ಶಾಸಕ ಜಗದೀಶ ಗುಡಗುಂಟಿ ವಿರುದ್ಧ ಬೃಹತ್ ಪ್ರತಿಭಟನೆ
ಜಮಖಂಡಿ 18: ಪತ್ರಕರ್ತರಿಗೆ ಅವಮಾನ ಮಾಡಿದ್ದು ಅಲ್ಲದೇ ಗುಂಡಾವರ್ತನೆ ಮೆರೆದಿರುವದು ಶಾಸಕ ಜಗದೀಶ ಗುಡಗುಂಟಿ ಅವರ ವಿರುದ್ಧ ಪತ್ರಕರ್ತರು ಪ್ರತಿಭಟನೆ ನಡೆಸಿ, ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಮುಧೋಳ ತಹಶೀಲ್ದಾರ ವಿನೋದ ಹತ್ತಹಳ್ಳಿ ಅವರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದರು. ಅದರ ಜೊತೆಗೆ ಪ್ರತಿ ರವಿವಾರ ಮೆಡಿಕಲ್ ಅಂಗಡಿಗಳು ಮತ್ತು ಆಸ್ಪತ್ರೆಗಳು ಬಂದ್ ಇರುವ ಕಾರಣ ರೋಗಿಗಳಿಗೆ ತುಂಬಾ ತೊಂದರೆ ಆಗುತ್ತದೆಂದು ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಮುಧೋಳ ನಗರದ ತಹಶೀಲ್ದಾರ ಕಚೇರಿ ಆವರಣದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ವಿರುದ್ಧ ಘೋಷಣೆಯನ್ನು ಕೂಗಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು.
ಪತ್ರಕರ್ತ ಶಶಶಿಕಾಂತ ತೇರದಾಳ ಮಾತನಾಡಿ, ದೇಶದಲ್ಲಿ ಪತ್ರಿಕಾರಂಗ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತದೆ. ಸಮಾಜದಲ್ಲಿನ ಅಕ್ರಮ, ಅತ್ಯಾಚಾರ, ಭ್ರಷ್ಟಾಚಾರ ಹೀಗೆ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಪತ್ರಕರ್ತರು ಸದಾಕಾಲವೂ ಕೆಲಸ ನಿರ್ವಹಿಸುತ್ತಾರೆ. ಅಂತಹ ಪತ್ರಕರ್ತರ ಮೇಲೆ ಶಾಸಕ ಜಗದೀಶ ಗುಡಗುಂಟಿ ಅವರು ಪತ್ರಕರ್ತರ ಸಂಘಟನೆಗಳು ಅಧಿಕೃತವಾಗದೆ. ಅನಧಿಕೃತವಾಗಿದ್ದಾವೆ ಎಂದು ಹೇಳುವದನ್ನು ತೀವ್ರವಾಗಿ ಖಂಡಿಸುತ್ತೇವೆ. ಮತ್ತು ಪತ್ರಕರ್ತರ ಮೇಲೆ ಗಂಡಾವರ್ತನೆ ಮೆರೆದು. ಅವಮಾನ ಮಾಡಿದ್ದಾರೆ. ಅದನ್ನು ತೀವ್ರವಾಗಿ ಖಂಡಿಸಿದರು. ಶಾಸಕರಿಗೆ ಅ.10 ರವರಗೆ ಕ್ಷಮೆಯನ್ನು ಕೇಳಲು ಗಡುವನ್ನು ಸಹ ನೀಡಲಾಗಿತ್ತು. ಆದರೆ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ಬರುವ ಮೂರನಾಲ್ಕು ದಿನಗಳಲ್ಲಿ ಕ್ಷೇಮೆ ಕೇಳದೆ ಹೋದರೆ ಶಾಸಕರ ಮನೆಗೆ ಮುತ್ತಿಗೆ ಹಾಕಿ ಉಗ್ರವಾದ ಹೋರಾಟ ಮಾಡವ ಜೊತೆಗೆ ಜಿಲ್ಲೆ ಹಾಗೂ ರಾಜಾದ್ಯಂತ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಕೆಯನ್ನು ನೀಡಿದರು.
