ವಿಮ್ಸ್ ಅಧಿಕಾರಿಗಳೊಂದಿಗೆ ಸಭೆ ಚಿಕಿತ್ಸೆ, ಆರೋಗ್ಯ ಸೌಲಭ್ಯ ವಿಮ್ಸ್ ರಾಜ್ಯಕ್ಕೆ ಮಾದರಿಯಾಗಲಿ: ತುಕಾರಾಂ
ಬಳ್ಳಾರಿ 02:ಬಳ್ಳಾರಿಯ ವಿಮ್ಸ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಆರೋಗ್ಯ ಸೌಲಭ್ಯ ನೀಡಿಕೆಯಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕು. ಈ ದಿಸೆಯಲ್ಲಿ ಅಗತ್ಯ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ವಿಮ್ಸ್ನ ನಿದರ್ೇಶಕರ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಮುಂದಿನ 30 ರಿಂದ 40 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಮ್ಸ್ನಲ್ಲಿ ಅಡ್ವಾನ್ಸ್ ಟೆಕ್ನಾಲಜಿ ಇಕ್ಯೂಪ್ಮೆಂಟ್ನ್ನು ಅಳವಡಿಸಬೇಕು. ಇಲ್ಲಿಗೆ ಬರುವ ರೋಗಿಗಳಿಗೆ ಔಷಧಿ ಕೊರತೆಯ ಕುರಿತು ದೂರುಗಳು ಕೇಳಿ ಬರಬಾರದು. ಆರೋಗ್ಯ ವಿಷಯದಲ್ಲಿ ಯಾವುದೇ ಹೊಂದಾಣಿಕೆ ನಡೆಯುವುದಿಲ್ಲ. ವಿಮ್ಸ್ನಲ್ಲಿ ನೀರಿನ ಲಭ್ಯತೆ ಕುರಿತು ಕೇಳಿದಾಗ, ವಿಮ್ಸ್ 3 ಲಕ್ಷ ಲೀ. ಸಾಮಥ್ರ್ಯದ ಒವರ್ ಹೆಡ್ ಟ್ಯಾಂಕ್ ಹೊಂದಿದೆ. ಆದರೆ ಸುಮಾರು 8 ಲಕ್ಷ ಲೀ. ನೀರಿನ ಟ್ಯಾಂಕ್ನ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ಹೇಳಿದರು. ಇದಕ್ಕಾಗಿ ಅಲ್ಲೀಪುರ ನಿಂದ ನೇರವಾಗಿ ವಿಮ್ಸ್ಗೆ ನೀರಿನ ಸಂಪರ್ಕ ಕಲ್ಪಿಸಲು ಅಗತ್ಯ ಯೋಜನೆ ರೂಪಿಸಿ, ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಸಲ್ಲಿಸುವಂತೆ ಸೂಚಿಸಿದ ಸಚಿವರು, ವಿಮ್ಸ್ ಚಿಕಿತ್ಸೆಗೆ ಮತ್ತು ಸೌಲಭ್ಯದಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.
ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಡಳಿತಾಧಿಕಾರಿಗಳು, ವೈದ್ಯರು, ಸಿಬ್ಬಂದಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಸರಿಯಾದ ಮಾಹಿತಿ, ಸಂವಹನ ಇಲ್ಲದೇ ವಿಮ್ಸ್ ಪರಿಸ್ಥಿತಿ ಹೀಗಾಗಿದೆ ಎಂದು ಸಚಿವರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬೆಡ್ ಲ್ಯಾಡರಿಂಗ್, ಐರನ್: ಬೆಡ್ ಲ್ಯಾಡರಿಂಗ್, ಐರನ್ ಮಾಡಲು 10 ಉಪಕರಣಗಳಲ್ಲಿ ಕೇವಲ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಸರಿಯಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ, ಅದನ್ನು ನಿರುಪಯುಕ್ತಗೊಳಿಸಿ, ಬೇರೆ ಉಪಕರಣಕ್ಕಾಗಿ ಇ-ಟೆಂಡರ್ ಮುಖಾಂತರ ಉತ್ತಮ ಗುಣಮಟ್ಟದ ಹಾಗೂ ಉತ್ತಮ ಸೇವೆ ನೀಡುವ ಪ್ರಮಾಣಿತ ಗುತ್ತಿಗೆದಾರರಿಗೆ ನೀಡಿ ಎಂದರು. ಕಳಪೆ ಬೆಡ್ನ್ನು ತೆಗೆದು ಹೊಸ ಗೇಜ್ ಇರುವ ಬೆಡ್ನ್ನು ಹಾಕಿಸಬೇಕು, ಪದೇ ಪದೇ ರಿಪೇರಿ ಮಾಡುವ ಕೆಲಸ ಮಾಡಬಾರದು. ಇದಕ್ಕಾಗಿ ಉತ್ತಮ ಪೂರೈಕೆದಾರರಿಗೆ ಗುತ್ತಿಗೆ ನೀಡಬೇಕು ಎಂದರು.
