ಶಿಗ್ಗಾವ್

ಭಗತಸಿಂಗರವರ ದೇಶಪ್ರೇಮ ಯುವ ಪೀಳಿಗೆಗೆ ಪ್ರೇರಣೆಯಾಗಲಿ: ಮ್ಯಾಗೇರಿ

ಭಗತಸಿಂಗರವರ ದೇಶಪ್ರೇಮ ಯುವ ಪೀಳಿಗೆಗೆ ಪ್ರೇರಣೆಯಾಗಲಿ: ಮ್ಯಾಗೇರಿ

ಶಿಗ್ಗಾವಿ 24: ಇಂದು ಭಗತಸಿಂಗ, ರಾಜಗುರು, ಸುಖದೇವರವರು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ದಿನವಾಗಿದ್ದು ಅವರ ದೇಶಪ್ರೇಮ ಸರ್ವಕಾಲಕ್ಕೂ ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಭಾಜಫ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.ಪಟ್ಟಣದ ಅಂಚೆ ಕಚೇರಿ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ವತಿಯಿಂದ ಶಹೀದ ದಿವಸದ ನಿಮಿತ್ಯ ಪಂಜಿನ ಮೇರವಣಿಗೆ ಚಾಲನೆ ನೀಡಿ ಮಾತನಾಡಿ ದೇಶಕ್ಕಾಗಿ ಏನನ್ನಾದರೂ ಮಾಡೇವು ಎಂಬ ಅವರ ದೇಶಭಕ್ತಿಯನ್ನು ಇಂದಿನ ಯುವಕರು ಅವರ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಜೀವನವು ಸಹಿತ ಆದರ್ಶಮಯವಾಗಿರುತ್ತದೆ ಎಂದರು.

ರಾಜ್ಯ ಯುವ ಮೋರ್ಚಾ ಕಾರ‍್ಯಕಾರಿಣಿ ಸದಸ್ಯ ನರಹರಿ ಕಟ್ಟಿ ಮಾತನಾಡಿ ಅವರು ಈ ದೇಶದ ಸ್ವಾತಂತ್ರ್ಯಕ್ಕಾಗಿ 12ನೇ ವಯಸ್ಸಿನಲ್ಲಿಯೇ ದೇಶ ಪ್ರೇಮವನ್ನು ಮೈಗೂಡಿಸಿಕೊಂಡು ಸಂಪೂರ್ಣವಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ದ ಹೋರಾಡಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ವೀರ ಸ್ವಾತಂತ್ರ್ಯಗಾರರಾಗಿದ್ದಾರೆ ಎಂದರು.ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ ಮಾತನಾಡಿ ಇವರ ದೇಶ ಪ್ರೇಮವನ್ನು ಆಧಾರವಾಗಿಟ್ಟುಕೊಂಡು ಜಾತಿ, ಧರ್ಮ, ಪಂಥ ಬೇದ ಮರೆತು ಸಮೃದ್ದ ಭಾರತ ದೇಶವನ್ನು ಕಟ್ಟೋಣ ಎಂದರು.ತಾಲೂಕ ಅಲ್ಪ ಸಂಖ್ಯಾತ ಅಧ್ಯಕ್ಷ ಶರೀಫ ನದಾಪ ಮಾತನಾಡಿ ಭಗತ ಸಿಂಗರು ತಮ್ಮ ಕ್ರಾಂತಿಕಾರಕ ಚಿಂತನೆಗಳಿಂದ ದೇಶ ಪ್ರೇಮದ ಕಿಡಿ ಹೊತ್ತಿಸಿ ಆಕ್ರೋಶದ ಜ್ವಾಲೆ ಸೃಷ್ಟಿಸಿ ಬ್ರಿಟಿಷರ ಎದೆ ನಡುಗುವಂತೆ ಮಾಡಿದ ಮಹಾನ ಕ್ರಾಂತಿಕಾರಿಯಾಗಿದ್ದರು ಎಂದರು ಮೆರವಣಿಗೆಯಲ್ಲಿ  ರೇಣುಕನಗೌಡ ಪಾಟೀಲ, ಬಸವರಾಜ ನಾರಾಯಣಪೂರ, ಪ್ರತೀಕ ಕೊಳೇಕರ, ಷಣ್ಮುಖ ಮಾದರ, ವಿನಯ ಮುಂಡಗೋಡ, ಕಾಶೀನಾಥ ಕಳ್ಳಿಮನಿ. ಚೇತನ ಕಲಾಲ, ಸಚೀನ ಮಡಿವಾಳರ, ಚನ್ನವೀರ ನೀರಲಗಿ, ಬಸವರಾಜ ಕಲ್ಲಪ್ಪನವರ, ರಾಘವೇಂದ್ರ ಅತಡಕರ, ಮಂಜುನಾಥ ಮಿರ್ಜಿ, ಸಂತೋಷ ಕಟ್ಟಿಮನಿ, ಬಸವರಾಜ ಮೇಲಿನಮನಿ, ನಿರ್ಮಲಾ ಹೆಡೆಪ್ಪನವರ, ರತ್ನಾ ಬನ್ನಿಕೊಪ್ಪ, ಭಾರತೀ ರಾಂಪೂರಮಠ ಸೇರಿದಂತೆ ನೂರಾರು ಯುವಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