರ ಕಂಠಪಾಠ ಸ್ಪರ್ಧೆ
ಮಾಂಜರಿ 07: ಸಮೀಪದ ಸೈನಿಕ ಮಲಿಕವಾಡ ಗ್ರಾಮದಲ್ಲಿ ಶ್ರೀ 1008, ಭಗವಾನ ಮುನಿ ಸುವೃತನಾಥ ಜೈನ ಮಂದಿರದಲ್ಲಿ ಇಂದು ಏರಿ್ಡಸಿದ್ದ ಅಂತರ್ರಾಜ್ಯ ಮಟ್ಟದ ಸಂಸ್ಕೃತ ಭಕ್ತಾಮರ ಕಂಠಪಾಠ ಸ್ಪರ್ಧೆಗಳು ಜನಮನ ಸೆಳೆದವು.
ಚಿಕ್ಕ ಮಕ್ಕಳ ಗುಂಪಿನಲ್ಲಿ ಅನುಷ್ಕಾ ಸಾಂಗ್ಲೆ ಉಗಾರ ಬುದ್ರುಕ್ ಪ್ರಥಮ, ಪ್ರದ್ಯುಮ್ನ ನೇಜೆ ಕೋತಳಿ-ಶಿರೋಳ್ ದ್ವಿತೀಯ, ತನಿಷ್ಕಾ ಪಾಟೀಲ್ ಕೌಠಸರ- ಶಿರೋಳ ತೃತೀಯ, ಅಕ್ಷತಾ ಕಲಾಜೆ ಅಕ್ಕೋಳ ನಾಲ್ಕನೇ ಹಾಗೂ ಆರಾಧ್ಯ ಚೌಗುಲೆ ಶಿರಗುಪ್ಪಿ ಐದನೇ ಸ್ಥಾನ ಪಡೆದರು.
ದೊಡ್ಡವರ ಗುಂಪಿನಲ್ಲಿ ನಿರ್ಮಾಣ ಮಗದುಮ್ಮ ಮುಂಬಯಿ ಪ್ರಥಮ, ಮಯೂರಿ ಪಾಟೀಲ್ ಮೈಶಾಳ ದ್ವಿತೀಯ, ಸ್ನೇಹಲ್ ಪಾಟೀಲ ಶಿರಟಿ ತೃತೀಯ, ಶ್ರುತಿ ಚೌಧರಿ ಶಿರಡೊಣ ನಾಲ್ಕನೇ, ಪ್ರಿಯಾಂಕಾ ಖೋತ ಬೇಡಕಿಹಾಳ ಐದನೇ, ರಶ್ಮಿ ಕಲಕುಪ್ಪಿ ಬೆಳಗಾವಿ ಆರನೇ, ಅಮೃತಾ ಪಾಟೀಲ “ಮಾಂಗುರ ಏಳನೇ, ವರ್ಷಾ ಐನಾಪುರೆ ಚಂದೂರ 8ನೇ ಸ್ಥಾನ ಪಡೆದರು.
ಚಿಕ್ಕಮಕ್ಕಳ ಗುಂಪಿನಲ್ಲಿ 75 ಹಾಗೂ ದೊಡ್ಡವರ ಗುಂಪಿನಲ್ಲಿ 285 ಜನ ಸ್ಪರ್ಧಾಳುಗಳು ಭಾಗವಹಿಸಿದ್ದರು. ರಾಜಕುಮಾರ ಚೌಗುಲೆ, ಶ್ರೀಧರ ಮಗದುಮ್ಮ, ಭಾವುಸಾಬ ಹುಲಿಕೇರಿ, ಸುಧಾಕರ ಇಂಡಿ, ಅನೀಕಾಂತ್ ಜೈನ್, ವೀರೇಂದ್ರ ಜೈನ್, ನಿರ್ಮಲಕುಮಾರ, ಸಾಗರ, ಸುಜಾತಾ ಖೋತ ನಿಣಾಯಕರಾಗಿ ಕಾರ್ಯನಿರ್ವಹಿಸಿದರು. ಆದ್ದರಿಂದ ಕುಂತಲ್ ವಡೇರ್, ಶೀತಲ್ ದೇಸಾಯಿ, ಸುದರ್ಶನ ಪಾಟೀಲ್, ರಿಷಬ್ ಬಾಳಿಕಾಯಿ, ಪ್ರವೀಣ್ ಸ್ಪರ್ಧೆಯ ಯಶಸ್ಸಿಗೆ ಶ್ರಮಿಸಿದರು.
ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ ವಿಜೇತರಿಗೆ ನಗದು ಬಹುಮಾನ ಮತ್ತು ಶಿಲ್ಪಗಳನ್ನು ವಿತರಿಸಿ ಶುಭ ಹಾರೈಸಿ ಎಲ್ಲರೂ ಧಾರ್ಮಿಕ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವೀರಸೇವಾ ದಳದ ಕೇಂದ್ರ ಸಮಿತಿ ಅಧ್ಯಕ್ಷ ಬಾಳಾಸಾಹೇಬ ಪಾಟೀಲ, ಕಾರ್ಯದರ್ಶಿ ಅಜಿತ ಭಾಂಡೆ, ದರ್ಶನ ಉಪಾಧ್ಯ, ಅಜಿತ ಉಪಾಧ್ಯ, ಅರುಣ ಪಾಟೀಲ, ಡಿ.ಕೆ.ಪಾಟೀಲ, ಅಭಯ ಭಾಗಾಜೆ, ಅಭಯ ಕರೋಲೆ, ಸುನೀಲ್ ಪಾಟೀಲ್, ಆನಂದ ಉಗಾರೆ, ರಾಹುಲ್ ಪಾಟೀಲ್, ಪವನ ಮಗದುಮ್ಮ, ಅಪರ್ಣಾ ಚೌಗುಲೆ, ಜಯಪಾಲ ಚೌಗುಲೆ, ಸಖನ್ನಾ, ಸಿದ್ಧನಾಳೆ, ರಾವಸಾಹೇಬ ಸುರ್ಯವಂಶಿ, ಪ್ರವೀಣ ಪಾಟೀಲ, ಡಾ. ರಾವಸಾಹೇಬ ಕುನ್ನೂರೆ, ವಿಜಯ್ ಚಿಂಚವಾಡೆ, ಚಂದ್ರಕಾಂತ ಹಿರೇಕೋಡಿ, ದೇವಸ್ಥಾನ ಸಮಿತಿ ಅಧ್ಯಕ್ಷ ರಾಜೇಂದ್ರ ಪಾಟೀಲ, ಶ್ರೇಣಿಕ್ ಭೆಂಡಿಕಟಗೆ, ಸಂಜಯ ಕುನ್ನೂರೆ, ಬಾಳು ದೇಸಾಯಿ, ಜೈಪಾಲ ಬಾಳಿಕಾಯಿ, ತಾತೋಬಾ ಕಾಡೆ, ರಾಮಣ್ಣ ಭಂಡಿಕಟಗೆ, ಬಾಹುಬಲಿ ಕುನ್ನೂರೆ, ಸಾಗರ್ ಭಂಡಿಕಟಗೆ, ಆದಿತ್ಯ ಭಂಡಿಕಟಗೆ, ವೈಭವ ಬೆಂಡಿಕಟಗೆ ಮೊದಲಾದವರು ಉಪಸ್ಥಿತರಿದ್ದರು.