ಶಿಗ್ಗಾವ್

ಶಿಗ್ಗಾವಿ ಹೆಸ್ಕಾಂ ಕಚೇರಿ ಎದುರು ಬೃಹತ್ ಪ್ರತಿಭಟನೆ

ಶಿಗ್ಗಾವಿ ಹೆಸ್ಕಾಂ ಕಚೇರಿ ಎದುರು ಬೃಹತ್ ಪ್ರತಿಭಟನೆ

ಶಿಗ್ಗಾವಿ 17 : ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ರಿಂದ 8 ತಾಸು ವಿದ್ಯುತ್ ನೀಡುವಂತೆ ಆಗ್ರಹಿಸಿ ತಾಲೂಕಾ ಬಿಜೆಪಿ ಮಂಡಳದ ವತಿಯಿಂದ ಶಿಗ್ಗಾವಿ ಹೆಸ್ಕಾಂ ಕಚೇರಿ ಎದುರು ಬೃಹತ್ ಪ್ರತಿಭಟನೆಯನ್ನು ಸೋಮವಾರ ಹಮ್ಮಿಕೊಳ್ಳಲಾಯಿತ್ತು. 

ತಹಶೀಲ್ದಾರ ಸಂತೋಷ ಹಿರೇಮಠ ಹಾಗೂ ಹೆಸ್ಕಾಂ ಅಧಿಕಾರಿ ವಿನುತಾ ಅವರಿಗೆ ಮನವಿ ಅರ​‍್ಿಸಿದ ಬಿಜೆಪಿ ಮುಖಂಡರು, ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸ ಯೋಜನೆಗಳ ಅನುಷ್ಠಾನವಾಗಿಲ್ಲ, ಕೇವಲ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಆಡಳಿತ ಮಾಡುತ್ತಿದ್ದಾರೆ, ರೈತರ ಕಷ್ಟ ಇವರಿಗೆ ಕಾಣುತ್ತಿಲ್ಲ, ಬೆಳೆದು ನಿಂತ ಪಸಲು ಒಣಗಿ ಹಾಳಾಗುವಂತೆ ಮಾಡಲಾಗುತ್ತಿದೆ, ಲೋಡ್‌ಶೆಡ್ಡಿಂಗ್ ಮಾಡಿ ರಾಜ್ಯ ಕಾಂಗ್ರೇಸ್ ಸರಕಾರ ಇದೊಂದು ರೈತ ವಿರೋಧಿ ಸರ್ಕಾರವಾಗಿ ಪರಿಣಮಿಸಿದೆ. 

ಬೆಳೆ ಹಾನಿ, ಮಧ್ಯಂತರ ಪರಿಹಾರ ಹಣ ಹಾಕದೇ ರೈತರ ಜೀವದ ಜೊತೆ ಚಲ್ಲಾಟವಾಡುತ್ತಿದೆ ಎಂದು ಬಿಜೆಪಿ ಮುಖಂಡರು ತೀರ್ವ ಅಕ್ರೋಷ ಹೊರಹಾಕಿದರು. 

ತಾಲೂಕಾ ಬಿಜೆಪಿ ಅದ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಕಾಂಗ್ರೇಸ್ ಸರಕಾರ ಗುತ್ತಿಗೆದಾರರಿಂದ ಕಮೀಷನ್ ರೂಪದಲ್ಲಿ ಹಣ ಹೊಡೆಯುತ್ತಿದೆ, 40 ರಿಂದ 50 ರೂ ಕೋಟಿಗಟ್ಟಲೆ ಹಣ ಗುತ್ತಿಗೆದಾರರ ಸಂಬಂಧಿಕರ ಮನೆಯಲ್ಲಿ ಸಿಗುವುದಕ್ಕೂ ಮತ್ತು ಗುತ್ತಿಗೆದಾರರ ಸಂಘವು ಮುಖ್ಯ ಮಂತ್ರಿಗಳಿಗೆ ಭೇಟಿಯಾಗಿ 50ಅ ರಷ್ಟು ಬಿಲ್ ಪಾವಿತಿಸಿರಿ ಎಂದು ಮನವಿ ಕೇಳಿದಕ್ಕೂ ಸಂಬಂಧವಿದೆ ಎಂದು ಅನುಮಾನ ವ್ಯಕ್ತಪಡಿಸಿದರು. 

ಮುಖಂಡ ಶಶಿಧರ ಹೊನ್ನಣ್ಣವರ ಮಾತನಾಡಿ, ಕಾಂಗ್ರೇಸ್ ಸರಕಾರ ಇದೊಂದು ಭ್ರಷ್ಟಾಚಾರದ ಸರ್ಕಾರವಾಗಿದ್ದು, ಹಣದ ಶೋಧನೆಗಾಗಿ ಮತ್ತು ಸಿಬಿಐ ತನಿಖೆಗೊಳಪಡಿಸಬೇಕು. ರೈತರಿಗೆ ದಿನಕ್ಕೆ 8 ಘಂಟೆ 3 ಪೇಸ್ ವಿದ್ಯುತ್ ನೀಡಬೇಕು ಜೊತೆಗೆ ಬೆಳೆಹಾನಿ, ಬೆಳೆವಿಮೆ ನೀಡಬೇಕು, ಭೂಸಿರಿ ಪಿ.ಎಂ ಕಿಸಾನ 4000 ಸರ್ಕಾರ ಮುಖ್ಯ ಮಂತ್ರಿ ವಿಧ್ಯಾ ನಿಧಿ ಯೋಜನೆ, ಡಿಸೆಲ್ ಸಹಾಯಧನ ಯೋಜನೆ ಸೇರಿದಂತೆ ರೈತರ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಡಾ, ಮಲ್ಲೇಶಪ್ಪ ಹರಿಜನ, ಕರಿಯಪ್ಪ ಕಟ್ಟಿಮನಿ, ನರಹರಿ ಕಟ್ಟಿ, ಶ್ರೀಕಾಂತ ಬುಳ್ಳಕ್ಕನವರ, ಜೆಡಿಎಸ್ ತಾಲೂಕಾದ್ಯಕ್ಷ ಈರಣ್ಣ ನವಲಗುಂದ, ರೇಣುಕನಗೌಡ ಪಾಟೀಲ, ಉಮೇಶ ಅಂಗಡಿ, ವಿಶ್ವನಾಥ ಹರವಿ, ದೇವಣ್ಣ ಚಾಕಲಬ್ಬಿ, ಹನುಮಂತಪ್ಪ ಹರಿಜನ, ಹನುಮಂತಪ್ಪ ಗುಳೇದ, ಯಲ್ಲಪ್ಪ ಶಿಂದೆ, ಸಂತೋಷ ಕಟಗಿ, ವೀಣಾ ಹಿರೇಮಠ, ಶಿವಾನಂದ ಕುದುರಿ, ಸಂಜನಾ ರಾಯ್ಕರ್, ಪ್ರತೀಕ ಕೋಳೆಕಾರ, ಸಚಿನ ಮಡಿವಾಳರ, ಕಾಶಿನಾಥ ಕಳ್ಳಿಮನಿ, ವಿನಯ್ ಮುಂಡಗೋಡ, ಪ್ರಶಾಂತ ಬಡ್ಡಿ ಸೇರಿದಂತೆ ಬಿಜೆಪಿ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು. 


ಸುದ್ದಿ ಓದಿ