ಅಥಣಿ

ಅಥಣಿ ಹೆಸ್ಕಾಂನಲ್ಲಿ ಭಾರಿ ಭ್ರಷ್ಟಾಚಾರ: ಇಲಾಖೆಗೆ ಕೋಟ್ಯಾಂತರ ರೂ ಹಾನಿ

ಅಥಣಿ ಹೆಸ್ಕಾಂನಲ್ಲಿ ಭಾರಿ ಭ್ರಷ್ಟಾಚಾರ: ಇಲಾಖೆಗೆ ಕೋಟ್ಯಾಂತರ ರೂ ಹಾನಿ

ಅಥಣಿ 26: ಅಥಣಿ ಹೆಸ್ಕಾಂ ಕಚೇರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಥಣಿ ಪಟ್ಟಣ ಮತ್ತು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಹಾಗೂ ನಿರ್ಮಾಣಗೊಂಡ ನೂತನ ಬಡವಾಣೆಗಳಿಗೆ ವಿದ್ಯುತ್ ಕನೆಕ್ಷನ್ ನೀಡುವಾಗ ಸಾಕಷ್ಟು ಅವ್ಯವಹಾರ ನಡೆದ ಬಗ್ಗೆ ಹಲವಾರು ಸಾರ್ವಜನಿಕರಿಂದ ಹೆಸ್ಕಾಂ ಜಾಗೃತದಳ ಪೊಲೀಸ್ ಠಾಣೆ, ಚಿಕ್ಕೋಡಿಗೆ ದೂರು ಹೋಗಿದ್ದವು. ಅದರನ್ವಯ ಹೆಸ್ಕಾಂ ಜಾಗೃತದಳ ನೂತನ ಬಡಾವಣೆ ಹಾಗೂ ಇತ್ಯಾದಿಗಳ ಕಡೆ ಮಾಡಿದ ಕೆಲಸಗಳನ್ನು ಕೂಲಂಕುಷವಾಗಿ ಪರೀಶೀಲನೆ ಮಾಡಿದೆ. ಮೇಲ್ನೋಟಕ್ಕೆ ಅವ್ಯವಹಾರ ಕಂಡು ಬಂದಿದ್ದರಿಂದ ಕೆಲವು ಅಂಶಗಳ ಮಾಹಿತಿಯನ್ನು ಕೇಳಿ ಜಾಗೃತದಳದವರು ನೋಟಿಸ್ ನೀಡಿದ್ದು ಈ ನೋಟಿಸ್ ಮಾಧ್ಯಮಗಳಿಗೆ ಲಭ್ಯವಾಗಿದೆ. 

ಯಾವುದೇ ಪೂರ್ವಾನುಮತಿ ಇಲ್ಲದೆ ನೇರವಾಗಿ ವಿದ್ಯುತ್ ಸಂಪರ್ಕವನ್ನು ಬಡವಾಣೆಗಳಿಗೆ ನೀಡಿದ್ದರಿಂದ ಕೋಟ್ಯಾಂತರ ರೂಪಾಯಿ ಹೆಸ್ಕಾಂ ಇಲಾಖೆಗೆ ಹಾನಿ ಆಗಿದೆ ಎಂಬ ಅಂಶ ಇಲಾಖೆಯ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. 

ಏನಿದು ಪ್ರಕರ ? -  ಚಿಕ್ಕೋಡಿ ಖದ್ದಾಗಿ ಹೆಸ್ಕಾಂ ಜಾಗೃತದಳ ಚಿಕ್ಕೋಡಿ ಪೊಲೀಸ್ ಠಾಣೆ ಕೆಲವು ಕಡೆ ಖುದ್ದಾಗಿ ಪರೀಶೀಲನೆ ಮಾಡಿದೆ. ನಂತರ ಪತ್ರ ದಿ. 3-4-2021 ರಂದು ನಂಃಚಿ/ಪಿ.ಐ./ಜಾಪೊಠಾ/ಚಿಕ್ಕೋಡಿ/934/2021 ನೋಟಿಸ್‌ನ್ನು ಅಥಣಿ ಹೆಸ್ಕಾಂ ಸಾಹಾಯಕ ಕಾರ್ಯನಿರ್ವಾಹಕ ಅಭಿಯಂತರು(ವಿ) ಕ್ಘಾಪಾ ಉಪವಿಭಾಗ ಹೆಸ್ಕಾಂ ಇವರಿಗೆ ನೀಡಿದ್ದು ಈ ನೋಟಿಸಿನಲ್ಲಿ ಹಲ್ಯಾಳ ರಸ್ತೆಯ ಹನುಮಾನ ನಗರ ಡಾಂಗೆ ಲೇಓಟ್(ಬಡಾವಣೆ) ಅಥಣಿ, ಐಹೊಳೆ ಲೇಓಟ್(ಬಡಾವಣೆ) 220 ಕೆ.ವ್ಹಿ.ಎ ಎದುರಿಗೆ ಅಥಣಿ, ಜಾಧವ ಲೇಓಟ್(ಬಡಾವಣೆ) ಚಿಕ್ಕಮಕ್ಕಳ ಆಸ್ಪತ್ರೆ ಹತ್ತಿರ ಅಥಣಿ, ಕರಾಳೆ ಲೇಓಟ್(ಬಡಾವಣೆ) ಹಲ್ಯಾಳ ರಸ್ತೆ ಅಥಣಿ, ಐಹೊಳೆ ಲೇಓಟ್ (ಬಡಾವಣೆ) ಭಾಗೀರಥಿ ನಗರ ಖಿಳೆಗಾಂವ ರಸ್ತೆ ಅಥಣಿ, ಡಾಲರ‌್ಸ ಕಾಲೂನಿ ಲೇಓಟ್(ಬಡಾವಣೆ) ತಂಗಡಿ-ಶಿನ್ನಾಳ ರಸ್ತೆ ಅಥಣಿ ಇವುಗಳು ಅಧಿಕೃತವಾಗಿರುತ್ತದೆಯೋ ಅಥವಾ ಅನಧಿಕೃತವಾಗಿದೆಯೋ ಎಂದು ಹಾಗೂ ಇತರ ಮಾಹಿತಿ ಕೇಳಿದ್ದಾರೆ. 

