ಚಿಕ್ಕೋಡಿ

ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜನಮಟ್ಟಿ ಚಾಲನೆ

ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜನಮಟ್ಟಿ ಚಾಲನೆ

ಮಾಂಜರಿ  07: ಮೇ ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೋಸ್ಕರ ಇಂದು  ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಡ್ರಮ್ ಸೆಟ್ ಬಾರಿಸುವ ಮೂಲಕ ಚಿಕ್ಕೂಡಿಯ ಕೃಷಿ ಅಧಿಕಾರಿ ಮಂಜುನಾಥ್ ಜನಮಟ್ಟಿ  ಚಾಲನೆ ನೀಡಿದರು.  

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೃಷಿ ಅಧಿಕಾರಿಗಳು, ಮತದಾನ ಒಂದು ನಮ್ಮ ಸಂವಿಧಾನ ನೀಡಿರುವ ಒಂದು ಹಕ್ಕು ಮತ್ತು ವರ. ಯಾರೂ ಕೂಡಾ ಯಾವುದೇ ಆಮಿಷಕ್ಕೆ ಒಳಗಾಗದೇ ಮೇ.10 ರಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು. 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿ​‍್ಡಸಲು ಎಪ್ರೀಲ್‌-11 ರ ವರೆಗೆ ಚುನಾವಣೆ ಆಯೋಗ ಅವಕಾಶ ಕೊಟ್ಟಿದೆ ಇನ್ನೂ ಹೆಸರು ಸೆರೆ​‍್ಡಗೆ ಬಾಕಿ ಇರುವವರು ಹೆಸರನ್ನು ನೊಂದಣಿ ಮಾಡಿಕೊಳ್ಳಲು ಕರೆ ನೀಡಿದರು. ವಿಶೇಷ ಚೇತನರು ಮತ್ತು 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗಿದೆ ಇದರಿಂದಾಗಿ ಈ ಬಾರಿ ಚುನಾವಣೆಯಲ್ಲಿ ಶೇ. 100 ಮತದಾನದ ಗುರಿ ಹೊಂದಲಾಗಿದರ ಎಂದರು.  

ಇಂದು ನಡೆದ ಮತದಾನ ಜಾಗೃತಿ ಜಾತಯಲ್ಲಿ ಮಾಜರಿ ಗ್ರಾಮ್ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಗಳಾದ ವಿರುಪಾಕ್ಷ ಪೋತದಾರ್ ಗ್ರಾಮ ಆಡಳಿತ ಅಧಿಕಾರಿ ಮನೋಜ್ ಕಾಂಬಳೆ  ಸಿಬ್ಬಂದಿ ವರ್ಗದವರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು. 

ಫೋಟೋ ಮಾಂಜರಿ ಗ್ರಾಮದಲ್ಲಿ ಅಯೋಜಿಸಲಾದ ಮತದಾನ ಜಾಗೃತಿ ಜಾತಾಗೆ ಚಾಲನೆ ನೀಡುವಾಗ ಮಂಜುನಾಥ್ ಜನಮಟ್ಟಿ ವಿರುಪಾಕ್ಷ ಪೋತದಾರ್ ಮನೋಜ್ ಕಾಂಬಳೆ ಹಾಗೂ ಶಿಕ್ಷಕರು 


ಸುದ್ದಿ ಓದಿ