ಬ್ಯಾಡ್ಗಿ

ಸದಸ್ಯರು ಗೈರು ಹಾಜರು ಸಭೆ ನಡೆಯದೆ ರದ್ದು

ಸದಸ್ಯರು ಗೈರು ಹಾಜರು ಸಭೆ ನಡೆಯದೆ ರದ್ದು
ಬ್ಯಾಡಗಿ: ಸದಸ್ಯರು ಗೈರು ಹಾಜರಾಗಿದ್ದರಿಂದ ಸಭೆ ನಡೆಯದೇ ರದ್ದಾದ ದೃಶ್ಯ.

ಬ್ಯಾಡಗಿ 29: ಪುರಸಭೆ ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಅವರ ಅಸಹಕಾರ ಧೋರಣೆ ವಿರೋಧಿಸಿದ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪಕ್ಷೇತರ ಸದಸ್ಯರು, ಸಭೆಗೆ ಗೈರು ಹಾಜರಾಗುವ ಮೂಲಕ ಮಂಗಳವಾರ ನಿಗದಿಯಾಗಿದ್ದ ಸಾಮಾನ್ಯ ಸಭೆಯು ಯಾವುದೇ ಚರ್ಚೆಯಾಗದೇ ರದ್ದಾದ ಘಟನೆ ನಡೆಯಿತು. 

ಯಾವುದೇ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಸಭೆಯು ದಿನಾಂಕ ಸೇರಿದಂತೆ ಅಜೆಂಡಾ ಸಿದ್ಧಪಡಿಸಿದ್ದು ಸದಸ್ಯರ ಆಕ್ರೋಶಕ್ಕೆ ಕಾರಣವೆನ್ನಲಾಗುತ್ತಿದೆ, ಪೂರ್ವನಿಗದಿಯಂತೆ ಬೆಳಿಗ್ಗೆ 11 ಗಂಟೆಗೆ ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಸಭೆಗೆ ಆಗಮಿಸಿದರಾದರೂ 11.30 ದಾಟಿದರೂ ಯಾವುದೇ ಸದಸ್ಯರು ಸಭೆಯಲ್ಲಿ ಪಾಲ್ಗೊಳಲಿಲ್ಲ. 

ತೆರೆಮರೆಯಲ್ಲಿ ಕೆಳಗಿಳಿಸುವ ಹುನ್ನಾರ: ಪುರಸಭೆಯಲ್ಲಿ ಪ್ರಸಕ್ತ ಬಿಜೆಪಿ 13, ಕಾಂಗ್ರೆಸ್ 6 ಹಾಗೂ 4 ಜನ ಪಕ್ಷೇತರ ಸದ ಸ್ಯರಿದ್ದಾರೆ, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದರಿಂದ 7 ವಾರ್ಡನಿಂದ ಪಕ್ಷೇತರರಾಗಿ ಆಯ್ಕೆಯಾಗಿದ್ದ ಕವಿತಾ ಅವರನ್ನು ಬಿಜೆಪಿ ಹೈ ಕಮಾಂಡ್ ಅಧ್ಯಕ್ಷೆಯನ್ನಾಗಿ ಮಾಡಿತ್ತು, ಇತ್ತೀಚೆಗೆ ಅಧ್ಯಕ್ಷೆಯ ನಡವಳಿಕೆ ಸದಸ್ಯರಿಗೆ ಇರಿಸುಮುರಿಸಾಗಿದ್ದು ಬಿಜೆಪಿ ಹಿಡಿತದಿಂದ ಆಡಳಿತ ತಪ್ಪುತ್ತಿರುವ ಬೆನ್ನಲ್ಲೇ, ಅಧ್ಯಕ್ಷ ಸ್ಥಾನದಿಂದ ಕೆಳಗಿಸುವ ಕಸರತ್ತು ತೆರೆಮರೆಯಲ್ಲಿ ಆರಂಭವಾ ಗಿತ್ತು, ಅವರಿಂದ ರಾಜೀನಾಮೆ ಪಡೆಯುವಂತೆ ಬಿಜೆಪಿ ಸದಸ್ಯರು ಹೈಕಮಾಂಡ್‌ಗೆ ಲಿಖಿತ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ, ಇದೀಗ ಸಭೆಗೆ ಗೈರು ಹಾಜರಾಗುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಆಶ್ಚರ‌್ಯ ಮೂಡಿಸಿದ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರ ನಡೆ:ಬಿಜೆಪಿ ಸದಸ್ಯರಲ್ಲಿನ ಭಿನ್ನಾಭಿಪ್ರಾಯ ಒತ್ತಟ್ಟಿಗಿರಲಿ ಕಾಂಗ್ರೆಸ್ ಪಕ್ಷದ 6 ಜನ ಮತ್ತು ಪಕ್ಷೇತರ ಮೂವರು ಸದಸ್ಯರೂ ಸಹ ಸಭೆಯಿಂದ ಹೊರಗುಳಿಯುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ, ಇದರಿಂದ ಕಾಂಗ್ರೆಸ್ ಸದಸ್ಯರ ನಡೆ ನಿಗೂಢವಾಗಿದ್ದು ಅವರೊಂದಿಗೆ ಪಕ್ಷೇತರರು ಸಹ ಗೈರಾಗಿ ಆಶ್ಚರ‌್ಯ ಮೂಡಿಸಿದ್ದಾರೆ. 

