ಮೀಡಿಯಾಕಪ್ 2021 ಕಾರವಾರ : ಲಾಂಛನ ಬಿಡುಗಡೆ
ಕಾರವಾರ 01: ಜಿಲ್ಲೆಯ ಪತ್ರಕರ್ತರಿಗಾಗಿ ಆಯೋಜಿಸಿರುವ ಮೀಡಿಯಾಕಪ್ಕಾರವಾರ 2021ಕ್ರಿಕೆಟ್ ಪಂದ್ಯಾವಳಿಯ ಲಾಂಛನವನ್ನುಗುರುವಾರ ಅನಾವರಣಗೊಳಿಸಲಾಯಿತು. ನಗರದಲ್ಲಿ ಏ.10 ಮತ್ತು 11ರಂದು ಪಂದ್ಯಾವಳಿಯು ನಡೆಯಲಿದ್ದು, ಕಾರವಾರದಎರಡು ತಂಡಗಳು ಸೇರಿದಂತೆಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ,ಭಟ್ಕಳ, ದಾಂಡೇಲಿ,ಜೋಯಿಡಾ, ತಾಲೂಕುಗಳ ಪತ್ರಕರ್ತರಎಂಟು ತಂಡಗಳು ಪಾಲ್ಗೊಳ್ಳಲಿವೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಪಂದ್ಯಾವಳಿಯ ವ್ಯವಸ್ಥಾಪಕರಾದ, ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಅಧ್ಯಕ್ಷ ಟಿ.ಬಿ.ಹರಿಕಾಂತ್ , ದೀಪಕ್ಕುಮಾರ್ ಶೇಣ್ವಿ, ನಾಗರಾಜ ಹರಪನಹಳ್ಳಿ, ಪ್ರಚಾರ ಸಮಿತಿಯ ಸದಾಶಿವ ಎಂ.ಎಸ್., ಉಪಾಧ್ಯಕ್ಷಗಿರೀಶ್ ನಾಯ್ಕ, ಶೇಷಗಿರಿ ಮುಂಡಳ್ಳಿ, ನವೀನ್ ಸಾಗರ ಬಿಡುಗಡೆಗೊಳಿಸಿದರು.
ಪಂದ್ಯಾವಳಿಗಳ ಬಗ್ಗೆ ಮಾತನಾಡಿದ ಟಿ,ಬಿ,ಹರಿಕಾಂತ ಹತ್ತು ವರ್ಷಗಳ ಹಿಂದೆಇದೇ ಮಾದರಿಯಕ್ರಿಕೆಟ್ ಪಂದ್ಯಾವಳಿ ನಡೆಸಿದ್ದವು. ಈಗ ಮತ್ತೆಜಿಲ್ಲೆಯ ಪತ್ರಕರ್ತರಿಗೆ ಪಂದ್ಯಾವಳಿ ಆಯೋಜಿಸಿದ್ದೇವೆ. ಪ್ರಾಯೋಜಕರ ನೆರವಿನಿಂದ ಪಂದ್ಯಾವಳಿ ನಡೆಯಲಿವೆ ಎಂದರು.ನಾಗರಾಜ್ ಹರಪನಹಳ್ಳಿ ಮಾತನಾಡಿ ಪತ್ರಕರ್ತರುಒಂದೆಡೆ ಸೇರಲುಇದು ಸದಾವಕಾಶ, ತಾಲೂಕಾ ಪತ್ರಕರ್ತರುಕ್ರಿಕೆಟ್ ನೆಪದಲ್ಲಾದರೂಒಂದೆಡೆ ಸೇರಿ ಪ್ರೀತಿ ವಿಶ್ವಾಸ ಹಂಚಿಕೊಳ್ಳುತ್ತೇವೆ. ಕ್ರೀಡೆ ಸಹ ನಮ್ಮನ್ನು ಬೆಸೆಯುತ್ತದೆ.ಪಂದ್ಯಾವಳಿಯ ಆಯೋಜನೆ ಹಿಂದೆಒಂದು ಸದುದ್ದೇಶವಿದೆಎಂದರು.ಅಲ್ಲದೇ ನಮ್ಮಲ್ಲಿ ಅನೇಕ ಪ್ರತಿಭಾವಂತಆಟಗಾರರುಇದ್ದಾರೆಎಂಬುದುಇಲ್ಲಿ ಬೆಳಕಿಗೆ ಬರಲಿದೆಎಂದರು.
ಪಂದ್ಯಾವಳಿಯು ಮಾಲಾದೇವಿ ಮೈದಾನದಲ್ಲಿ ನಡೆಯಲಿದ್ದು, ಕಾರವಾರ ವಾರಿಯರ್ಸ್, ಕಾರವಾರ ಫೈಟರ್ಸ್, ಶಿರಸಿ ಸ್ಟಾರ್ಸ್, ಕುಮಟಾರೈಡರ್ಸ್, ಹೊನ್ನಾವರ ಹಂಟರ್ಸ್, ಭಟ್ಕಳ ಮೀಡಿಯಾ ವಾರಿಯರ್ಸ್, ಅಂಕೋಲಾ ಲಗಾನ್ ಹಾಗೂ ಜೊಯಿಡಾ ಮತ್ತುದಾಂಡೇಲಿಯ ಕಾಳಿ 11 ತಂಡಗಳು ಭಾಗವಹಿಸಲಿವೆ.
ಪಂದ್ಯದಚಾಂಪಿಯನ್ತಂಡಕ್ಕೆ 25 ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ಅಪ್ತಂಡಕ್ಕೆ 15 ಸಾವಿರ ನಗದು ಹಾಗೂ ಆಕರ್ಷಕಟ್ರೋಫಿದೊರೆಯಲಿದೆ. ನಗದು ಬಹುಮಾನವನ್ನು ನೇತ್ರಾಣಿಅಡ್ವೆಂಚರ್ಸನಗಣೇಶ್ ಹರಿಕಂತ್ರ ಹಾಗೂ ಮೀನುಗಾರರ ಮುಖಂಡರಾಜುತಾಂಡೇಲ್ ಪ್ರಯೋಜಿಸಿದ್ದಾರೆ. ಚಾಂಪಿಯನ್ಸಟ್ರೋಫಿಯನ್ನು ದೀಪಕ್ ಹೋಗಾ ನಾಯ್ಕ, ರನ್ನರ್ಅಪ್ತಂಡದಟ್ರೋಪಿಯನ್ನುರಾಜು ನೀಡಲಿದ್ದಾರೆ. ಇದರೊಂದಿಗೆಉತ್ತಮ ಪ್ರದರ್ಶನ ನೀಡಿದಆಟಗಾರರಿಗೆ ವೈಯಕ್ತಿಕ ಬಹುಮಾನಗಳೂ ಇವೆ ಎಂದುತಂಡದ ವ್ಯವಸ್ಥಾಪಕರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.