ಯರಗಟ್ಟಿ

ಕಟಕೋಳ ಸಿದ್ರಾಯಜ್ಜವರ ಸಹಕಾರಿ ಸಂಘದ ಸಭೆ

ಕಟಕೋಳ ಸಿದ್ರಾಯಜ್ಜವರ ಸಹಕಾರಿ ಸಂಘದ ಸಭೆ

ಯರಗಟ್ಟಿ 15: ಸಮೀಪದ ಕಟಕೋಳ ಸಿದ್ರಾಯಜ್ಜನವರ ಶ್ರೀಮಠದಲ್ಲಿ ಕಟಕೋಳ ಸಿದ್ರಾಯಜ್ಜನವ ಸೌಹಾರ್ದ ಸಹಕಾರಿ ಸಂಘದ ಏಂಟನೇ ವರ್ಷದ ವಾರ್ಷಿಕ ಸಭೆ ಜರುಗಿತು. ಸಭೆ ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕ ಅಧ್ಯಕ್ಷಾರ ಅಭಿನವ ಸಿದ್ರಾಯಜ್ಜನವರ ಸಹಕಾರಿ ಸಂಘದ ಆಯ-ವ್ಯಯ ಓದಿದರು. ಬ್ಯಾಂಕ್ 2300 ಸದಸ್ಯರನ್ನು ಹೊಂದಿದ್ದು ಒಟ್ಟು ಬಂಡವಾಳ ರೂ.51,93,45,943 ರೂ. ಶೇರ ಬಂಡವಾಳ 16,60,700 ರೂ., ಸಾಲಗಳು 9,26,68,155 ರೂ, ನಿವ್ವಳ ಲಾಭ18,05,645 ರೂಗಳು ಎಂದು ಹೇಳಿದರು.  

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚ್ಚಿದಾನಂದ ಮಹಾಸ್ವಾಮಿಗಳು  ಸಹಕಾರಿ ಸಂಘ ನಮ್ಮ ಭಾರತ ದೇಶದಲ್ಲಿ ತುಂಬ ಉಪಯೋಗ ಇದೆ. ಸಹಕಾರ ಸ್ವಯಂಪ್ರೇರಣೆಯಿಂದ ಪರಸ್ಪರ ಸಾಮಾಜಿಕ, ಆರ್ಥಿಕ, ಮತ್ತು ಸಾಂಸ್ಕೃತಿಕ ಪ್ರಯೋಜನಕ್ಕಾಗಿ ಸಹಕಾರ ಜನರ ಸ್ವಾಯತ್ತ ಸಂಸ್ಥೆ ಎನಿಸಿದೆ. ಸಹಕಾರ ಲಾಭರಹಿತ ಸಮುದಾಯ ಸಂಘಟನೆಗಳು ಮತ್ತು ವ್ಯಾಪಾರಗಳೆಂದರೆ ಒಡೆತನ ಮತ್ತು ಅವರ ಸೇವೆಗಳು (ಒಂದು ಗ್ರಾಹಕ ಸಹಕಾರ) ಬಳಸಲು ಜನರು ಅಥವಾ ಅಲ್ಲಿ ಕೆಲಸ ಮಾಡುವ ಜನರು (ಕಾರ್ಮಿಕರೊಬ್ಬರು ಸಹಕಾರಿ) ಅಥವಾ ಅಲ್ಲಿ ವಾಸಿಸುವ ಜನರ (ಒಂದು ವಸತಿ ಸಹಕಾರಿ) ನಿರ್ವಹಿಸಲಾಗಿದೆ ಎಂದು, ಸಹ ಕೆಲಸಗಾರ ಸಹಕಾರ ಎಂದು ಮಿಶ್ರತಳಿಗಳು ಎಂದು ಗ್ರಾಹಕ ಸಹಕಾರ ಅಥವಾ ಸಾಲದ ಒಕ್ಕೂಟಗಳು ಆಗಿವೆ ಮತ್ತು ಸಹಕಾರಿ ಸಂಘದಿಂದ ಉತ್ತಮ ಸೇವೆ ನೀಡಿ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವಲ್ಲಿ ಮುಂದಾಗಬೇಕು ದು ಹೇಳಿದರು. 

ಗಣಪತಿ ಮಹಾರಾಜರು, ರೇವಣಸಿದ್ದೇಶ್ವರ ಸ್ವಾಮಿಗಳು, ಆಡಳಿತ ಮಂಡಳಿಯ ಅಧ್ಯಕ್ಷೆ ಪವಿತ್ರಾ ಪುಜೇರ, ಉಪಾಧ್ಯಕ್ಷ ತಿಪ್ಪ ಸಿಂಗಾರಗೊಪ್ಪ, ನಿರ್ದೇಶಕರುಗಳಾದ ಫಕೀರ​‍್ಪ ಸುಣಧೋಲಿ, ದತ್ತುರಾವ ಕದಂ, ವಿರಣ್ಣ ಶರಣ್ಣನವರ, ಸಿದ್ದವ್ವ ಪೂಜೇರ, ರಮೇಶ ಹದ್ದನ್ನವರ, ಲಕ್ಕಪ್ಪ ಹಿರಗನ್ನವರ, ಸೋಮಪ್ಪ ಕಂಬನ್ನವರ, ನಿಂಗಪ್ಪ ತಳನಟ್ಟಿ, ಯಲ್ಲಪ್ಪ ರಂಗನ್ನವರ, ಲಕ್ಷ್ಮೀಬಾಯಿ ಕದಂ, ಪ್ರಧಾನ ವ್ಯವಸ್ಥಾಪಕ ಚಿದಂಬರ ಕದಂ, ಸ್ಥಳಿಯರಾದ ಬಿ. ಎ. ದೇಸಾಯಿ, ಕೃಷ್ಣರಾವ ಸಾವಳಗಿ, ಬಿ. ಖ. ಲಾಳಸಂಗಿ, ಎ. ಕೆ. ಮಾಸ್ತಿ, ಸುರೇಶ ಶಾಬನ್ನವರ,  ಸೇರಿದಂತೆ ಗ್ರಾಹಕರು ಹಾಗೂ ಸದಸ್ಯರ ಸಭೆಯಲ್ಲಿ ಎಲ್ಲ ನಿರ್ದೇಶಕರ ಮತ್ತು ಸದಸ್ಯರು ಇದ್ದರು. 


ಸುದ್ದಿ ಓದಿ