ಕರುನಾಡು ಯುವ ಸಮಿತಿಗೆ ಮಸ್ತಾನಸಾಬ ರಾಜೇಸಾಬ ಬಾಗವಾನ ನೇಮಕ
ಗೋಕಾಕ 26: ಕರುನಾಡು ಯುವ ಸಮಿತಿಗೆ ಗೋಕಾಕ ತಾಲೂಕು ಕಾರ್ಯದರ್ಶಿಯಾಗಿ ಗೋಕಾಕ ನಗರದ ನಿವಾಸಿ ಮಸ್ತಾನಸಾಬ ರಾಜೇಸಾಬ ಬಾಗವಾನ ನೇಮಕಗೊಂಡಿದ್ದಾರೆ.
ಕನ್ನಡ ನಾಡು ನುಡಿ,ಜಲ ರಕ್ಷಣೆಗೆ ಬದ್ಧವಾಗಿ ಕಾರ್ಯ ಮಾಡುತ್ತಿರುವ ಕರುನಾಡು ಯುವ ಸಮಿತಿ ಅಡಿಯಲಿ ನಿಷ್ಠೆಯಿಂದ ಕಾರ್ಯ ಮಾಡುತ್ತ ಸಂಘಟನೆ ಮಾಡಲು ಸೂಚನೆ ಮಾಡಿದ್ದಾರೆ.
ಇವರನ್ನು ಕರುನಾಡು ಯುವ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ ಇಳಿಗೇರ ನೇಮಕ ಮಾಡಿ ಆದೇಶ ನೀಡಿದ್ದಾರೆ. ಕನ್ನಡ ನಾಡು, ನುಡಿ, ನೆಲ, ಸಂಸ್ಕೃತಿ ಸಂಘಟನೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.