ಇದಲ್ಲದೆ ಅಶೋಕ ಐಗಳಿ ಗ್ಯಾರೇಜ್ ಮೀರಜ ರಸ್ತೆ ಅಥಣಿ ಇಲ್ಲಿ ರಾ​‍್ಯಬಿಟ್ ವಯರ್ ಅಳವಡಿಸುವ ಬದಲು ನಂಬರ 2 ಎ.ಸಿ.ಎಸ್‌.ಆರ್‌.(ವಿಸೇಲ್) ವಯರ್ ಉಪಯೋಗ ಮಾಡಿದ್ದು ಕಂಡು ಬಂದಿರುತ್ತದೆ. ಸದರಿ ಕಾಮಗಾರಿಗಳ ಅಂದಾಜ ಪತ್ರಿಕೆ ಮತ್ತು ಶೇ 10ಅ ಸುಪರವೈಜರ್ ಚಾರ್ಜ ತುಂಬಿದ ಬಗ್ಗೆ ಮಾಹಿತಿ ನೀಡಬೇಕು, ಡಾಂಗೆ ಲೇಓಟ್ ಜಾಧವ ಆಸ್ಪತ್ರೆ ಹತ್ತಿರ ಅಥಣಿ ಇದರಲ್ಲಿದ್ದ 63 ಕೆ.ವ್ಹಿ.ಎ. ಟಿಸಿಯನ್ನು ಇದ್ದ ಸ್ಥಳ ಬಿಟ್ಟು ಬೇರೆ ಕಡೆ ಸ್ಥಳಾಂತರ ಮಾಡಿದ್ದು. ಅದರ ಪರಿವರ್ತನೆ ಮಾನ್ಯತೆ ಪತ್ರ ಮತ್ತು ಅಂದಾಜ ಪತ್ರಿಕೆ, ಹೆಸ್ಕಾಂ ಕಟ್ಟಬೇಕಾದ 10ಅ ಸುಪರವಾಯಜ್ ಚಾರ್ಜ ತುಂಬಿದ ಬಗ್ಗೆ, ರಾಮು ಗಾಡಿವಡ್ಡರ ಇವರ ಹೆಸರಿನಲ್ಲಿರುವ ಎಚ್‌.ಟಿ ಸ್ಥಾವರ ಅಕೌಂಟ್ ಐಡಿ ನಂ 6012381671 ಬಡವಾಣೆಯಲ್ಲಿ ಎಚ್‌.ಟಿ ಸ್ಥಾವರು ಮುಂಚೆ ಇದ್ದು. ನಂತರ ಎಲ್‌.ಟಿ ಸ್ಥಾವರಕ್ಕೆ ಪರಿವರ್ತನೆ ಮಾಡಿದ್ದು. ಇದು 100 ಕೆ.ವ್ಹಿಟ್ ಇದನ್ನು ಗ್ರಾಹಕರ ಹೆಚ್ಚುವರಿ ಪರಿವರ್ತನೆ ಮಾಡಿದ್ದು. ಮೊದಲಿದ್ದ 100 ಪರಿವರ್ತಗಳನ್ನು ಹೆಸ್ಕಾಂ ಉಗ್ರಾಣಕ್ಕೆ ಜಮಾ ಮಾಡಿದ್ದ ಬಗ್ಗೆ ದಾಖಲೆ ಪೂರೈಸಬೇಕು. 

