ಕಾರವಾರ

ಜಿಲ್ಲೆಯಾದ್ಯಂತ ಅಗಸ್ಟ್‌ 14ರಂದು ಮೆಗಾ ಲೋಕ ಅದಾಲತ್

ಜಿಲ್ಲೆಯಾದ್ಯಂತ ಅಗಸ್ಟ್‌ 14ರಂದು ಮೆಗಾ ಲೋಕ ಅದಾಲತ್

ಕಾರವಾರ 12: ವಿವಿಧರೀತಿಯಪ್ರಕರಣಗಳನ್ನು ಪರಸ್ಪರರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವಉದ್ದೇಶದಿಂದಜಿಲ್ಲೆಯ ಸುಮಾರು 25 ನ್ಯಾಯ ಪೀಠಗಳಲ್ಲಿ ಅಗಸ್ಟ್‌ 14ರಂದುಕರ್ನಾಟಕರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ‘ಮೆಗಾ ಲೋಕ ಅದಾಲತ್(ಜನತಾ ನ್ಯಾಯಾಲಯ)’ಆಯೋಜಿಸಲಾಗಿದೆಎಂದುಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷಕುಮಾರ ಶೆಟ್ಟಿಎನ್‌.ಅವರು ಹೇಳಿದರು. 

ಜಿಲ್ಲಾ ನ್ಯಾಯಾಲಯಆವರಣದಲ್ಲಿರುವಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಅವರು ಮಾತನಾಡಿ, ಆಸ್ತಿ ಹಕ್ಕು, ಜಮೀನುಅತಿಕ್ರಮಣ, ಮೋಟಾರು ವಾಹನ ಕಾಯ್ದೆ, ಹಣಕಾಸಿನ ವ್ಯವಹಾರ, ಮರಳು ದಂಧೆ, ಕೌಟುಂಬಿಕ ಕಲಹ, ಪರಿಹಾರ ನೀಡಲು ವಿಳಂಬ, ಚಕ್ ಬೌನ್ಸ್‌, ವಿಚ್ಛೇದನ ಹಾಗೂವಿವಿಧ ಸಣ್ಣಪುಟ್ಟ ಜಗಳಕ್ಕೆ ಸಂಭಂದಿಸಿದಂತೆ ಜಿಲ್ಲೆಯಲ್ಲಿಒಟ್ಟು 36 ಸಾವಿರ​‍್ರಕರಣಗಳಿವೆ. ಈ ಪೈಕಿ 21882 ಪ್ರಕಟಣಗಳನ್ನು ಅಗಸ್ಟ್‌ 14ರಂದು ಜಿಲ್ಲೆಯ 25 ನ್ಯಾಯ ಪೀಠಗಳಲ್ಲಿ ನಡೆಯುವ ಮೆಗಾ ಅದಾಲತ್(ಜನತಾ ನ್ಯಾಯಾಲಯ)ದಲ್ಲಿಇತ್ಯರ್ಥಪಡಿಸಲಾಗುತ್ತಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ. ಅದಲ್ಲದೇಇತ್ಯರ್ಥಪಡಿಸಲಾಗುವ ಪ್ರಕರಣಗಳಿಗೆ ಸಂಬಂಧಿಸಿದವರಿಗೆ ಮಾಹಿತಿಯನ್ನು ನೀಡಲಾಗಿದೆಎಂದರು. 

ಕರ್ನಾಟಕರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದೇಶದಲ್ಲಿಯೇ ಮೊದಲ ಬಾರಿಗೆ ಲೊಕ್‌ಅದಾಲತ್‌ಜಾರಿಗೆತಂದಿದ್ದು, ಈ ಮೂಲಕ ಜನರಿಗೆ ಕಾನೂನು ತಿಳುವಳಿಕೆ ಮೂಡಿಸುವ ಹಾಗೂ ಪ್ರಕರಣದಾರರಿಗೆ ಪರಸ್ಪರವಾಗಿ ಸಮ್ಮತವಾದರೀತಿಯಲ್ಲಿ ನ್ಯಾಯಒದಗಿಸಲುಪ್ರಯತ್ನಿಸಿ ಈ ಕಾರ್ಯದಲ್ಲಿ ಯಶಸ್ವಿಯಾಗಿದೆ. ಇದರ ಪರಿಣಾಮವಾಗಿ ಬೇರೆರಾಜ್ಯದ ನ್ಯಾಯಾಲಯಗಳಲ್ಲಿಯೂ ಲೋಕ್‌ಅದಾಲತ್‌ನ್ನುಜಾರಿಗೆತರಲಾಗುತ್ತಿದೆ.ನ್ಯಾಯಾಂಗ ವ್ಯವಸ್ಥೆಯಲ್ಲಿ ವಿವಿಧ ನ್ಯಾಯ ಪೀಠಗಳಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ವಿರುದ್ಧಮೇಲ್ಪಂಕ್ತಿಯ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಬಹುದು. ಆದರೆಈ ಲೊಕ್‌ಅದಾಲತ್(ಜನತಾ ನ್ಯಾಯಾಲಯ)ನಲ್ಲಿಇತ್ಯರ್ಥಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಿಯೂ ಮೇಲ್ಮನವಿ ಸಲ್ಲಿಸಲುಅವಕಾಶವಿರುವುದಿಲ್ಲ. ಜೋತೆಗೆಇಲ್ಲಿಪರಸ್ಪರ ಪ್ರಕರಣದಾರರಿಗೆಕಾನೂನು ಬಗ್ಗೆ ಹೆಚ್ಚಿನಅರಿವು ಮೂಡಿಸಲಾಗುತ್ತದೆಎಂದರು. 

ಲೊಕ್‌ಅದಾಲತ್‌ನಲ್ಲಿಚೆಕ್ ಬೌನ್ಸ್‌-4072, ಮೋಟಾರು ವಾಹನ ಕಾಯ್ದೆ-1061, ವೈವಾಹಿಕ-415,ಅಮರ್‌ಜಾರಿ ಅರ್ಜಿ-3971, ಇತರೇ ಸಿವಿಲ್ ಪ್ರಕರಣ-2880, ಜೀವನಾಂಶಕೋರಿರುವಂತಹ 422,  ಕೆಪಿ ಆ್ಯಕ್ಟ, ಡಿಸಾಸ್ಟರ್ ಮ್ಯಾನೆಜ್‌ಮೆಂಟ್‌ಆ್ಯಕ್ಟ, ಐಎಂವಿ ಆ್ಯಕ್ಟಗೆ ಸಂಬಂದಿತ1871 ಮತ್ತುಇತರೇಕ್ರಿಮಿನಲ್3262 ಹಾಗೂ ವಿವಿದರೀತಿಯ ಪ್ರಕರಣಗಳು ಸೇರಿದಂತೆಒಟ್ಟು 21882 ಪ್ರಕರಣಗಳನ್ನುರಾಜಿ ಸಂದಾನ ಮೂಲಕಇತ್ಯರ್ಥಪಡಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು. 

ಪತ್ರಿಕಾಗೋಷ್ಠಿಯಲ್ಲಿಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಪದ್ಮರಾಜ್ ನಾಯ್ಕ್‌ ಉಪಸ್ಥಿತರಿದ್ದರು. 


ಸುದ್ದಿ ಓದಿ