ಪತ್ರಕರ್ತರ ಅಶೋಕ ಗುರಕೇರ ಮಾತನಾಡಿ, ಜನಸಾಮಾನ್ಯರು, ಪ್ರತಿಯೊಬ್ಬರು ತಮ್ಮ ಬೇಡಿಕೆಯನ್ನು ಮತ್ತು ಸಮಸ್ಯೆಗಳನ್ನು ಶಾಸಕರ ಮುಂದೆ ಹೇಳಬೇಕಾಗುತ್ತದೆ. ಆದರೆ ಅವರು ಅದನ್ನು ಕೇಳದೆ ಪತ್ರಕರ್ತರ ಸಂಘಟನೆಗಳು ಅಧಿಕೃತವಾಗದೆ. ಅನಧಿಕೃತವಾಗಿದ್ದಾವೆ ಎಂದು ಹೇಳುವದನ್ನು ತೀವ್ರವಾಗಿ ಖಂಡಿಸುತ್ತೇವೆ. ಹಾಗಾದರೆ ಯಾವುದು ಅಧಿಕೃತವಾಗಿದ್ದಾವೆ ಅವುಗಳನ್ನು ತೋರಿಸಬೇಕು. ಯಾವ ಆಧಾರ ಮೇಲೆ ಕರ್ನಾಟಕ ಪ್ರೇಸ್ ಕ್ಲಬ್ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಗಳು ಅನಧಿಕೃತವಾಗಿದ್ದಾವೆಂದು ಎಂದು ಹೇಗೆ ಹೇಳುತ್ತಿರಿ ಎಂದು ಪ್ರಶ್ನಿಸಿದರು. ಪತ್ರಕರ್ತರ ಮೇಲೆ ಗುಂಡಾವರ್ತನೆ ಹಾಗೂ ಅವಮಾನ ಮಾಡಿದನ್ನು ಶಾಸಕ ಜಗದೀಶ ಗುಡಗುಂಟಿ ಅವರು ಬರುವ ಮೂರನಾಲ್ಕು ದಿನಗಳಲ್ಲಿ ಬಹಿರಂಗವಾಗಿ ಕ್ಷೇಮೆ ಕೇಳದೆ ಹೋದರೆ ಶಾಸಕ ಮನೆಗೆ ಮುತ್ತಿಗೆ ಹಾಕುವ ಜೊತೆಗೆ ಜಿಲ್ಲೆಯಾಧ್ಯಂತ ಮತ್ತು ರಾಜಾಧ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಕೆಯನ್ನು ನೀಡಿದರು.
ಕಾನಿಪ ಧ್ವನಿ ತಾ.ಅಧ್ಯಕ್ಷ ಪ್ರಕಾಶ ಕಾಂಬಳೆ, ರೇವಣಸಿದ್ದಯ್ಯ ಮರೇಗುದ್ದಿ ಮಾತನಾಡಿದರು, ರವಿ ದೊಡಮನಿ, ಮಾಂತೇಶ ಕಾರಜೋಳ, ಲಾಲಾಸಾಬ ನಧಾಪ, ಯಶವಂತ ಕಲೂತಿ, ಕಾಳಪ್ಪ ಮೇತ್ರಿ, ಸೈಯದ ಶಿಲೇದಾರ, ಗಿರಮಲ್ಲಪ್ಪ ಕಡಪಟ್ಟಿ, ರವಿ ಶಿಂಗೆ, ಪ್ರವಿಣ ಹೊಳೆಪ್ಪಗೋಳ, ಭರತೇಶ ಪಾನಕ್ಕವರ, ಅಯುಬ ಮುರನಾಳ, ಬಾಬು ದೊಡಮನಿ, ಸುಭಾಸ ಕಾಂಬಳೆ, ರಾಜು ಹಾದಿಮನಿ, ಮಲ್ಲಿಕಾರ್ಜುನ ಹಿರೇಮಠ ಸೇರಿದಂತೆ ಜಮಖಂಡಿ, ಮುಧೋಳ, ಬೀಳಗಿ ಕರ್ನಾಟಕ ಪ್ರೇಸ್ ಕ್ಲಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.