ಮಾತಾ ಭಾಗೀರಥಿ ರಥೋತ್ಸವ ಕಾರ್ಯಕ್ರಮ
ಇಂಡಿ: ತಾಲೂಕಿನ ಗೋಳಸಾರ ಗ್ರಾಮದ ಶ್ರೀ ಸದ್ಗರು ಪುಂಡಲಿಂಗೇಶ್ವರ ಮಠದ ಆವರಣದಲ್ಲಿ ಮಾತಾ ಭಾಗೀರಥಿ ರಥೋತ್ಸವ ಕಾರ್ಯಕ್ರಮ ಮಠದ ಪೀಠಾಧಿಪತಿ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ವಿಜ್ರಂಭಣೆಯಿಂದ ಜರುಗಿತು.
ಇದಕ್ಕೂ ಮುಂಚೆ ಪ್ರಭು ಸಿದ್ದರಾಯ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಪುರವಂತರ ಕುಣಿತ, ಡೊಳ್ಳಿನ ವಾಧ್ಯ ವೈಭವದೊಂದಿಗೆ ಅದ್ದೂರಿಯಾಗಿ ಜರುಗಿತು. ರಥೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಸಾವಿರಾರು ಜನರು ಪಾಲ್ಗೊಂಡಿದ್ದರು. ಶ್ರದ್ದೆ, ಭಕ್ತಿಯಿಂದ ಭಕ್ತರು ತೇರು ಎಳೆದರು.