ಮುಖ್ಯಾಧಿಕಾರಿ ಮನವಿಗೆ ಸ್ಪಂದಿಸದ ಸದಸ್ಯರು:ಇವೆಲ್ಲದರ ಮಧ್ಯೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಸಮನ್ವಯ ಸೃಷ್ಟಿ ಸುವ ಪ್ರಯತ್ನದಲ್ಲಿ ಸದಸ್ಯರ ಮನವೊಲಿಸುವ ಪಯತ್ನ ನಡೆಸಿದರಾದರೂ ಪ್ರಯೋಜನವಾಗಲಿಲ್ಲ, ಇದರಿಂದ ಕೈಚೆಲ್ಲಿ ಕುಳಿತ ಮುಖ್ಯಾಧಿಕಾರಿಗಳು ಸಭೆಯನ್ನು ರದ್ದು ಮಾಡುವಂತೆ ಅಧ್ಯಕ್ಷರಿಗೆ ಸಲಹೆ ನೀಡಿದ್ದಾಗಿ ತಿಳಿದು ಬಂದಿದೆ. 

ಶಾಸಕರ ವಿಫಲ ಪ್ರಯತ್ನ: ಬೇರೆ ಕಾರ‌್ಯಕ್ರಮಕ್ಕೆ ತೆರಳಿದ್ದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಪುರಸಭೆಗೆ ಆಗಮಿಸಿದರು, ಅಧ್ಯಕ್ಷರು ಹಾಗೂ ಸದಸ್ಯರ ಮದ್ಯೆ ಎರ​‍್ಪಟಟಿರುವ ಭಿನ್ನಾಭಿಪ್ರಾಯ ಸರಿಪಡಿಸಲು ಯತ್ನಿಸಿದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ.. 

ಭಿನ್ನಭಿನ್ನ ಅಭಿಪ್ರಾಯಗಳಿವೆ ಆದರೆ ಭಿನ್ನಾಭಿಪ್ರಾಯವಿಲ್ಲ: ಸದಸ್ಯರ ನಡುವೆ ಭಿನ್ನಭಿನ್ನ ಅಭಿಪ್ರಾಯಗಳಿವೆ ಆದರೆ ಭಿನ್ನಾಭಿ ಪ್ರಾಯವಿಲ್ಲ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ಸಮನ್ವಯ ಸಾಧಿಸುವ ಕುರಿತು ಈಗಾಗಲೇ ಎರಡು ಸಭೆಗಳನ್ನು ನಡೆ ಸಲಾಗಿದೆ ಶೀಘ್ರದಲ್ಲೇ ಮತ್ತೊಮ್ಮೆ ಸಭೆ ಕರೆದು ಚರ್ಚೆ ನಡೆಸುವೆ..

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ.. 

ನೀಡಿದ್ದ ಗಡುವು ಮುಗಿದಿದೆ ಇನ್ನೇನಿದ್ದರೂ ಅವಿಶ್ವಾಸ: ಸರ್ವಸದಸ್ಯರ ಅಭಿಪ್ರಾಯ ಪಡೆದು ಒಮ್ಮತದ ನಿರ್ಣಯದಂತೆ ಅಧ್ಯಕ್ಷರಿಗೆ ಅತೀ ಗೌರವದಿಂದ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು, ಆದರೆ ಅವರ ಸರ್ವಾಧಿಕಾರಿ ಧೋರಣೆ ಮುಂದುವರೆದಿದ್ದು ಪಶಸ್ತಿ ಪಡೆದಂತಹ ಪುರಸಭೆಗೆ ಅಗೌರವವಾಗಿ ನಡೆದುಕೊಂಡಿದ್ದಾರೆ, ಇನ್ನೇನಿದ್ದರೂ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು..

ಬಾಲಚಂದ್ರಗೌಡ ಪಾಟೀಲ

ಪುರಸಭೆ ಸ್ಥಾಯಿ ಸಮಿತಿ ಛೇರಮನ್‌.. 

ಸುದ್ದಿ ಓದಿ