ಅಥಣಿ

ಕರೋನಾ ವಾರಿಯರ್ಸಗಳಿಗೆ ಔಷಧಿ ಕಿಟ್

ಕರೋನಾ ವಾರಿಯರ್ಸಗಳಿಗೆ ಔಷಧಿ ಕಿಟ್

ವೆಂಕಟೇಶ ದೇಶಪಾಂಡೆ

ಅಥಣಿ10: ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಕರೋನಾ ವಾರಿಯರ್ಸಗಳಾದ ಪೊಲೀಸ್, ಗೃಹರಕ್ಷಕ ದಳ, ಪೌರ, ಸರಕಾರಿ ಆಸ್ಪತ್ರೆ ಸಿಬ್ಬಂದಿಗಳಿಗೆ ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಒಳ ರೋಗಿಗಳಿಗೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ, ಕಟ್ಟಡ ಹಾಗೂ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುತ್ತಿರುವ ಕಾಮರ್ಿಕರಿಗೆ, ಅಲೆಮಾರಿಗಳಿಗೆ ಔಶಧ ಕಿಟ್ಟ, ಉಪಹಾರ ಹಾಗೂ ನೀರಿನ ಬಾಟಲಗಳನ್ನು ವಿತರಿಸಲಾಯಿತು.

ಗಜಾನನ ಮಂಗಸೂಳಿ ಮಾತನಾಡುತ್ತಾ 40 ದಿನಗಳ ಕೋವಿಡ್ ಲಾಕ್ಡೌನ್ ಸಮಯದಲ್ಲಿ ಪೊಲೀಸ್, ಗೃಹರಕ್ಷಕ ದಳ, ಪೌರ ಹಾಗೂ ಸರಕಾರಿ ಆಸ್ಪತ್ರೆ ಸಿಬ್ಬಂದಿಗಳು ಹಗಲು ರಾತ್ರಿ ಕೋವಿಡ್ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅನೇಕರಿಗೆ ಅನಾರೋಗ್ಯದ ತೊಂದರೆ ಕಾಣಿಸಿಕೊಂಡಿದ್ದರೂ ಕೂಡ ಅದನ್ನು ನಿರ್ಲಕ್ಷಿಸಿ ತಮ್ಮ ಸೇವೆಯನ್ನು ನಿರ್ವಹಿಸಿದ್ದಾರೆ ಇಂತಹ ವಾರಿಯರ್ಸಗಳ ಸೇವೆಯನ್ನು ನಾವಿಂದು ಗುರುತಿಸುವುದು ನಮ್ಮ ಕರ್ತವ್ಯವಾಗಿದೆ ಇದಕ್ಕಾಗಿಯೇ ಕಾಂಗ್ರೆಸ್ ಪಕ್ಷದ ಕಡೆಯಿಂದ ಅವರ ಸುರಕ್ಷತೆಗಾಗಿ ಔಶಧ ಕಿಟ್ಟ, ಉಪಹಾರ ಹಾಗೂ ನೀರಿನ ಬಾಟಲ್ಗಳನ್ನು ಅವರು ಕಾರ್ಯ ನಿರ್ವಹಿಸುತ್ತಿರುವ ಸ್ಥಳಕ್ಕೆ ಹೋಗಿ ವಿತರಿಸಿದ್ದೇವೆ ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ಇನ್ನಷ್ಟು ಸೇವಾ ಕಾರ್ಯಗಳನ್ನು ಅನುಷ್ಠಾನಗೊಳಿಸಲಿದ್ದೇವೆ ಎಂದರು.  ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಧುರೀಣರಾದ ಶ್ರೀಕಾಂತ ಪೂಜಾರಿ, ಅನೀಲ ಸುಣಧೋಳಿ, ಸುನೀಲ ಸಂಕ, ಶಿವು ಗುಡ್ಡಾಪೂರ, ಅಸ್ಲಂ ನಾಲಬಂದ, ಧರೆಪ್ಪ ಠಕ್ಕಣ್ಣವರ, ರವಿ ಭಡಕಂಬಿ, ರಾಜು ಜಮಖಂಡಿಕರ, ಮಂಜು ಹೋಳಿಕಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಕರೋನಾ ವಾರಿಯರ್ಸಗಳಿಗೆ ಔಷಧಿ ಕಿಟ್ ವಿತರಿಸಲಾಯಿತು.

ಸುದ್ದಿ ಓದಿ