63 ಕೆ.ವ್ಹಿ.ಎ ವಾಟರ್ ಟ್ಯಾಂಕ್ ಪರಿವರ್ತಕವನ್ನು ಎಚ್‌.ಟಿ ಸ್ಥಾವರವಾಗಿ ಪರಿವರ್ತಿಸಿ ನಂತರ 63 ಕೆ.ವ್ಹಿ.ಎ ಪರಿವರ್ತಕ ಜಮಾ ಮಾಡಿದ ಸೂಕ್ತ ದಾಖಲೆ ಕೇಳಿದ್ದಾರೆ. ಡಾಂಗೆ ಲೇಓಟ್ ಭಾಗಿರಥಿ ನಗರದಲ್ಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಬಗೆಗೆ ಮಾಹಿತಿ ಕೇಳಿದ್ದಾರೆ ಹಾಗೂ ಬೃಂದಾವನ ಹೊಟೇಲ್ ಹಿಂದಿನ ಲೇಓಟ್ ಸರ್ವೆ ನಂ 1246/ಎಚ್ ಇದು ಅಧಿಕೃತವಾಗಿದೆಯೋ ಅಥವಾ ಅನಧಿಕೃವಾಗಿದೆಯೋ ಎಂದು ಮತ್ತು ಬೃಂದಾವನ ಹೋಟೆಲ್ ಪಕ್ಕದಲ್ಲಿರುವ ಗ್ಯಾರೇಜ್ ಗೆ ಅಳವಡಿಸಿದ 100 ಕೆ.ವ್ಹಿ.ಎ ಟಿಸಿ ಅಂದಾಜು ಪತ್ರಿಕೆ ಹಾಗೂ ಸೂಪರವೈಜಿಂಗ್ ಚಾರ್ಜ ಭರಣಾ ಮಾಹಿತಿ ಕೇಳಿದ್ದಾರೆ. 

ಈ ಮೇಲೆ ತಿಳಿಸಿದ ಎಲ್ಲಾ ಮಾಹಿತಿಗಳನ್ನು ನೋಟಿಸಿದ ಮೂಲಕ ಕೇಳಿದ್ದನ್ನು ಗಮನಿಸಿದಾಗ ಅಥಣಿ ವಿಬಾಗದಲ್ಲಿ ಈ ಎಲ್ಲ ಕಡೆ ಭಾರಿ ಅವ್ಯವಹಾರ ಹಾಗೂ ಗೋಲಮಾಲ್ ನಡೆದಿದೆ ಎಂದು ಬಾಸವಾಗುತ್ತಿದೆ ಎಂದು ಸಾರ್ವಜನಿಕರ ಅನಿಸಿಕೆಯಾಗಿದೆ ! 

ಈ ವಿಷಯದ ಕುರಿತು ನೋಟಿಸ್ ಬಂದಿರುವದು ಸತ್ಯ. ನಾನು ಕೆಲವೇ ಕೆಲ ದಿನಗಳ ಹಿಂದೆ ಇಲ್ಲಿಗೆ ವರ್ಗವಾಗಿ ಬಂದಿದ್ದೇನೆ. ಇದರ ಬಗ್ಗೆ ನಾನು ನಮ್ಮ ಸಿಬ್ಬಂದಿ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ನಂತರ ಇದರ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡುತ್ತೇನೆ. 

ವಿಜಯಕುಮಾರ ಕೋಲೆ  

ಹೆಸ್ಕಾಂ ಕಾರ್ಯ & ಪಾಲನೆ ವಿಭಾಗ ಮುಖ್ಯ ಇಂಜನೀಯರ, ಅಥಣಿ. 

ನನಗೆ ಇದರ ಬಗ್ಗೆ ನನಗೆ ಮಾಹಿತಿ ಇಲ್ಲ ಈ ರೀತಿ ನೋಟಿಸ್ ಕೊಟ್ಟಿದ್ದಾರೆ ಎಂದು ಇಂದು ನಿಮ್ಮಿಂದ ತಿಳಿಯಿತು ಇದರ ಬಗ್ಗೆ ಅಥಣಿ ಅಧಿಕಾರಿಗಳನ್ನು ಸಂಪರ್ಕ ಮಾಡಿ  ಮಾಹಿತಿ ಪಡೆದು ತಿಳಿಸುತ್ತೇನೆ. 

ಬಿ ಬಿ ಪಾಟೀಲ  

ಅಧಿಕ್ಷಕ ಅಭಿಯಂತರ, ಚಿಕ್ಕೋಡಿ ವಿಭಾಗ 

ಈ ಪ್ರಕರಣ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾನು ತರಿಸಿಕೊಂಡು ಕೂಲಂಕುಷವಾಗಿ ಪರೀಶೀಲನೆ ಮಾಡಿ ಆಮೇಲೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸುತ್ತೆನೆ. 

ಎಮ್ ಟಿ ನಾಗರಾಜ ಚೀಫ್ ಇಂಜೀನಿಯರ್,

ಹೆಸ್ಕಾಂ ಬೆಳಗಾವಿ ಜಿಲ್ಲೆ. 


ಸುದ್ದಿ ಓದಿ