ಕಂಪ್ಲಿ

ಸಾಮೂಹಿಕ ವಿವಾಹದಿಂದ ಬಡವರಿಗೆ ಹೊಸ ಬದುಕು: ಹೊಸಕೋಟೆ ಜಗದೀಶ

ಸಾಮೂಹಿಕ ವಿವಾಹದಿಂದ ಬಡವರಿಗೆ ಹೊಸ ಬದುಕು:  ಹೊಸಕೋಟೆ ಜಗದೀಶ

ಲೋಕದರ್ಶನ ವರದಿ 

 ಕಂಪ್ಲಿ, 17: ತಾಲ್ಲೂಕಿನ ಮೆಟ್ರಿ ಗ್ರಾಮದಲ್ಲಿರುವ ಸಹಸ್ರಾರು ಭಕ್ತರ ಆರಾಧ್ಯ ದೈವ ಶ್ರೀ ಅಂಬಾದೇವಿ ಹಾಗೂ ಶ್ರೀ ನಾಗಲಿಂಗಪ್ಪ ತಾತ ಸುಕ್ಷೇತ್ರ ಧರ್ಮಮಠದ ದೇವಾಲಯದ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ 10 ಜೋಡಿ ನವವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  

ಶ್ರೀ ನಾಗಲಿಂಗಪ್ಪ ತಾತ ಮಠದ ಶ್ರೀ ಕುಮಾರ ತಾತನವರ ದಿವ್ಯ ಸಾನಿಧ್ಯದಲ್ಲಿ ವಿವಾಹ ಕಾರ್ಯಕ್ರಮ ನಡೆಯಿತು. ಬಳಿಕ ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಮಾತನಾಡಿ, ನಾಗಲಿಂಗಪ್ಪ ತಾತರ ಪವಾಡ ಹಾಗೂ ಮಠದ ಅಭಿವೃದ್ಧಿಯ ಕುರಿತು ವಿವರಿಸಿದರು.  

ಬಳ್ಳಾರಿ, ಕೊಪ್ಪಳ, ವಿಜಯನಗರ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆ ಇಂತಹ ಉಚಿತ ಸಾಮೂಹಿಕ ವಿವಾಹಗಳ ಮೂಲಕ ಕಂಕಣ ಭಾಗ್ಯ ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು.  

ಸಾಮೂಹಿಕ ವಿವಾಹದಿಂದ ಬಡವರು ಆರ್ಥಿಕ ಹೊರೆಯಿಂದ ಮುಕ್ತರಾಗಿ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ನವದಂಪತಿಗಳು ಅನ್ಯೋನ್ಯತೆಯಿಂದ ಜೀವನ ನಡೆಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಬಡತನವನ್ನು ದೂರ ಮಾಡಬೇಕು ಎಂದು ಅವರು ಸಲಹೆ ನೀಡಿದರು.  

ಕಾರ್ಯಕ್ರಮದಲ್ಲಿ ಕುಂಬಾರ ರಾಜಪ್ಪ, ಎಚ್‌. ಗಂಗಾಧರ ಮೆಟ್ರಿ, ನಾಗೇಂದ್ರ​‍್ಪ, ನೇತಕಿ ಗೀರೀಶ, ಎಚ್‌. ಕುಮಾರ, ಉಪ್ಪಾರಹಳ್ಳಿ ಕೊಂಡಪ್ಪ, ಕೆ. ನಾಗಲಿಂಗ, ಪಂಪಾಪತಿ, ಗಾದಿಲಿಂಗ, ಎ. ದೊಡ್ಡನಗೌಡ ಸೇರಿದಂತೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು. ನಂತರ ಭಕ್ತರಿಗೆ ಅನ್ನ ದಾಸೋಹ ಏರಿ​‍್ಡಸಲಾಗಿತ್ತು. 


ಸುದ್ದಿ ಓದಿ