ಕ್ಯಾನ್ಸರ್ ಮತ್ತು ಮಕ್ಕಳ ಆಸ್ಪತ್ರೆಗೆ ಪ್ರತ್ಯೇಕವಾಗಿ ಆಸ್ಪತ್ರೆಯನ್ನು ಒದಗಿಸಲು ಅಧಿಕಾರಿಗಳು ಕೇಳಿಕೊಂಡಾಗ, ಇದಕ್ಕಾಗಿ ಕಟ್ಟಡಕ್ಕೆ ಬೇಕಾಗಿರುವ ಅನುದಾನವನ್ನು ಡಿ.ಎಂ.ಎಫ್, ಸಿ.ಎಸ್.ಆರ್ ಅಥವಾ ಸಕರ್ಾರದ ಹಣದಿಂದ ವ್ಯವಸ್ಥೆ ಮಾಡಲು ಅಗತ್ಯ ಪ್ರಸ್ತಾವನೆ ಸಿದ್ಧಪಡಿಸುವಂತೆ ಸೂಚನೆ ನೀಡಿದರು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ: ಗ್ರಂಥಾಲಯದಲ್ಲಿ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಿ, ಅಡ್ವಾನ್ಸ್ ಯು.ಪಿ.ಎಸ್, ಕಂಪ್ಯೂಟರ್, ಡಿಜಿಟಲ್ ಗ್ರಂಥಾಲಯ ಮಾಡಲು ಸೂಚಿಸಲಾಯಿತು. ವಿಮ್ಸ್ನಲ್ಲಿರುವ ಔಷಧಿಗಳನ್ನು ಕಳ್ಳತನದಿಂದ ಹೊರಗಡೆ ಸಾಗಾಣಿಕೆ ಮಾಡುವ ಕುರಿತು ದೂರುಗಳು ಕೇಳಿಬರುತ್ತಿವೆ. ಇದನ್ನು ತಡೆಗಟ್ಟಲು, ಔಷಧಿಗಳ ಮೇಲೆ ವಿಮ್ಸ್, ನಾಟ್ ಫಾರ್ ಸಪ್ಲೈ ಎಂದು ಸೀಲ್ ಹಾಕಬೇಕು. ಪ್ರತಿ ಮಾಹೆ ಔಷಧಿಯ ಲೆಕ್ಕವನ್ನು ಇ-ಪೋಟಲರ್್ ಮುಖಾಂತರ ಅಪ್ಡೇಟ್ ಮಾಡಬೇಕು. ಹೊರಗಡೆ ಔಷಧಿಯ ಚೀಟಿ ಇಟ್ಟಿಕೊಂಡು ರೋಗಿಗಳು ಪರದಾಡಬಾರದು. ರೋಗಿಗಳಿಗೆ ಪ್ರತಿಯೊಂದು ಸೌಲಭ್ಯಗಳು ಇಲ್ಲಿಯೇ ಸಿಗಬೇಕು ಎಂದರು. 8 ಕೋಟಿ ಎಫ್.ಡಿ: ಸಕರ್ಾರದ ಹಣವನ್ನು ಎಫ್.ಡಿ. ಠೇವಣಿ ಇರಿಸಿರುವ ಕುರಿತು ಮಾಹಿತಿ ಪಡೆದ ಸಚಿವರು, ಠೇವಣಿ ಇಡಲು ಯಾರು ಹೇಳಿದರು ? ಇದನ್ನೂ ಶೀಘ್ರವೇ ವಿಮ್ಸ್ ಬೇಕಾಗಿರುವ ಅವಶ್ಯಕ ವೈದ್ಯಕೀಯ ಉಪಕರಣಗಳಿಗೆ ಮತ್ತು ಡಯಾಲಿಸಿಸ್ಗೆ, ಐ.ಸಿ.ಯು ಯುನಿಟ್ಗೆ ಖಚರ್ು ಮಾಡಲು ಸೂಚಿಸಿದರು. ನಯಾ ಪೈಸಾ ಸಹ ದುರ್ಬಳಕೆ ಮಾಡಬಾರದು ಎಂದು ತಾಕೀತು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ವೈದ್ಯಕೀಯ ನಿದರ್ೇಶಕ ಡಾ.ಪಿ.ಜಿ.ಗಿರೀಶ್, ವಿಮ್ಸ್ ನಿದರ್ೇಶಕ ಡಾ.ಕೃಷ್ಣಸ್ವಾಮಿ.ಡಿ, ನಗರ ಶಾಸಕ ಸೋಮಶೇಖರ ರೆಡ್ಡಿ, ಪಾಲಿಕೆ ಸದಸ್ಯರು, ವಿಮ್ಸ್ ಆಡಳಿತಾಧಿಕಾರಿಗಳು, ವೈದ್ಯರು ಇದ್ದರು.