ಮಾ.27 ರಂದು ಮೇಗಾ ಲೋಕ ಅದಾಲತ್
ಕಾರವಾರ 09 : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕಉಚ್ಚ ನ್ಯಾಯಾಲಯದಆದೇಶದ ಮೇರೆಗೆಉತ್ತರಕನ್ನಡಜಿಲ್ಲೆಯಲ್ಲೂ ಮಾ. 27 ರಂದು ಲೋಕ ಅದಾಲತ್ನಡಿ, ರಾಜಿ ಸಂದಾನ ಮೂಲಕ ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದೆಂದು ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಗೋವಿಂದಯ್ಯ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕಚೇರಿಯಲ್ಲಿ ಮಂಗಳವಾರ ಪತ್ರಿಕಾಘೋಷ್ಟಿ ನಡೆಸಿ ಮಾತನಾಡಿ, ರಾಜಿ ಸಂದಾದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಜನಸಾಮಾನ್ಯರಖರ್ಚು ಹಾಗೂ ಸಮಯ ಉಳಿತಾಯ ಮಾಡುವ ಸಲುವಾಗಿ ಮೆಘಾ ಲೋಕದಾಲತ್ ನಡೆಸಲಾಗುತ್ತಿದ್ದು, ಚೆಕ್ಅಮಾನ್ಯ, ಮೋಟಾರ್ ವೆಹಿಕಲ್ಆ್ಯಕ್ಟ್, ಕ್ರಿಮಿನಲ್ಕಾಂಪೌಡಬಲ್ ಪ್ರಕರಣಗಳು, ರಸ್ತೆ ಅಫಘಾತಗಳು, ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ, 138 ಎನ್.ಎ,ಕಾರ್ಮಿಕ ಮತ್ತು ವೈವಾಹಿಕ ವಾಜ್ಯ ಪ್ರಕರಣಗನ್ನು ಸಮಾಜಸೇವಾಕಾರ್ಯಕರ್ತರುಅಥವಾ ವಕೀಲರನ್ನ ಒಳಗೊಂಡು ಒಟ್ಟೂಜಿಲ್ಲೆಯ 27 ಬೆಂಚುಗಳಲ್ಲಿ ರಾಜಿ ಸಂದಾನ ಮೂಲಕ ಕೇಸಗಳನ್ನು ಇತ್ಯರ್ಥ ಮಾಡಲಾಗುವುದುಎಂದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸುಸ್ತಿ ಸಾಲದ ಬಗ್ಗೆ ಸಾಲಗಾರರುಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಂಪರ್ಕಿಸಿದಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ರಾಜಿ ಸಂಧಾನ ಏರ್ಪಡಿಸಿ ಬಡ್ಡಿಯನ್ನು ಮನ್ನಾ ಮಾಡಿಸಿ ವಾಜ್ಯವನ್ನುಇತ್ಯರ್ಥಪಡಿಸಲು ಪ್ರಯತ್ನಿಸಲಾಗುತ್ತದೆ. ಅಲ್ಲದೆ ಸಹಕಾರಿ ಬ್ಯಾಂಕ್, ಸೊಸೈಟಿ ಪ್ರಕರಣಗಳನ್ನೂ ಕೂಡಾರಾಜಿ ಸಂದಾನ ಮಾಡಲಾಗುವುದುಎಂದರು.
ಜಿಲ್ಲೆಯಲ್ಲಿ ಫೆ. ಮುಕ್ತಾಯದ ವರೆಗೆ16005ಸಿವಿಲ್ ಮತ್ತು 16497 ಕ್ರಿಮಿನಲ್ ಸೇರಿದಂತೆಒಟ್ಟೂ 34502 ಪ್ರಕರಣಗಳಿರುತ್ತವೆ. ಇದರಲ್ಲಿಅಂದಾಜು 7000 ಪ್ರಕರಣಗಳನ್ನುರಾಜಿ ಸಂದಾನಕ್ಕಾಗಿಗುರುತಿಸಲಾಗಿದ್ದು, ಶೆ. 20% ರಷ್ಟುಅಂದರೆ3 ಸಾವಿರಕಿಂತ ಹೆಚ್ಚು ಪ್ರಕರಣಗಳನ್ನ ರಾಜಿ ಮಾಡುವಗುರಿ ಹೊಂದಲಾಗಿದೆ. ಕೊಂಕಣರೈಲ್ವೆ, ಸೀ ಬರ್ಡ್ ಹಾಗೂ ರಾಷ್ಟೀಯ ಹೆದ್ದಾರಿಯಂತಹ ಯೋಜನೆಗಳಿಗೆ ಜಿಲ್ಲೆಯಲ್ಲಿ ಭೂಸಾಧೀನ ಪಡಿಸಿಕೊಂಡ ಪ್ರಕರಣಗಳಿಗೆ ಸಂಬಂದಿಸಿದಂತೆ ಸರ್ಕಾರದಿಂದ 700 ಕೋಟಿರೂ ಮಂಜೂರಾಗಿದ್ದು, ಬಾಕಿ ಇರುವಪ್ರಕರಣಗಳ ಭೂ ಮಾಲಿಕರಿಗೆ ಪರಿಹಾರನೀಡುವಉದ್ದೇಶ ಹೊಂದಲಾಗಿದೆಎಂದರು.
ಮೆಘಾ ಲೋಕ್ಅದಾಲತ್ನಲ್ಲಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಂಡರೆ ಖರ್ಚು ಹಾಗೂ ಸಮಯ ಉಳಿತಾಯವಾಗುತ್ತದೆ, ಇದರಿಂದಕಕ್ಷಿದಾರರ ನಡುವೆಇರುವ ಸಂಭಂದವುಉತ್ತಮವಾಗಿ ಉಳಿದುಕೊಳ್ಳುತ್ತದೆ. ಲೋಕ್ಅದಾÀಲತ್ನಲ್ಲಿ ಬರುವ ಪ್ರಕರಣಗಳಿಗೆ ಯಾವುದೇಕೋರ್ಟ್ ಶಿಲ್ಕ ಕೊಡಬೇಕಾಗಿರುದಿಲ್ಲ, ನ್ಯಾಯಲಯದಲ್ಲಿ ಚಾಲ್ತಿ ಇರುವ ಪ್ರಕರಣ ಲೋಕ್ಅದಾಲತ್ನಲ್ಲಿರಾಜಿಯಾದಲ್ಲಿ ಶೇ 100ರಷ್ಟು ನ್ಯಾಯಾಲಯ ಶುಲ್ಕ ಹಿಂದಿರುಗಿಸಲಾಗುವುದು. ಅಲ್ಲದೇ ಲೋಕ್ಅದಾಲತ್ನಲ್ಲಿ ಹೊರಡಿಸಲಾದಅವಾರ್ಡ್ಅಥವಾಆದೇಶದ ವಿರುದ್ದ ಮೇಲ್ಮನವಿಗೆಅವಕಾಶವಿರುದಿಲ್ಲ. ಈ ರೀತಿಯಾಗಿ ಸಾಕಷ್ಟು ಅನುಕೂಲತೆಗಳಿರುವುದರಿಂದ ಕಕ್ಷಿದಾರರು ಹಾಗೂ ಸಾರ್ವಜನಿಕರು ಮಾ. 27 ರಂದು ಆಯೋಜಿಸಿರುವ ಮೆಘಾ ಲೋಕ್ಅದಾಲತ್ನ ಸದುಪಯೋಗಪಡಿಸಿಕೊಳ್ಳಬೆಕೆಂದುಅವರು ಹೆಳಿದರು.