ಬ್ಯಾಡ್ಗಿ

ನ.30ರಂದು ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ

ನ.30ರಂದು ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ

ಬ್ಯಾಡಗಿ: ಕಾರ್ತಿಕೋತ್ಸವದ ಅಂಗವಾಗಿ ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನ.30 ರಂದು ಬೆಳಿಗ್ಗೆ 7 ಗಂಟೆಗೆ ಹಮ್ಮಿಕೊಂಡಿರುವ ಇಷ್ಟಲಿಂಗ ಮಹಾಪೂಜೆ, ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯಶ್ರೀಗಳು ಪಾಲ್ಗೊಳ್ಳಲಿದ್ದಾರೆ.

  ಕಾರ್ಯಕ್ರಮದಲ್ಲಿ ಗುಡ್ಡದಮಲ್ಲಾಪುರ ದಾಸೋಹಮಠದ ಷ.ಬ್ರ.ಮೂಕಪ್ಪಸ್ವಾಮಿಗಳು, ಬಂಕಾಪುರದ ಅರಳೆಲೆಮಠದ ರೇವಣಸಿದ್ದೇಶ್ವರಶ್ರೀಗಳು, ರಾಣೆಬೆನ್ನೂರಿನ ಶನೀಶ್ವರಮಠದ ಶಿವಯೋಗಿಶ್ರೀಗಳು, ಮಳಲಿ ಸಂಸ್ಥಾನಮಠದ ಗುರುನಾಗ ಭೂಷಣಶ್ರೀಗಳು, ಪಟ್ಟಣದ ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನಶ್ರೀಗಳು, ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯಶ್ರೀಗಳು, ಕೂಡಲದ ಗುರುನಂಜೇಶ್ವರ ಮಠದಗುರುಮಹೇಶ್ವರಶ್ರೀಗಳು, ಸಂಗೊಳ್ಳಿ ಹಿರೇಮಠದ ಗುರುಲಿಂಗಶ್ರೀಗಳು, ಅಗಡಿ ಪ್ರಭುಸ್ವಾಮಿಮಠದ ಗುರುಸಿದ್ಧಸ್ವಾಮಿಗಳು, ಕುಮಾರಪಟ್ಟಣ ಪುಣ್ಯಕೋಟಿಮಠದ ಬಾಲಯೋಗಿ ಜಗದೀಶ್ವರಶ್ರೀಗಳು, ಹಂಸಭಾವಿ ವಿರಕ್ತಮಠದ ಸಿದ್ಧಲಿಂಗಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ.

 ಶಾಸಕ ಬಸವರಾಜ ಶಿವಣ್ಣನವರ ಕಾರ್ಯಕ್ರಮ ಉದ್ಘಾಟಿಸಲಿದ್ದು ಅತಿಥಿಗಳಾಗಿ ಶಾಸಕ ಉಜನೇಶ ಬಣಕಾರ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸುರೇಶಗೌಡ ಪಾಟೀಲ, ಮುಖಂಡ ಎಸ್.ಆರ್.ಪಾಟೀಲ, ಬಾಲಚಂದ್ರ ಪಾಟೀಲ, ವಿ.ವಿ.ಹಿರೇಮಠ, ಕೆ.ಇ.ಕಾಂತೇಶ ಸೇರಿದಂತೆ ಗಣ್ಯರು, ಸಾಹಿತಿಗಳು, ಕಲಾವಿದರು ಪಾಲ್ಗೊಳ್ಳಲಿದ್ದಾರೆ, ಕಾರಣ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ತಪ್ಪದೇ ಪಾಲ್ಗೊಳ್ಳುವಂತೆ ಸಾಯಿಮಂದಿರದ ಧರ್ಮದರ್ಶಿ ಮಂಜಯ್ಯಶಾಸ್ತ್ರೀ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಳಿಕ ಸಂಜೆ 7 ಗಂಟೆಗೆ ಕಾರ್ತೀಕೋತ್ಸವಕ್ಕೆ ಡಾ.ವೀರಸೋಮೇಶ್ವರ ಶಿವಾಚಾರ್ಯಶ್ರೀಗಳಿಂದ ಚಾಲನೆ ದೊರೆಯಲಿದೆ.


ಸುದ್ದಿ ಓದಿ